PLEASE LOGIN TO KANNADANET.COM FOR REGULAR NEWS-UPDATES

 ೧೬ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆ ಕೊಪ್ಪಳ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ಪರ್ಧಿಸದೆ ಇರುವುದಕ್ಕೆ ತಮ್ಮ ಜೆಡಿಎಸ್ ಯುವ ಘಟಕದ ನಗರ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನೆಡಸಿ ಜಾತ್ಯಾತೀತ ಮನೋಭಾವನೆಯುಳ್ಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಬಸವರಾಜ್ ಹಿಟ್ನಾಳ ಪರವಾಗಿ ಮತಯಾಚನೆಗೆ ಕೊಪ್ಪಳ ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸೈಯದ್ ಮಹೇಮೂದ್ ಹುಸೇನಿ ಯವರ ನೇತೃತ್ವದ ಯುವಕರ ಪಡೆ ಮಂಗಳವಾರ ಮನೆ ಮನೆಗೆ ತರಳಿ ಕಾಂಗ್ರೆಸ್ ಪರ ಮತಯಾಚಿಸಿದರು.
ಕೊಪ್ಪಳದಲ್ಲಿ ಹಿಂದು, ಮುಸ್ಲಿಂಮರು ಭಾವೈಕ್ಯತೆಯಿಂದ ಕೊನೆಯ ಉಸಿರು ಇರುವವರೆಗೂ ಕೂಡಿಬಾಳಬೇಕು.  ಕೋಮುವಾದಿ ಬಿಜೆಪಿ ಪಕ್ಷ ಗೆಲ್ಲಬಾರದು ಮೋದಿ ಹಠಾವೋ ದೇಶ ಬಚಾವೋ ಎಂಬಂತೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಯಾರು ಬೆಂಬಲಿಸಬಾರದೆಂದು ಇದೇ ಸಂದರ್ಭದಲ್ಲಿ ಸೈಯದ್ ಮಹೇಮೂದ್ ಹುಸೇನಿ ಮನವಿ ಮಾಡಿಕೊಂಡ ಅವರು ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಬಗ್ಗೆ ವೈಯುಕ್ತಿಕವಾಗಿ ಏನೂ ಹೇಳುವುದಿಲ್ಲ ಎಂದು ನಿರಾಕರಿಸಿದ ಅವರು ಆದರೆ ಯಾವುದೇ ಕರಣಕ್ಕೂ ಬಿಜೆಪಿ ಪಕ್ಷ ಗೆಲ್ಲಬಾರದೆಂದು ಜನತೆಗೆ ಮನವರಿಕೆಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ್ ಹಿಟ್ನಾಳ ರವರನ್ನು ಗೆಲ್ಲಿಸುವಂತೆ ಮನೆ,ಮನೆಗೆ ತೆರಳಿ ಪ್ರಚಾರಮಾಡಿದರು.
  ರಾಜ್ಯದಲ್ಲಿನ ೨೮ ಕ್ಷೇತ್ರಗಳ ಈ ಲೋಕಸಭೆ ಚುನಾಚಣೆಯಲ್ಲಿ ಯಾವಕ್ಷೇತ್ರದಲ್ಲಿ ನಮ್ಮ ಜಿಡಿಎಸ್ ಅಭ್ಯರ್ಥಿ ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆಯೋ ಅವರೆಲ್ಲರನ್ನು ಬೆಂಬಲಿಸಿ ನಮ್ಮ ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿಯವರಿಗೆ ಶಕ್ತಿಕೊಡಬೇಕು ಅವರ ಕೈ ಬಲಪಡಿಸಬೇಕು ಎಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲವೋ ಅಲ್ಲಿಯ ವಾತಾವರಣಕ್ಕನುಸಾರವಾಗಿ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಜಾತ್ಯತೀತ ಮನೋಭಾವನೆಯುಳ್ಳ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ್ ಹಿಟ್ನಾಳ ಗೆಲುವು ಸಾಧಿಸುವುದು ಆ ಸೂರ್ಯ ಚಂದ್ರನಷ್ಟೆ ಸತ್ಯವೆಂದು ಕೊಪ್ಪಳ ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಯಯದ್ ಮಹೇಮೂದ್ ಹುಸೇನಿ ಹೇಳಿದರು.
  ಈ ಸಂದರ್ಭದಲ್ಲಿ ಜೆಡಿಎಸ್ ಪದಾಧಿಕರಿಗಳಾದ ಮಹಮ್ಮದ್ ಕುಷ್ಟಗಿ, ಖಲೀಲ, ಬಶೀರ, ನಾಗರಾಜ್, ಮನೋಹರ, ಸಂತೋಷ, ಇಸಾಖ ಖಾಜಿ, ಬಶೀರ, ಬಾಬಾ ಮೆಕ್ಯಾನಿಕ್ ಸೇರಿದಂತೆ ನೂರಾರೂ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಈ ಅದ್ಧೂರಿ ಮತಯಾಚನೆ ಸಂದರ್ಭದಲ್ಲಿ ಪಾಲ್ಗೊಂಡಿದರು.

Advertisement

0 comments:

Post a Comment

 
Top