PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ-೧೫, ಭಾಗ್ಯನಗರ ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಕೆ.ಬಸವರಾಜ ಹಿಟ್ನಾಳ ಪರ ಶಾಸಕ ರಾಘವೇಂದ್ರ ಹಿಟ್ನಾಳ ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ ಅವರು ಬಿರುಸಿನ ಮತಯಾಚನೆ ಮಾಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಯು.ಪಿ.ಎ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳ ಗಾಳಿ ಇದೇ ಹೊರೆತು ಇಲ್ಯಾವುದೇ ಮೋದಿ ಗಾಳಿ ಇಲ್ಲ.  ರಾಜ್ಯದ ಮತದಾರರು ಕಾಂಗ್ರೆಸ್ ಸರ್ಕಾರ ನೀಡಿರುವ ಜನಪರ ಯೋಜನೆಗಳಿಂದ ಸಂತುಷ್ಟಗೊಂಡಿದ್ದು ದಿನಾಂಕ ೧೭/೦೪/೨೦೧೪ ರಂದು ನಡೆಯುವ ಮಹಾನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಜಯಬೇರಿ ಗೊಳ್ಳಲಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರು ಬಿ.ಜೆ.ಪಿ ಅವರು ಮತ ಕೇಳುವ ನೈತಿಕತೆಯನ್ನು ಕಳೆದುಕೊಂಡು ಮೋದಿಯನ್ನು ಬಿಂಬಿಸುತ್ತಿರುವುದು ಇವರ ಸೋಲಿನ ಸಂಖ್ಯೇತವಾಗಿದೆ. ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ, ಇಲ್ಲಿ ಕೇವಲ ಕಾಂಗ್ರೆಸ್ ಸರ್ಕಾರದ ಹಾಗೂ ಮುಖ್ಯಮಂತ್ರಿ ಸಿದ್ರಾಮಯ್ಯನವರ ಜನಪ್ರಿಯ ಯೋಜನೆಗಳ ಅಲೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂದಣ್ಣ ಅಗಡಿ, ಯಮನಪ್ಪ ಕಬ್ಬೇರ, ಪ್ರಸನ್ನ ಗಡಾದ, ಶ್ರೀನಿವಾಸ ಗುಪ್ತಾ, ಹೊನ್ನೂರಸಾಬ ಭೈರಾಪೂರ, ಕೃಷ್ಣಾ ಇಟ್ಟಂಗಿ, ಚನ್ನಪ್ಪ ತಟ್ಟಿ, ಕೃಷ್ಣ ಕಬ್ಬೇರ್, ದಾನಪ್ಪ ಕವಲೂರ, ತುಕಾರಾಮಪ್ಪ ಗಡಾದ, ವೀರಣ್ಣ ಅಕ್ಕಸಾಲಿ, ನಿಂಗಪ್ಪ ಅಂಚಿನಮನಿ, ಹುಸೇನಪೀರಾ ಚಿಕನ್, ಭಾಗ್ಯನಗದ ಕಾಂಗ್ರೆಸ್ ಪಕ್ಷದ ದುರೀಣರು, ಕಾರ್ಯಕರ್ತರು, ಮತಯಾಚನೆ ಪಾದಯಾತ್ರೆಯಲ್ಲಿ ಭಾಗವಹಿಸದ್ದರೆಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top