.jpg)
೦೨.೦೪.೨೦೧೪ ರಂದು ಕಿನ್ನಾಳ ಗ್ರಾಮದಲ್ಲಿ ಬಿ.ಜೆ.ಪಿ ಅಭ್ಯರ್ಥಿಯಾದ ಸಂಗಣ್ಣ ಕರಡಿ ಅವರು ಕಿನ್ನಾಳ ಗ್ರಾಮದಲ್ಲಿ ಪಾದಯಾತ್ರೆಯನ್ನು ಕೈಕೊಂಡು ನಂತರ ಬಹಿರಂಗ ಸಭೆಯನ್ನು ಉದ್ದೇಶಿಸಿ ತಮ್ಮನ್ನು ಬಹುಮತದಿಂದ ಗೆಲ್ಲಿಸಲು ಮತಯಾಚಿಸಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಹಾಲಪ್ಪ ಆಚಾರ, ಗಂಗಾವತಿ ಕ್ಷೇತ್ರದ ಮಾಜಿ ಶಾಸಕರು ಪರಣ್ಣ ಮನವಳ್ಳಿ, ಗಂಗಾವತಿ ಗ್ರಾಮೀಣ ಭಾಗದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಯ್ಯಸ್ವಾಮಿ, ನವಿನ ಗುಳಗಣ್ಣವರ. ವಿರುಪಾಕ್ಷಪ್ಪಾ ಸಿಂಗನಾಳ, ಮಾಜಿ ಸಚಿವರಾದ ವಿರುಪಾಕ್ಷಪ್ಪಾ ಅಗಡಿ, ಡಾ:ಕುರರ್ತಕೋಟಿ, ಕಿನ್ನಾಳ ಗ್ರಾ.ಪಂ ಸದಸ್ಯರಾದ ಶೇಖರಪ್ಪಾ ಹುದ್ಧಾರ, ಉದಯ ಚಿತ್ರಗಾರ, ಮಹಾದೇವಯ್ಯ ಹಿರೇಮಠ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೆ.ಜೆ.ಪಿ ತೊರೆದು
ಬಿ ಜೆ ಪಿ ಪಕ್ಷಕ್ಕೆ ಯುವ ಮುಖಂಡರಾದ ಸಿದ್ಧು ಲಕ್ಕುಂಡಿ, ಮಹೇಶ ವಾಲ್ಮೀಕಿ, ರಮೇಶ ಕೋವಿ, ಪುಂಡಲೀಕ ಕೋಳಿ, ಮೋತಿಲಾಲ ದಲಬಂಜನ್, ಬಿ.ಎಸ್.ಆರ್ ತೊರೆದು ಮುಂಖಡರಾದ ವಿರೇಶ ಬಳಿಘಾರ್, ಮಹೇಶ ಯಲಿಗಾರ, ವಿರೇಶ ಬೆಟಗೇರಿ, ಓಂಪ್ರಕಾಶ ಸೆರ್ಪಡೆಯಾದರು. ವೆಂಕಟೇಶ ಪುರೋಹಿತ ಸ್ವಾಗತಿಸಿದರು, ಕಮ್ಮಾರ ನಿರೂಪಣೆಯನ್ನು ಮಾಡಿದರು. ಶಿವುಕುಮಾರ ಖೇಣಿ ವಂದನಾರ್ಪಣೆ ಯೊಂದಿಗೆ ಸಭೆಯನ್ನು ಮುಕ್ತಾಯ ಗೊಳಿಸಿದರು.
0 comments:
Post a Comment