ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮವಾಗಿ ಕಣದಲ್ಲಿರುವ ಒಟ್ಟು ೧೬ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಹಂಚಿಕೆ ಮಾಡಿದ್ದಾರೆ.
ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ
ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಅಮರಪ್ಪ ಅವರಿಗೆ ಕಮಲ.
ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್ ಅವರಿಗೆ ಕೈ
ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಸೈಯದ್ ಆರೀಫ್ ಅವರಿಗೆ ಆನೆ ಚಿಹ್ನೆ
ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗಿರುವ ಚಿಹ್ನೆಗಳ ವಿವರ ಇಂತಿದೆ.
ತಿಮ್ಮಪ್ಪ ಉಪ್ಪಾರ್, ಭಾರತೀಯ ಡಾ. ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ- ಬಲೂನ್
ನಜೀರ್ ಹುಸೇನ್, ರಾಷ್ಟ್ರೀಯ ಕ್ರಾಂತಿಕಾರಿ ಸಮಾಜವಾದಿ ಪಾರ್ಟಿ- ಕ್ಯಾಮರಾ.
ಡಿ.ಹೆಚ್. ಪೂಜಾರ್, ಸಿಪಿಐ(ಎಮ್.ಎಲ್) ರೆಡ್‌ಸ್ಟಾರ್- ಗರಗಸ.
ಭಾರಧ್ವಜ, ಸಿಪಿಐ (ಎಂಎಲ್) ಲಿಬರೇಷನ್- ಮೂರು ನಕ್ಷತ್ರವುಳ್ಳ ಬಾವುಟ.
ರಮೇಶ್ ಕೋಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ)- ಹೊಲಿಗೆ ಯಂತ್ರ.
ಕೆ.ಎಂ. ರಂಗನಾಥ ರೆಡ್ಡಿ, ಸಮಾಜವಾದಿ ಪಾರ್ಟಿ- ಬೈಸಿಕಲ್.
ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.
ಪಕ್ಷೇತರ ಅಭ್ಯರ್ಥಿಗಳಾಗಿರುವ ಅಣ್ಣೋಜಿರಾವ್- ಬಕೆಟ್.
ವಿ. ಗೋವಿಂದ- ಏಳು ಕಿರಣಗಳಿರುವ ಪೆನ್ನಿನ ನಿಬ್.
ಗೋವಿಂದರೆಡ್ಡಿ ಪಚ್ಚರಳ್ಳಿ- ಸೀಲಿಂಗ್ ಫ್ಯಾನ್.
ನಾಗಪ್ಪ ಜಿ. ಕಾರಟಗಿ- ಕ್ಯಾರೆಟ್.
ಬಿ. ಮನೋಹರ ಹನುಮಂತಪ್ಪ- ಟೇಬಲ್ ಲ್ಯಾಂಪ್.
ಸುರೇಶ ಇವರಿಗೆ ಮಡಿಕೆ
ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ .
0 comments:
Post a Comment