PLEASE LOGIN TO KANNADANET.COM FOR REGULAR NEWS-UPDATES

 ಸಿ.ಪಿ.ಐ.ಎಮ್.ಎಲ್. ಲಿಬರೇಷನ್ ಪಕ್ಷದಿಂದ ಸ್ಪರ್ಧಿಸಿದ ಕಾ|| ಭಾರದ್ವಾಜರವರು ಕಳೆದು ೨೫ ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಮಿಕರ ಪರ ಭ್ರಷ್ಠಾಚಾರದ ವಿರುದ್ದ ಹೋರಾಟ ಮಾಡುತ್ತಾ ಜಿಲ್ಲೆಯ ಜನತೆಗೆ ಚಿರಪರಿಚಿತರಾಗಿದ್ದಾರೆ. ಚುನಾವಣೆಯಲ್ಲಿ ಇವರನ್ನು ಬೆಂಬಲಿಸಲು ಪ್ರಗತಿ ಪರ ಸಂಘಟನೆಗಳಿಗೆ, ಕಾರ್ಮಿಕ ಸಂಘಟನೆಗಳಿಗೆ ಸಿ.ಪಿ.ಐ.ಎಮ್.ಎಲ್. ಲಿಬರೇಷನ್ ಜಿಲ್ಲಾ ಕಾರ್ಯದರ್ಶಿ ಬಸವನಗೌಡ ಸುಳೆಕಲ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. 
ಭಾರದ್ವಾಜರವರು ತುಂಗಾಭಧ್ರ ಜಲಾಶಯ ಉಳಿವಿಗಾಗಿ ಎಡದಂಡೆ ಕಾಲುವೆಯ ರೈತರ ರಕ್ಷಣೆಗಾಗಿ ಮುಸ್ಲಿಂರ ಹಕ್ಕಾದ ಸಾಚಾರ ವರದಿ ಜಾರಿಗಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಕೇಂದ್ರ ಕಾರ್ಮಿಕರ ಸಂಘಟನೆಗಳ ಒಕ್ಕೂಟದ ಕರ್ನಾಟಕದ ಮುಖಂಡರಾಇ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿ ಸಿ.ಐ.ಟಿ.ಯೂ, ಎ.ಐ.ಟಿ.ಯೂ.ಸಿ. ಮುಂತಾದ ಕಾರ್ಮಿಕ ಸಂಘಟನೆಗಳೊಂದಿಗೆ ಕೂಡಿಕೊಂಡು ಹೋರಾಟ ಮಾಡಿದ್ದಾರೆ. ಸಾರಿಗೆ ಕಾರ್ಮಿಕರ ಪರವಾಗಿ ಕೊಕೊ ಕೋಲಾ ಇನ್ನಿತರ ಕಾರ್ಖಾನೆಗಳ ಕಾರ್ಮಿಕರ ಪರವಾಗಿ ಮಾಡಿದ ಹೋರಾಟಗಳನ್ನು ಜಿಲ್ಲೆಯ ಜನತೆ ಗಮನಿಸಿದ್ದಾರೆ. ಗಂಗಾವತಿ ಸಕ್ಕರೆಯ ಕಾರ್ಖಾನೆಯ ಕಾರ್ಮಿಕರಿಗೆ ಬರಬೇಕಾದ ೮ ಕೋಟಿ ರೂಪಾಯಿಗಳಿಗಾಗಿ ಉಗ್ರ ಹೋರಾಟ ಮಾಡಿ ಜಯಶಿ ಲರಾಗಿದ್ದಾರೆ. ಇಂತಹ ಕಾಂತ್ರಿಕಾರ ಹೋರಾಟಗಾರನಿಗೆ ಮಾನ್ಯತೆ ಪಡೆದಂತಹ ಎಲ್ಲಾ ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಬುದ್ದಿ ಜೀವಿಗಳು, ಸಾಹಿತಿಗಳು, ರಾಜ್ಯ ರೈತ ಸಂಘ ಮತ್ತು ಹಸಿರುಸೇನಯ ಎಲ್ಲಾ ಮುಖಂಡರುಗಳು ಎಲ್ಲಾ ಸದಸ್ಯರುಗಳು ಭಾರದ್ವಾಜರವರ ಗೆಲುವಿಗಾಗಿ ಶ್ರಮಿಸಬೇಕೆಂದು ಬಸವನಗೌಡ ಸುಳೆಕಲ್    ಮನವಿ ಮಾಡಿದ್ದಾರೆ. 

Advertisement

0 comments:

Post a Comment

 
Top