ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ನಾಯಕರಾದ ಬಿ.ಎಸ್. ಯಡಿಪೂರಪ್ಪ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಪರವಾಗಿ ಪ್ರಚಾರ ಕೈಗೊಳ್ಳಲು ದಿನಾಂಕ ೦೨-೦೪-೨೦೧೪ ರಂದು ಬೆಳಗ್ಗೆ ೧೦ ಗಂಟೆಗೆ ಗಂಗಾವತಿಯ ವೀರಶೆಟ್ಟಿ ಖಾಟನ್ ಮಿಲ್‌ನಲ್ಲಿ ಜರುಗುವ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು. ನಂತರ ಮದ್ಯಾನ್ಹ ೧೨ ಗಂಟೆಗೆ ಬಸ್‌ನಿಲ್ದಾಣದ ಹತ್ತಿರವಿರುವ ನೆಕ್ಕಂಟಿ ಶ್ರೀನಿವಾಸ ಅವರ ಜಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ೧:೩೦ ಕ್ಕೆ ಸಿಂದನೂರಿನ ನಗರ ಪೋಲಿಸ್ ಠಾಣೆ ಹಿಂಬಾಗದಲ್ಲಿರುವ ರುದ್ರಗೌಡ ಮೆಮೋರಿಯಲ್ ಪ್ರೌಢಶಾಲೆಯ ಮೈದಾನದಲ್ಲಿ ನಡೆಯುವ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಿಜೆಪಿ ಮಾಧ್ಯಮ ನಿರ್ವಹಣೆ ಸಮಿತಿಯ ಮುಖಂಡರಾದ ಹಾಲೇಶ ಕಂದಾರಿ ತಿಳಿಸಿದ್ದಾರೆ.
0 comments:
Post a Comment