.jpg)
ಇವರು ದಿ.೦೩.೦೪.೨೦೧೪ ರಂದು ಅಳವಂಡಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದಿನ ಬಿಜೆಪಿ ಸರಕಾರವು ಸಿಂಗಟಾಲೂರು ಏತನಿರಾವರಿ ಯೋಜನೆಗೆ ಅನುಧಾನ ಬಿಡುಗಡೆಗೊಳಿಸಿ ೪೦ ಸಾವಿರ ಎಕರೆ ಪ್ರದೇಶ ನಿರಾವರಿ ಯಾಗುವ ಹಿನ್ನಲೆಯಲ್ಲಿ ಯೋಜನೆ ಜಾರಿಗೊಳಿಸಿದ್ದು ಹೆಮ್ಮೆಯ ವಿಚಾರ ಆದರೆ ಈಗಿನ ಸರಕಾರ ಮತ್ತು ತಿಂಗಳಾದರು ಕಾಲುವೆ ಕಾಮಗಾರಿಗೆ ಯಾವುದೇ ಅನುದಾನ ಬಿಡುಗಡೆ ಕಾಮಗಾರಿ ಅರ್ಧಕ್ಕೆ ನಿಂತವೇ ರಾಜ್ಯದಲ್ಲಿ ಗ್ರಾಮಂತರ ಪ್ರದೇಶ ಅತೀ ಹೆಚ್ಚು ಹೈಮಾಸ್ಕ ದೀಪಗಳನ್ನು ಮಂಜೂರು ಮಾಡಿದೆ ದಲಿತರ
ಕಾಲೋನಿಗಳಲ್ಲಿ ಶಿಶಿ ರಸ್ತೆ ಮತ್ತು ಚರಂಡಿ ನಿರ್ಮಾಣವಾಗಿದೆ ಆದರೆ ಈಗಿನ ಸರಕಾರ ಕಾಡಾ ಇಲಾಖೆಯಿಂದ ಎಸ್ ಸಿ ಮತ್ತು ಎಸ್ ಟಿ ಯೋಜನೆಯಡಿ ಮಂಜೂರು ಮಾಡಲಾಗಿದ್ದ ಕಾಮಗಾರಿಗಳನ್ನು ರದ್ದುಗೊಳಿಸಿರುವರು ದಲಿತರ ಬಗ್ಗೆ ಇರುವ ತಾತ್ಸರ ಭಾವನೆಯನ್ನು ತರುತ್ತದೆ ಎಂದು ಮಾತನಾಡಿದರು.
ನಗರಸಭೆಯ ಮಾಜಿ ಅಧ್ಯಕ್ಷರಾದ ಗವಿಸಿದ್ದಪ್ಪ ಕಂದಾರಿ ಮಾತನಾಡಿ ಕಾಂಗ್ರೆಸ್ ಮಿತ್ರ ಪಕ್ಷಗಳ ನೂರಕ್ಕು ಹೆಚ್ಚಿನ ಹಗರಣಗಳನ್ನು ಮಾಡುವುದರ ಮೂಲಕ ಶತಕವನ್ನು ಬಾರಿಸಿವೆ.
ಪಾತಾಳದಲ್ಲಿ ಹಡಗಿರುವ ಸಬ್‌ಮೇರಿನ ಖರದಿಯಿಂದ ಹಿಡಿದು ಆಕಾಶದಲ್ಲಿ ಹಾರಾಡುವ ಹೇಲಿಕಾಪ್ಟರ್ ಖರದಿಯ ತನಕ ಹಗರಣ ನಡೆಸಿದೆ. ರೈತರ ಸಾಲಮನ್ನ ಹೆಸರಿನಲ್ಲಿ, ಸಮರದಲ್ಲಿ ಮಡಿದ ಯೋಧರ ಹೆಸರಿನಲ್ಲಿ ಬಡವರಿಗೆ ಹಂಚುವ ಆಹಾರ ಧ್ಯಾನ್ಯದ ಹೆಸರಿನಲ್ಲಿ ದೇಶದ ಪ್ರತಿಷ್ಠೆ ಹೆಚ್ಚಿಸಬೇಕಾದ ಕ್ರೀಡಾಕೂಟದಲ್ಲಿ, ದೇಶದ ಶಕ್ತಿಮೂಲ ಕಲ್ಲಿದ್ದಲಿನ ಗಣಿಗಳ ಹರಾಜು ಹಾಕುವ ಪ್ರಕ್ರೀಯೆಗಳಲ್ಲಿ ಎಲ್ಲದರಲ್ಲು ಹಗರಣಗಳನ್ನು ನಡೆಸಿದ ಕುಖ್ಯಾತಿ ಕಾಂಗ್ರೆಸ ಕೂಟದಾಗಿದೆ. ಎಂದು ಮಾತನಾಡಿದರು.
ಬಿಜೆಪಿ ಮುಖಂಡರಾದ ಸಿದ್ದಲಿಂಗಯ್ಯ ಹಿರೇಮಠ ರವರು ಮಾತನಾಡಿ ನರೇಂದ್ರ ಮೋದಿಯವರು ಅಭಿವೃದ್ದಿಯ ಹರಿಕಾರರಾಗಿದ್ದು ದೇಶದ ಮುನ್ನಡೆಗೆ ಯುವಕರು ಸಕ್ರಿಯವಾಗಿ ಬಿಜೆಪಿಗೆ ಮತ ಚಲಾಯಿಸಬೇಕು ಕಾಂಗ್ರೆಸ ಪಕ್ಷವು ಒಡೆದುಆಳುವ ನೀತಿಯನ್ನು ಅನುಸರಿಸುತ್ತಿದೆ. ಅವರಿಗೆ ಈ ಚುನಾವಣೆಯಲ್ಲಿ ಪ್ರಜೆಗಳು ತಕ್ಕ ಉತ್ತರವನ್ನು ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಪಿ.ಎಲ್.ಡಿ.ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಸಂಗಮೆಶ ಡಂಬಳ, ವಿರೇಶ ಲಕ್ಷಣಿ, ತಾ.ಪಂ ಸದಸ್ಯರಾದ ವಿರೇಶ ಸಜ್ಜನ, ನಗರಸಭೆಯ ಸದಸ್ಯರಾದ ವಿಜಯ ಹಿರೇಮಠ, ಮುಖಂಡರಾದ ಮಲ್ಲಣ್ಣ ಬೆಲೆರಿ, ಡಾ.ಕೋಟ್ರೇಶ ಶಡ್ಮಿ, ಜಯಣ್ಣ ಶಟ್ಟರ, ಕೃಷ್ಣರಡ್ಡಿ ಗಲಬಿ, ನಾಗಪ್ಪ ಮಾಸ್ತಾರ, ರಮೇಶ ಬಾವಳ್ಳಿ, ಬಸವನಗೌಡ್ರ ಕಲಾದಗಿ, ಮುದಿಯಪ್ಪ, ವಿಶ್ವನಾಥ ಹೆಬ್ಬಾಳ, ಪ್ರಭುಗೌಡ ಬಸವರಾಜ ಗಟ್ಟಿರೆಟ್ಟಿಹಾಳ, ಬನ್ನೆಪ್ಪ ಹಳ್ಳಿ, ಹೆಮಲತಾ ನಾಯಕ, ಇನ್ನೂ ಅನೇಕ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
0 comments:
Post a Comment