PLEASE LOGIN TO KANNADANET.COM FOR REGULAR NEWS-UPDATES

 ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸೋಮವಾರದಂದು ನಡೆದ ಗಣಿತ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೫೮೭೪ ವಿದ್ಯಾರ್ಥಿಗಳು ಹಾಜರಾಗಿದ್ದು, ೪೮೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್.ಎಸ್.ಎಲ್.ಸಿ. ಪರೀಕ್ಷೆಯ ಗಣಿತ ವಿಷಯಕ್ಕೆ ಬಾಲಕರು-೮೯೮೭, ಬಾಲಕಿಯರು- ೭೩೭೧ ಸೇರಿದಂತೆ ಒಟ್ಟು ೧೬೩೫೮ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೮೬೮೭, ಬಾಲಕಿಯರು- ೭೧೮೭ ಸೇರಿದಂತೆ ಒಟ್ಟು ೧೫೮೭೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,   ೩೦೦-ಬಾಲಕರು, ೧೮೪- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೫೨೯೧ ವಿದ್ಯಾರ್ಥಿಗಳ ಪೈಕಿ ೫೦೭೧ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೫೩೪೮ ವಿದ್ಯಾರ್ಥಿಗಳ ಪೈಕಿ ೫೨೨೩, ಕುಷ್ಟಗಿ ತಾಲೂಕಿನಲ್ಲಿ ೨೬೮೪ ವಿದ್ಯಾರ್ಥಿಗಳ ಪೈಕಿ ೨೬೦೧, ಯಲಬುರ್ಗಾ ತಾಲೂಕಿನಲ್ಲಿ ೩೦೩೫ ವಿದ್ಯಾರ್ಥಿಗಳ ಪೈಕಿ ೨೯೭೮ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೨೧೯, ಗಂಗಾವತಿ- ೧೨೫, ಕುಷ್ಟಗಿ-೮೩ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೫೭ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ .

Advertisement

0 comments:

Post a Comment

 
Top