PLEASE LOGIN TO KANNADANET.COM FOR REGULAR NEWS-UPDATES

 ಸಾವಯವ ಕೃಷಿಯಿಂದ ಅನಾವಶ್ಯಕ ಹಣದ ವ್ಯಯ ತಪ್ಪಲಿದೆ. ನಿರಂತರ ಆದಾಯ, ಉತ್ತಮ ಫಸಲು ಹಾಗೂ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಲಿದೆ ಎಂದು ಕೃಷಿ ವಿಜ್ಞಾನಿ ಮಲ್ಲಿಕಾರ್ಜುನ  ಕೆಂಗನಾಳ ಅಭಿಪ್ರಾಯ ಪಟ್ಟರು. 
ಅವರು ಮಂಗಳವಾರ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಸಾವಯವ ಕೃಷಿ ತರಬೇತಿ ಕಾರ್ಯಗಾರ ಉದ್ದೇಶಿಸಿ ಮಾತನಾಡಿ, ೧೦೦ ಹೇಕ್ಟರ್ ಪ್ರದೇಶದಲ್ಲಿ ೩ ವರ್ಷಗಳ ಕಾಲ ಸಂಸ್ಥೆಯೆ ಕಾರ್ಯಕ್ರಮ ಅನುಷ್ಟಾನಗೊಳಿಸಲಿದೆ ಎಂದು ಸಾವಯವ ಕೃಷಿಯ ಮಹತ್ವದ ಕುರಿತು ತಿಳಿಸಿದರು.
ಗ್ರಾ.ಪಂ. ಸದಸ್ಯ ಮಂಜುನಾಥಗೌಡ್ರು ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ರೈತರು ಇಂದಿನ ಆಧುನಿಕ ಯುಗದ ವೈಜ್ಞಾನಿಕ ಹಾಗೂ ಪಾರಂಪಾರಿಕೆ ಕೃಷಿಯಲ್ಲಿನ ಬದಲಾವಣೆ ಹಾಗೂ ವ್ಯತ್ಯಾಸಗಳನ್ನು ಅರಿತು ಯೋಗ್ಯವಾದದನ್ನು ಅರಿತು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕೆಂದರು.
 ಈಸಂದರ್ಭದಲ್ಲಿ ರಮೇಶಪ್ಪ, ಸತ್ಯಪ್ಪ ಹರಿಜನ, ಅನುವುಗಾರರು ಅಂದಪ್ಪ ಹಡಪದ, ಕ್ಷೇತ್ರಾಧಿಕಾರಿ ಚಿದಾನಂದ ಹಾಗೂ ಇಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹರಪನಹಳ್ಳಿ ಸ್ವೋರ್ಡ್ ಕೆ. ಸಂಸ್ಥೆಯ ಕಾರ್ಯದರ್ಶಿ ಹೆಚ್. ಚನ್ನಬಸಪ್ಪ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

Advertisement

0 comments:

Post a Comment

 
Top