ಕೊಪ್ಪಳ : ಕೃಷಿ ಕೂಲಿಕಾರರಿಗೆ ಗಂಗಾಔತಿ ತಾಲೂಕಿನ ಹೊಸ್ಕೆರಾ ವ್ಯಾಪ್ತಿಯಲ್ಲಿ ನೀಡಿರುವ ಸವಳ ಕ್ಯಾಂಪ್ ಗ್ರಾಮದ ಭೂಮಿಯನ್ನು ಸ್ಥಳೀಯ ಭೂ ಮಾಲಿಕರು ಅತಿಕ್ರಮಿಸಿದ್ದಾರಲ್ಲದೇ ನಿರಂತರ ಅಲ್ಲಿಯ ಜನರ ಮೇಲೆ ದೌರ್ಜನ್ಯಮಾಡುತ್ತ ಬಂದಿದ್ದಾರೆ. ಈ ಕ್ಯಾಂಪಿಗೆ ಯಾವುದೇ ಮೂಲಭೂತ ಸೌಕರ‍್ಯ ಒದಗಿಸಿಲ್ಲ. ಪ್ರಾಣಿಗಳ ವಾಸಕ್ಕೂ ಯೋಗ್ಯವಲ್ಲದ ಗುಡಿಸಲುಗಳು ಇಲ್ಲಿವೆ. ರಸ್ತೆ ಬೀದಿ ದೀಪ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ಈ ಕುರಿತು ಪಿಯುಸಿಎಲ್ ಸರ್ಕಾರ ಹಾಗೂ ಜಿಲ್ಲಾಡಳಿತದ ಗಮನಕ್ಕೆ ಹಲವಾರು ಬಾರಿ ತರಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಇದನ್ನು ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ನ್ಯಾಯಾದೀಶ ಸಿ.ಜೆ.ಹುನಗುಂದರವರು ದಿ.೧೧-೫-೨೦೧೪ ರಂದು ಗಮನಕ್ಕೆ ತಂದಾಗ ಸ್ವತಃ ಅವರೇ ಕ್ಯಾಂಪಿಗೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿಯ ಜನರ ಸ್ಥಿತಿ ಗತಿ ತಿಳಿದು ವಿಷಾದಿಸಿದ್ದರು.
ಈ ಹಿನ್ನೆಯಲ್ಲಿ ಕರ್ನಾಟಕ ಮಾನವ ಹಕ್ಕುಗಳ ಆಯೋಗ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಹೆಚ್ ಆರ‍್ಸಿ: ೨೨೩೪/೧೪ ಎಸ್ಬಿ ೧೧. ದಿ ೧೬-೫-೨೦೧೪ರಂದು ಆದೇಶ ನೀಡಿದೆ. ಬಡತನ ರೇಖೆಗಿಂತಲೂ ಕೆಳಗಿರುವ ಸವಳ ಕ್ಯಾಂಪಿನಜನ ಆಂದ್ರ ಹಾಗು ಬೇರೆ ಬೇರೆ ಪ್ರದೇಶಗಳಿಂದ ದುಡಿಯಲು ಬಂದಿದ್ದಾರೆ. ಅವರು ಕನಿಷ್ಠ ಗುಡಿಸಲಿನಲ್ಲಿ ವಾಸವಾಗಿದ್ದು ಮೂಲಭೂತ ಸೌಕರ‍್ಯಗಳಿಂದ ವಂಚಿತರಾಗಿದ್ದಾರೆ. ಸಿಎಲ್ (ಡಿ) ಆಫ್ ಸೆಕ್ಷನ್ ೩ ರ ಪ್ರಕಾರ ರಕ್ಷಣೆ ಮತ್ತು ಆಕ್ಟ್ ೧೯೯೩ರ ಪ್ರಕಾರ ವೆಲ್ಪೇರ್ ಸ್ಟೇಟ್ ಸೌಲಭ್ಯ ಒದಗಿಸಲು ಆದೇಶಿಸಿದ್ದಾರೆ. ಈ ಆದೇಶ ದಿ. ೩೦-೭-೨೦೧೪ರಿಂದ ಅನ್ವಯವಾಗಿದ್ದು ಆರು ವಾರಗಳಲ್ಲಿ ಅನುಷ್ಠಾನಗೊಳಿಸಬೇಕೆಂದಿದೆ.
ಈ ಆದೇಶದಿಂದ ಇನ್ನೂ ಮಾನವ ಹಕ್ಕುಗಳ ಬಗ್ಗೆ ಕಳಕಳಿಯಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ಇದು ಜಿಲ್ಲಾ ಪಿಯುಸಿಎಲ್ ನಡೆಸಿದ ಹೋರಾಟಕ್ಕೆ ದೊರೆತ ವಿಜಯವಾಗಿದೆ. ಜಿಲ್ಲಾಧಿಕಾರಿ ಮೋಹನ್‌ರಾಜ್ ರವರು ಈಗಾಗಲೇ ಕರಡಿ ಆಡಿಸುವ ಕುಟುಂಬಗಳ ಪರಿಸ್ಥಿತಿ ಪರಿಶೀಲಿಸಿ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಅದೇ ರೀತಿ ಈ ಆದೇಶದ ಪ್ರಕಾರ ಸವಳ ಕ್ಯಾಂಪಿನ ಜನರಿಗೂ ನ್ಯಾಯ ಒದಗಿಸುವುರೆಂಬ ನಂಬಿಕೆಯಿದೆ. ಒಂದು ವೇಳೆ ಜಿಲ್ಲಾಡಳಿತ ನಿರ್ಲಕ್ಷಿಸದರೆ ಹೋರಾಟ ಮತ್ತೆ ತೀವ್ರಗೊಳ್ಳಿದೆ ಎಂದು ವಿಠ್ಠಪ್ಪ ಗೋರಂಟ್ಲಿ - ಜಿಲ್ಲಾಧ್ಯಕ್ಷರು ಪಿಯುಸಿಎಲ್, ಅಲ್ಲಾಗಿರಿರಾಜ್ , ಸಿರಾಜ್ ಬಿಸರಳ್ಳಿ- ಕಾರ‍್ಯದರ್ಶಿ,ಸದಸ್ಯರು- ಜೆ.ಭಾರದ್ವಾಜ, ಹೆಚ್.ವಿ.ರಾಜಾಬಕ್ಷಿ, ಬಸವರಾಜ್ ಶೀಲವಂತರ, ಹೆಚ್.ರಘು, ಎಚ್ಚರಿಸಿದ್ದಾರೆ.
0 comments:
Post a Comment