ಗುಜರಾತ ರಾಜ್ಯವು ಇಡೀ ವಿಶ್ವಕ್ಕೆ ಅಭಿವೃದ್ದಿಯಲ್ಲಿ ಮಾದರಿ ರಾಜ್ಯವಾಗಿದೆ ಹಿಂದಿನ ಬಿಜೆಪಿ ಸರಕಾರವು ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಸಣ್ಣ ಭೂಹಿಡುವಳಿದಾರರಿಗೆ ಸಹಾಯದನ, ನಗರಗಳ ಅಭಿವೃದ್ದಿಗೆ ೩೦ ಕೋಟಿ ಅನುದಾನ ಕೊಟ್ಟಿದೆ. ಆದರೆ ಕಾಂಗ್ರೇಸ್ ಸರಕಾರದ ಯೋಜನೆಗಳು ರಾಜ್ಯವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿದೆ ಎಂದು ಕಿಡಿಕಾರಿದರು.
ಬಿಜೆಪಿ ಮುಖಂಡರಾದ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ ಕೊಪ್ಪಳ ನಗರಕ್ಕೆ ಶಾಶತ ಕುಡಿಯುವ ನೀರು ತಂದಿರುವ ಕೀರ್ತಿ ಕರಡಿ ಸಂಗಣ್ಣನವರಿಗೆ ಸಲ್ಲುತ್ತದೆ ನಗರದಲ್ಲಿರುವ ಬಡವರಿಗಾಗಿ ನಗರ ವಾಜಪೇಯಿ ಆಶ್ರಯ ಯೋಜನೆ ಅಡಿ ನಾಲ್ಕು ಸಾವಿರ ಮನೆಗಳನ್ನು ತಂದಿದ್ದಾರೆ. ಗವಿಸಿದ್ದೇಶ್ವರ ಯಾತ್ರಿ ನಿವಾಸ, ಜಿಲ್ಲಾ ರಂಗ ಮಂದಿರದಂತಹ ಯೋಜನೆಗಳನ್ನು ತಂದವರಿಗೆ ಮತ ನೀಡಬೇಕೆಂದು ಮನವಿಮಾಡಿದರು.
ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ ಮಾತನಾಡಿ ನಗರದಲ್ಲಿ ಹಾದುಹೋಗುವ ಎನ್.ಹೆಚ್-೬೩ ಹೆದ್ದಾರಿ ಕಾಮಗಾರಿ ಬಿಜೆಪಿ ಸರಕಾರದ ಕೊಡುಗೆ, ವೈದ್ಯಕೀಯ ಕಾಲೇಜು, ಸುಸಜ್ಜಿತ ಜಿಲ್ಲಾ ಸರಕಾರಿ ಆಸ್ಪತ್ರೆಯಂತಹ ಮಹತ್ತರವಾದ ಯೋಜನೆಗಳನ್ನು ನೋಡಿ ಬಿಜೆಪಿಗೆ ಮತದಾನ ಮಾಡಬೇಕೆಂದು ಹೇಳಿದರು.
ಈ ಸಂದರ್ಬದಲ್ಲಿ ಮುಖಂಡರಾದ ಸಿದ್ದಣ್ಣ, ಮಹಾದೇವಪ್ಪ ಜವಳಿ, ರಶಿದಸಾಬ್ ಮಿಠಾಯಿ, ಮರ್ದಾನಸಾಬ್ ಮಿಠಾಯಿ, ಸಿದ್ದು ಮ್ಯಾಗೇರಿ, ವೀರಪಾಕ್ಷಪ್ಪ ಗದಗಿನಮಠ, ಧವಲತ್ ಸಿಕ್ಕಗಾರ ಮುಂತಾದ ಬಿಜೆಪಿ ಯುವಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಭಾಗವಹಿಸಿದ್ದರು.
0 comments:
Post a Comment