PLEASE LOGIN TO KANNADANET.COM FOR REGULAR NEWS-UPDATES

  ಕೊಪ್ಪಳ ನಗರದ ಗವಿಶ್ರೀ ನಗರ ಸೇರಿದಂತೆ ವಿವಿದೆಡೆ ಕಳೆದ ನಾಲ್ಕೈದು ತಿಂಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊಪ್ಪಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು  ಜೂ. 9 ರಂದು ಬಂಧಿಸಿದ್ದು, ಸುಮಾರು 4. 43 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
  ಬಂಧಿತ ಆರೋಪಿಗಳನ್ನು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೊಂಡೂರ ಗ್ರಾಮದ ಮೌಲಾ ಹುಸೇನ @ ಮೌಲಾ @ ಮೌಲಾಲಿ ತಂದೆ ಅಬ್ದುಲ್ ಸತ್ತಾರ ಟಪಾಲವಾಲೆ (23) ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ರಮೇಶ ತಂದೆ ಮರಿಯಪ್ಪ (23) ಎಂದು ಗುರುತಿಸಲಾಗಿದೆ.
  ಕೊಪ್ಪಳದ ಗವಿಶ್ರೀ ನಗರದ 3ನೇ ಕ್ರಾಸ್ ಹತ್ತಿರ ಸಂಶಯಾಸ್ಪದವಾಗಿ ತಿರುಗುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದು, ಆರೋಪಿತರಿಂದ ಸುಮಾರು 162 ಗ್ರಾಂ ಬಂಗಾರದ ಆಭರಣ ಹಾಗೂ 150 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿಗಳು ಕಳೆದ ನಾಲ್ಕೈದು ತಿಂಗಳ ಹಿಂದೆ ಗವಿಶ್ರೀ ನಗರದ ಮಲ್ಲಪ್ಪ ಕುಂಬಾರ, ಮಾರುತಿ ಕಾಲೋನಿಯ ಬನ್ಸೋಡೆ ಮತ್ತು ಯಲಿಗಾರ್ ಎಂಬುವವರ ಮನೆಗಳಲ್ಲಿ ಕಳ್ಳತನ ಮಾಡಿದ್ದರು.  ಈ ಪೈಕಿ ಮೌಲಾ ಹುಸೇನ್ ಈಗಾಗಲೆ ಹಾವೇರಿ ಜಿಲ್ಲೆಯ ವಿವಿಧೆಡೆ ನಡೆದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ರೋಹಿಣಿ ಕಟೋಚ್ ಸೆಪಟ್,  ಕೊಪ್ಪಳ ಡಿಎಸ್‍ಪಿ ರಾಜೀವ್ ಮಾಂಗ್ ಇವರ ಮಾರ್ಗದರ್ಶನದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆಯ ಪಿಐ ವಿಜಯಕುಮಾರ ಬಿರಾದಾರ, ಸಿಬ್ಬಂದಿಗಳಾದ ಸುಭಾಸ, ಶರಣಪ್ಪ, ದೇವೇಂದ್ರ, ಅಮರೇಶ, ಬಕ್ಷೀದಸಾಬ, ಸಯ್ಯದ್ ಗೌಸ್‍ಮೊಹಿದ್ದೀನ, ಪ್ರಸಾದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  ಕಳವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಕೊಪ್ಪಳ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ರೋಹಿಣಿ ಕಟೋಚ್ ಸೆಪಟ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top