ಹಿಂದೂಸ್ತಾನ್ ಕೊ ಕೊ ಕೋಲಾ ಬ್ರೇ ಪ್ರ ಲಿಮಿಟೆಡ್ ಹಿರೇಬಗನಾಳ
೮ ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಹಿಂದೂಸ್ತಾನ ಕೋ ಕೋ ಕೋಲಾ ಬ್ರೇ ಪ್ರ ಲಿಮಿಟೆಡ್, ಕಂಪನಿಯನ್ನು ಒತ್ತಾಯಿಸಿ ಕಾರ್ಮಿಕರ ಧರಣಿ ೯೧ ನೇ ದಿನಕ್ಕೆ ಕಾಲಿಟ್ಟಿದೆ ಕಂಪನಿಯು ಕಾರ್ಮಿಕರಿಗೆ ಕಡಿಮೆ ವೇತನ ಕೊಟ್ಟು ದುಡಿಸಿಕೊಳ್ಳುವುದಲ್ಲದೇ ಪೂರ್ವದಿಂದ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸದೇ ಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳುತ್ತಾ ಕಾರ್ಮಿಕರನ್ನು ಖಾಯಂ ವತಿಯನ್ನು ವಂಚನೆ ಮಾಡುತ್ತಿದ್ದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಂಪನಿಯು ೮ ವರ್ಷಗಳಿಂಧ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ದುಡಿಮೆ ಮತ್ತು ಶ್ರಮಕ್ಕೆ ತಕ್ಕಂತೆ ವೇತನವನ್ನು ನೀಡಬೇಕೆಂದು ಪತ್ರದ ಮುಖಾಂತರ ಕೋರಲಾಗಿದ್ದು, ಕಾರ್ಮಿಕರು ಎಪ್ರೀಲ್ ೨ ರಿಂದ ಕೆಲಸದ ಅವಧಿಯಲ್ಲಿ ಕಂಪನಿಯು ಕೋಡುತ್ತಿರುವ ಊಟ ಮತ್ತು ಉಪಹಾರ ಸೇವಿಸದೆ ಉಪವಾಸ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಾರೆಂದು ಸಂಘಟನೆಯ ಅಧ್ಯಕ್ಷರಾದ ಚೆನ್ನವೀರಯ್ಯ ಹಿರೇಮಠ ತಿಳಿಸಿದ್ದಾರೆ.
ಕಾರ್ಮಿಕರ ಖಾಯಾಂತಿ ಹೋರಾಟವನ್ನು ಯಶಸ್ವಿಗೊಳಿಸಲು ಕೊಪ್ಪಳ ಜಿಲ್ಲಾಧ್ಯಂತ ಪಗತಿಪರ ಸಂಘಟನೆಯು ಈ ಹೋರಾಟಕ್ಕೆ ಬೆಂಬಲ ಕೊಟ್ಟು ಕಾರ್ಮಿಕರ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಸಂಘಟನೆಯ ಅಧ್ಯಕ್ಷರು ಚೆನ್ನವೀರಯ್ಯ ಹಿರೇಮಠ ಮತ್ತು ಸಂಘಟನೆಯ ಪದಾಧಿಕಾರಿಗಳು ಕರೆ ನೀಡಿದ್ದಾರೆ.
0 comments:
Post a Comment