ಹಿಂದಿನ ಜಿಲ್ಲಾಧಿಕಾರಿ ತುಳಿಸಿ ಮದ್ದೇನೇನಿಯವರು ಕಾರ್ಮಿಕ ಮುಖಂಡರಾದ ಭಾರದ್ವಾಜ ಅವರ ಮೇಲೆ ದುರುದ್ದೇಶದಿಂದ ಹಾಕಿದ್ದ ಗಡಿಪಾರು ವಿಚಾರಣಾ ಪ್ರಕರuವನ್ನು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ ಮೇ. ೨೯ ರಂದು ವಿಚಾರಣೆ ನಡೆಸಿ ಅದಕ್ಕೆ ಯಾವುದೇ ಆಧಾರಗಳಿಲ್ಲದ್ದರಿಂದ ಪ್ರಕರಣವನ್ನು ಹಿಂದಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ : ಕಾರ್ಮಿಕ ಹಿತಕ್ಕೆ ನಿರಂತರ ಹೋರಾಟ ಮಾಡುತ್ತಾ ಬಂದಿದ್ದ ಭಾರದ್ವಾಜರವರು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿಯವರ ವರ್ತನೆಯ ವಿರುದ್ದವಾಗಿಯೂ ಹೋರಾಟ ನಡೆಸಿದ್ದರು. ಈ ಕಾರಣದಿಂದ ಹೋರಾಟಗಾರರನ್ನು ಮತ್ತು ಹೋರಾಟವನ್ನೆ ಹತ್ತಿಡಲು ದಿ: ೧೭-೧೦-೨೦೧೨ ರಂದು ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರಬರೆದು ವರದಿ ಪಡೆದು ಸಿ.ಪಿ.ಐ.ಎಂ.ಎಲ್. ಮುಖಂಡ ಭಾರದ್ವಜ ಅವರನ್ನು ಗಡಿಪಾರು ಮಾಡುವ ಕುರಿತು ನೀಡಿದ ಪತ್ರದ ಆಧಾರದ ಮೇಲೆ ಎಮ್.ಎ.ಜಿ ೬೬/೨೦೧೨-೧೩ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದರು.
ಎರಡು ವರ್ಷದ ವರೆಗೆ ನಡೆದ ವಿಚಾರಣೆಯಲ್ಲಿ ಆರೋಪಿತರ ಪರವಾಗಿ ಹಾಷ್ಮುದ್ದಿನ್ ವಕೀಲರು. ವಕಾಲತ್ತು ನಡೆಸಿದರು, ಕಾರ್ಮಿಕ ಮುಖಂಡ ಭಾರದ್ವಾಜರ ಮೇಲೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು. ಒಂದರಲ್ಲಿ ಜಿಲ್ಲಾಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿದ್ದು. ಮತ್ತೊಂಧು ಪ್ರಕರಣದಲ್ಲಿ ಗಂಗಾವತಿ ಜೆಎಂಎಫ್‌ಸಿ ನ್ಯಾಯಾಲಯವೂ ನಿರ್ದೋಷಿ ಎಂಧು ತೀರ್ಪು ನೀಡಿದೆ. ಎರಡು ಪ್ರಕರಣದಲ್ಲಿ ಪೋಲಿಸರು ತನಿಖಾ ವರದಿಯಲ್ಲಿ ಅವರೇ ಸುಳ್ಳು ಪ್ರಕರನವೆಂದು ಖುಲಾಸೆಗೊಳಿಸಿದ್ದರಿಂದ ಜನಪರ ಹೋರಾಟ ಮಾಡುವವರನ್ನು ಗಡಿಪಾರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ವಾದಮಂಡಿಸಿದರು. ವಿಚಾರಣೆಯಲ್ಲಿ ಉಪಸ್ಥಿತರಿದ್ದ ಗಂಗಾವತಿ ನಗರ ಪೋಲಿಸ್ ಠಾಣೆಯ ಪಿ.ಐ.ಕೆ, ಕಾಳಿಕೃಷ್ಣರು ಸಹಿತ ೨೦೦೮ ರಿಂದ ಭಾರದ್ವಾಜವರ ವಿರುದ್ಧ ಯಾವುದೇ ದೂರುದಾಖಲಾಗಿಲ್ಲ. ಶಾಂತಿಯುತವಾಗಿ ಅವರು ಹೋರಾಟ ಮಾಡುತ್ತ ಸಾರ್ವಜನಿಕರಿಗೆ ಯಾವುದೇ ತೊಂದರೆ ಮಾಡಿಲ್ಲವೆಂಧು ತಿಳಿಸಿದ್ದರಿಂದ ಜಿಲ್ಲಾಧಿಕಾರಿಗಳು ಪ್ರಕರಣವನ್ನು ವಜಾಗೊಳಿಸಿದರು.
ಇದರಿಂದ ನ್ಯಾಯಕ್ಕೆ ಜಯದೊರೆತಂತಾಗಿದೆ. ಹಲವಾರು ಹಗರಣಗಳಿಗೆ ಗುಮಾನಿಯಾಗಿದ್ದ, ಗಿಣಗೇರಿ ವಿಮಾನ ನಿಲ್ದಾಣವನ್ನೆ ಖಾಸಗಿ ಕಂಪನಿಗೆ ಮಾರಿ ಹೋದ ತುಳಿಸಿ ಮದ್ದಿನೇನಿಯವರ ದುರುದ್ದೇಶ ಈಡೇರದೆ ಹೋರಾಟಕ್ಕೆ ಜಯವಾಗಿದೆ. ನ್ಯಾಯವನ್ನು ಎತ್ತಿ ಹಿಡಿದ ಜಿಲ್ಲಾಧಿಕಾರಿಗಳಿಗೆ ಹಾಗೂ ಬೆಂಬಲಿಸಿದ ಮಾಧ್ಯಮದ ಮಿತ್ರರಿಗೂ ಮತ್ತು ಹೋರಾಟಗಾರರಿಗೆಲ್ಲ ಪಿಯೂಸಿಎಲ್‌ನ ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಮುಖಂಡರಾದ ಬಸವರಾಜ ಶೀಲವಂತರ, ಡಿ.ಎಚ್‌ಪೂಜಾರ, ಅಲ್ಲಾ ಗಿರಿರಾಜ, ರಾಜಾಬಕ್ಷಿ, ಸಿರಾಜ ಬಿಸರಳ್ಳಿ, ಎಚ್.ರಘು, ಮೈಲಪ್ಪ ಬಿಸರಳ್ಳಿ, ಹನುಮಂತಪ್ಪ ಹೊಳೆಯಾಚೆಯವರು ಧನ್ಯವಾದ ಹೇಳಿದ್ದಾರೆ.
0 comments:
Post a Comment