PLEASE LOGIN TO KANNADANET.COM FOR REGULAR NEWS-UPDATES

 ಅಂತರ್‌ರಾಷ್ತ್ರ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೊಪ್ಪಳದ ಪ್ರತಿಷ್ಠಿತ ಕರಾಟೆ ಸಂಸ್ಥೆಯಾದ ಝೆನ್ ಕರಾಟೆ ಐಕೀ ಡೂ  ಸಂಸ್ಥೆಯಿಂದ ದಿನಾಂಕ : ೦೬/೦೪/೨೦೧೪ ರಿಂದ ೧೫/೦೪/೨೦೧೪ ರವರೆಗೆ ೧೦ ದಿನಗಳವರೆಗೆ ಉಚಿತ ಕರಾಟೆ ತರಬೇತಿ ಶಿಬಿರವನ್ನು  ಶಾಸಕರ ಮಾದರಿಯ ಹಿರಿಯ ಪ್ರಥಮಿಕ ಶಾಲೆ ಆವರಣ, ನಗರಸಭೆ ಹತ್ತಿರ ಕೊಪ್ಪಳ ದಲ್ಲಿ ಪ್ರತಿ ದಿನ ಸಂಜೆ ೫.೩೦ ಗಂಟೆಯಿಂದ ೬.೩೦ ರವರೆಗೆ ತರಬೇತಿ ನೀಡಲಾಗುತ್ತದೆ. ದಿನಾಂಕ. ೦೬/೦೪/೨೦೧೪ ರ ಒಳಗಾಗಿ ನಿಮ್ಮ ಹೆಸರುಗಳನ್ನು ನೋಂದಾಯಿಸಬೇಕು. ತರಬೇತಿಯಲ್ಲಿ ಕರಾಟೆಯ  ಪ್ರಾಥಮಿಕ ತರಬೇತಿ, ಆತ್ಮರಕ್ಷಣೆಯ ರಕ್ಷಣಾತ್ಮಕ ತಂತ್ರಗಳು, ಮತ್ತು ವ್ಯಾಯಾಮ, ಧ್ಯಾನ, ಮೊದಲಾದ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿ ಶಿಬಿರದಲ್ಲಿ ಯುವಕ/ಯವತಿಯರು, ವಿಧ್ಯಾರ್ಥಿಗಳು ಮತ್ತು ಕ್ರೀಡಾಸಕ್ತರು ಪಾಲ್ಗೊಳ್ಳಬಹುದು. ಯುವತಿಯರಿಗೆ ವಿಶೇಷ ತರಬೇತಿ ನೀಡಲಾಗುವ ಈ ಕರಾಟೆ ಸಂಸ್ಥೆಯ ತರಬೇತಿ ಶಿಬಿರದ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದು ಕರಾಟೆ ಕೋಚ್ ಶ್ರೀನಿವಾಸ ಪಂಡಿತ ಮತ್ತು ಸಂಸ್ಥಾಪಕ ಸೆನ್‌ಸೈ ಮಲ್ಲಿಕಾರ್ಜುನ ಕೊತಬಾಳ   ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ.
ಕರಾಟೆ ಕೋಚ್ ಶ್ರೀನಿವಾಸ ಶಂ.ಪಂಡಿತ. ಮೊ : ೯೪೪೮೮೬೭೯೦೯, ೯೦೩೬೮೩೮೦೭೯ ಸಂಪರ್ಕಿಸಿರಿ.

ತರಬೇತಿ ಸ್ಥಳ : ಶಾಸಕರ ಮಾದರಿಯ ಹಿರಿಯ ಪ್ರಥಮಿಕ ಶಾಲೆ ಆವರಣ, ನಗರಸಭೆ ಹತ್ತಿರ ಕೊಪ್ಪಳ.
ಸಮಯ : ಸಂಜೆ ೫.೩೦ ಗಂಟೆಯಿಂದ ೬.೩೦ ರವರೆಗೆ.
ದಿನಾಂಕ. ೦೬/೦೪/೨೦೧೪ ರ ಒಳಗಾಗಿ ನಿಮ್ಮ ಹೆಸರುಗಳನ್ನು ನೋಂದಾಯಿಸಿರಿ.                    

Advertisement

0 comments:

Post a Comment

 
Top