PLEASE LOGIN TO KANNADANET.COM FOR REGULAR NEWS-UPDATES



ಗಂಜಿಬಟ್ಟೆ ಹಾಕಿಕೊಂಡು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಶೋ ಮಾಡುವ ಜನರ ಒಲವು ಬಿಜೆಪಿಯ ನರೇಂದ್ರ ಮೋದಿಕಡೆ ಇದೆ ಆದರೆ ದೇಶದ ಬಡವರ್ಗ ಜನಸಾಮಾನ್ಯರ ಒಲವು ಕಾಂಗ್ರೆಸ್ ಪಕ್ಷದ ಕಡೆ ಹೆಚ್ಚಾಗಿರುವುದರಿಂದ ಇದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಧಿಕ ಸ್ಥಾನ ಸಿಗಲಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸುರೇಶ ದೇಸಾಯಿ ಹೇಳಿದರು.
   ಗುರುವಾರ ಮಾಧ್ಯಮದೊಂದಿಗೆ ಲೋಕಸಭೆ ಚುನಾವಣೆ ಕುರಿತು ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದ    ಅವರು  ಗಂಜಿಬಟ್ಟೆ ಹಾಕಿಕೊಂಡು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಶೋ ಮಾಡುವ ಜನ ಇರುವುದು ಬೆರಳೆಣಿಕೆಯಷ್ಟು ಮಾತ್ರ ಆದರೆ ದೇಶತುಂಬಾ ಜನಸಾಮಾನ್ಯರೆ ಹೆಚ್ಚಾಗಿರುವ ನಮ್ಮ ದೇಶದಲ್ಲಿನಬಡವರ್ಗ,ನಿರ್ಗತಿಕವರ್ಗ,ಜನಸಾಮಾನ್ಯವರ್ಗ ರೈತವರ್ಗ ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಯುವಕರು ಸೇರಿದಂತೆ ಸಾಮಾನ್ಯವರ್ಗದ ಜನರ ಒಲವು ಕಾಂಗ್ರೆಸ್ ಪಕ್ಷದ ಕಡೆ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳೆ ಹೆಚ್ಚು ಸ್ಥಾನದಲ್ಲಿ ಜಯಗಳಿಸಲಿದ್ದಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 
  ಮುಂದುವರೆದು ಮಾತನಾಡಿದ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ್ ಹಿಟ್ನಾಳ ಒಬ್ಬ ಅನುಭವಿ ರಾಜಕಾರಣಿಯಾಗಿದ್ದು ಕನ್ನಡದ ಜೊತೆಗೆ ಹಿಂದಿ,ಇಂಗ್ಲೀಷ ಭಾಷೆಕೂಡಾ ಬಲ್ಲವರಾಗಿದ್ದಾರೆ ಈ ಭಾಗದ ಸಮಸ್ಯಗಳಿಗೆ ಸ್ಪಂದನೆ ನೀಡಿ ಅದರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಈ ಭಾಗದ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸಲು ಅವರನ್ನು ಆಯ್ಕೆಮಾಡುವುದರ ಮೂಲಕ ಈ ಭಾಗದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸುರೇಶ ದೇಸಾಯಿ ಹೇಳಿದರು.
   ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. 

ಹೈ.ಕ ಅಭಿವೃದ್ಧಿಗಾಗಿ ೩೭೧ ಕಲಂ ಜಾರಿಗೆ ತಂದಿರುವುದು ಕಾಂಗ್ರೆಸ್ ಪಕ್ಷ  : ಪಟೇಲ್

ಕೊಪ್ಪಳ,ಏ,೦೩ ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ೩೭೧(ಜೆ)ಕಲಂ ಜಾರಿಗೆ ತಂದು ಈ ಭಾಗದ ಸರ್ವತೊಮುಖ ಅಭಿವೃದ್ದಿಗಾಗಿ ಶ್ರಮಿಸುತ್ತಿರುವುದು ನಮ್ಮ ಕಾಂಗ್ರೆಸ್ ಪಕ್ಷವೆಂದು ಕೊಪ್ಪಳ ನಗರಸಭೆಯ ಉಪಾಧ್ಯಕ್ಷ ಹಾಗೂ ಕಂಗ್ರೆಸ್ ಪಕ್ಷದ ಮುಖಂಡ ಅಲ್ಪಸಂಖ್ಯಾತ ವರ್ಗದ ನಾಯಕ ಅಮ್ಜದ್ ಪಟೇಲ್ ಹೇಳಿದರು.
         ಗುರುವಾರ ಮಾಧ್ಯಮದೊಂದಿಗೆ ಲೋಕಸಭೆ ಚುನಾವಣೆ ಕುರಿತು ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದ  ಅವರು ೩೭೧ ಜಾರಿಗೆ ಯಿಂದ ಈ ಭಾಗದ ಎಲ್ಲರಿಗೆ ಅದರ ಲಾಭ ದೊರೆಯಲಿದೆ ಇದನ್ನು ಅರೆತುಕೊಂಡ ಎಲ್ಲರೂ ಕಾಂಗ್ರೆಸ್ ಪಕ್ಷಮಾತ್ರ ಬೆಂಬಲಿಸುತ್ತಾರೆ ಇದರ ಸಮರ್ಪಕ ಅನುಷ್ಟಾನದಿಂದ ಈ ಭಾಗ ಸರ್ವತೊಮುಖ ಅಭಿವೃದ್ದಿ ಹೊಂದಲಿದ್ದು ಇದಕ್ಕೆ ಈ ಭಾಗದ ಜನರ ಬೆಂಬಲ ಕಾಂಗ್ರೆಸ್‌ಗೆ ದೊರೆಯಲಿದೆ ಎಂದರು.
    ಮುಂದುವರೆದು ಮಾತನಾಡಿದ ಅವರು ದೇಶದಲ್ಲಿ ಯಾವುದೇ ರೀತಿಯಲ್ಲಿ ಮೋದಿ ಅಲೆ ಇರುವುದಿಲ್ಲ  ಇಂತಹ ಅಲೆಗಳಿಗೆ ಲೆಕ್ಕಿಸದೆ ಈ ಭಾಗದ ಜನಸಾಮಾನ್ಯರು ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ ೩೭೧ ಕಲಂ ಜಾರಿಗೆ ವಿಷಯದಲ್ಲಿ ಬಿಜೆಪಿ ಪಕ್ಷದವರು ವಿರೋಧವ್ಯಕ್ತ ಪಡಿಸಿರುವುದು ಯಾರು ಮರೆಯುವಂತಿಲ್ಲ ಎಂದ ಅವರು ನಮ್ಮ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳರವರು ಸುಮಾರು ಒಂದು ಲಕ್ಷಮತಗಳ ಅಂತರದಿಂದ ಜಯಗಳಿಸುತ್ತಾರೆಂದು ನಗರಸಭಾ ಉಪಾಧ್ಯಕ್ಷ ಅಮ್ಜದ್ ಪಟೇಲ್ ದೃಢವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಸುರೇಶ್ ದೇಸಾಯಿ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. 

Advertisement

0 comments:

Post a Comment

 
Top