PLEASE LOGIN TO KANNADANET.COM FOR REGULAR NEWS-UPDATES

ಸಾಮಾಜಿಕ ಬದ್ಧತೆ ಪ್ರದರ್ಶಿಸಿದ ಗೊಂಡಬಾಳ ಕುಟುಂಬ  
ಕೊಪ್ಪಳ, ಎ. ೧. ತಾಲೂಕಿನ ಭಾಗ್ಯನಗರದ ಕಿನ್ನಾಳ ರಸ್ತೆ ಎಫ್‌ಸಿಐ ಗೋದಾಮು ಹಿಂದುಗಡೆ ಇರುವ ಮಂಜುನಾಥ ಗೊಂಡಬಾಳರ ಮನೆಯಲ್ಲಿ ಅವರ ದ್ವಿತಿಯ ಸುಪುತ್ರಿಯ ನಾಮಕರಣ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಹಾಗೂ ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ಯುಗಾದಿ ಸಂಭ್ರಮ ಕವಿಗೋಷ್ಠಿ, ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಸಂಗೀತ ಸಮಾರಂಭ ವಿನೂತನ ರೀತಿಯ ಕಾರ್ಯಕ್ರಮ ಆಗಮಿಸಿದ ಸಾಹಿತಿಗಳ, ಜನರ ಮೆಚ್ಚುಗೆಗೆ ಪಾತ್ರವಾಯಿತು. 
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗುವ ಸಲುವಾಗಿ ಸರಕಾರ ವಿಭಿನ್ನ ಪ್ರಯತ್ನ ಮಾಡುತ್ತಿದೆ, ಅದೇ ರೀತಿ ಇವರು ಸಹ ಕೌಟುಂಬಿಕ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವದು ವಿಶೇಷವಾಗಿತ್ತು, ಯುಗಾದಿ ಸಂಭ್ರಮದಲ್ಲಿ ಪ್ರಥಮ ಬಾರಿಗೆ ಗುರುಶಿಷ್ಯರ ಕವಿಗೋಷ್ಠಿಯನ್ನು ಇತ್ತು ಅದರಲ್ಲಿ ಗುರುಶಿಷ್ಯರಾದ ಅಲ್ಲಾಗಿರಿರಾಜ ಕನಕಗಿರಿ,  ಹೆಚ್. ಎಸ್. ಪಾಟೀಲ- ಅರುಣಾ ನರೇಂದ್ರ, ಪ್ರೊ. ಅಲ್ಲಮಪ್ರಭು ಬೆಟ್ಟದೂರ - ಮಹೇಶ ಬಳ್ಳಾರಿ,  ವಿಠ್ಠಪ್ಪ ಗೋರಂಟ್ಲಿ - ವೀರಣ್ಣ ಹುರಕಡ್ಲಿ, ಮುನಿಯಪ್ಪ ಹುಬ್ಬಳ್ಳಿ,  ಡಾ|| ಕೆ. ಬಿ. ಬ್ಯಾಳಿ - ಅಲ್ಲಾವುದ್ದಿನ್ ಯಮ್ಮಿ, ಡಾ|| ಮಹಾಂತೇಶ ಮಲ್ಲನಗೌಡರ, ವೀರಣ್ಣ ವಾಲಿ - ಕುಮಾರಿ ಬಸಮ್ಮ ಕೋರಿ, ಸುಭಾಸ ಬಳ್ಳಾರಿ ಇತರರು ಕವನ ವಾಚನ ಮಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು  ಹಿರಿಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಮಾಡಿ ಮಾತನಾಡಿದ ಅವರು, ಕೌಟುಂಬಿಕ ಕಾರ್ಯಕ್ರಮವನ್ನು ಸಾಮಾಜಿಕ ಬಧ್ದತೆಗೆ ತಿರುಗಿಸಿ, ಜನಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು ಅತ್ಯಂತ ಅಭಿನಂದನಾರ್ಹ, ಹೊಸ ಆಲೋಚನೆ ಶ್ಲಾಘನೀಯ ಎಂದ ಅವರು, ಕೇವಲ ಎಲ್ಲವನ್ನೂ ಸರಕಾರವೇ ಮಾಡಬೇಕು ಎಂದು ಕೂಡುವದು ತಪ್ಪು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಹಿರಿಯ ಸಾಹಿತಿ ಹೆಚ್. ಎಸ್. ಪಾಟೀಲರು, ಗೊಂಡಬಾಳ ತಮ್ಮ ಮಗಳಿಗೆ ಅಕ್ಷರ ಎಂಬ ಹೆಸರನ್ನು ಇಡುವದರೊಂದಿಗೆ ಸಾಹಿತ್ಯದ ಜೊತೆಗೆ ಸಂಭಂದ ಬೆಸೆದುಕೊಂಡಿದ್ದಾರೆ, ಅದರ ಜೊತೆಗೆ ಕವಿಗೋಷ್ಠಿ, ಸಂಗೀತ ಕಾರ್ಯಕ್ರಮ, ನೇತ್ರದಾನ ಹಾಗೂ ರಕ್ತದಾನ ಅರಿವು ಮೂಡಿಸುವದು ಅದರ ಜೊತೆಗೆ ಎಲ್ಲರನ್ನೂ ಒಟ್ಟುಗೂಡಿಸಿ, ಮತದಾನ ಮಾಡುವಂತೆ ಆಗ್ರಹಿಸುವ ಪ್ರತಿಜ್ಞಾವಿಧಿ ಬೋಧಿಸಿರುವದು ಸ್ತುತ್ಯಾರ್ಹ ಎಂದರು.
ಪ್ರಾಸ್ತಾವಿಕ ನುಡಿಯನ್ನು ಮಂಜುನಾಥ ಜಿ. ಗೊಂಡಬಾಳ ಮಾಡಿ, ಕಡ್ಡಾಯ ಮತದಾನ ಮಾಡುವ ಸಲುವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ, ಸಾಹಿತಿ ಡಿ. ಎಂ. ಬಡಿಗೇರ, ಅಕ್ಬರ್ ಸಿ. ಕಾಲಿಮಿರ್ಚಿ ಭಾಗ್ಯನಗರ, ಡಾ|| ಸಿದ್ದಲಿಂಗಪ್ಪ ಕೊಟ್ನೆಕಲ್ ಪ್ರಾಧ್ಯಾಪಕರು, ಶ್ರೀ ಗವಿಸಿದ್ಧೇಶ್ವರ ಕಾಲೇಜು, ಕೊಪ್ಪಳ, ಬಿ. ಎಸ್. ಪಾಟೀಲ ಅಧ್ಯಕ್ಷರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕೊಪ್ಪಳ, ಈಶ್ವರ ಹತ್ತಿ ಸಾಹಿತಿಗಳು, ಕಲಾವಿದರು ಕೊಪ್ಪಳ ಆಗಮಿಸಿ ಶುಭಕೋರಿದರು. 
ಸದಾಶಿವ ಪಾಟೀಲ ಅಶೋಕ ನೀಲಮ್ಮನವರ  ಆಕೆಷ್ಟ್ರಾ ಕಲಾವಿದರು, ಬೆಳಗಾವಿ, ಅನುಸೂಯಾ ಜಾಗಿರದಾರ ಶಾಸ್ತ್ರೀ ಗಮಕ ಕಲಾವಿದರು, ಕುಮಾರ ವಿಜಯಕುಮಾರ ಗೊಂಡಬಾಳ ಕೆರೋಕೆ ಸಿಂಗರ್ ಕೊಪ್ಪಳ, ಕುಮಾರಿ ಸಾಹಿತ್ಯ ಗೊಂಡಬಾಳರವರಿಂದ ಸಂಗೀತ ಕಾರ್ಯಕ್ರಮ ನೀಡಿದರು. ಗವಿಸಿದ್ದಪ್ಪ ಕರ್ಕಿಹಳ್ಳಿ ಸ್ವಾಗತಿಸಿದರು, ವಿನೋದಕುಮಾರ ನೀಲಮ್ಮನವರ ವಂದಿಸಿದರು.

Advertisement

0 comments:

Post a Comment

 
Top