PLEASE LOGIN TO KANNADANET.COM FOR REGULAR NEWS-UPDATES

 ವಿಠ್ಠಲಕೃಷ್ಣ ದೇವರ ಪ್ರತಿ ಷ್ಠಾಪನಾ ಮತ್ತು ದಶಮಾನೋ ತ್ಸವದ ಅಂಗವಾಗಿ ಕೋಟಿ ಶ್ರೀ ಗಾಯತ್ರಿಮಂತ್ರ ಜಪಯಜ್ಞ ಸಾಂಗತಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿಮಿತ್ಯ ರವಿವಾರ ಸಂಜೆ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಶ್ರೀ ವಿಠ್ಠಲಕೃಷ್ಣ ದೇವಸ್ಥಾನದವರೆಗೆ ಮೂವರು ಶ್ರೀಗಳ ಭವ್ಯ ಶೋಭಾಯಾತ್ರೆ ವಿಜೃಂಭಣೆಯಿಂದ ನೆರವೇರಿತು.


ರವಿವಾರ ರಾತ್ರಿ  ನಡೆದ ಶೋಭಾಯಾತ್ರೆಯಲ್ಲಿ  ಶ್ರೀ ನಾರಾಯಣ, ಶ್ರೀ ಗಾಯತ್ರಿ, ವೇದಗ್ರಂಥ, ಶ್ರೀ ಕೃಷ್ಣ ಹಾಗೂ ಶ್ರೀ ಯಾಜ್ಞವಲ್ಕ್ಯ ಗುರುಗಳ ಭಾವಚಿತ್ರಗಳೊಂದಿಗೆ ಹೂಣಸಿ ಹೊಳಿ ಶ್ರೀ ವಿದ್ಯಾ ಭಾಸ್ಕರತೀರ್ಥ ಸ್ವಾಮಿಗಳು, ಮಂತ್ರಾ ಲಯದ ಶ್ರೀ ಸುಬುದೇಂದ್ರತೀರ್ಥ ಸ್ವಾಮಿಗಳು, ಸ್ವರ್ಣ ವಲಯ ಶ್ರೀ ಗಂಗಾವಧ ರೇಂದ್ರ ಸರಸ್ವತಿ ಸ್ವಾಮಿ ಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಹಿಳಾ ಭಜನಾ ಮಂಡಳಿಗಳು, ಮಕ್ಕಳಿಂದ ಭಕ್ತಿ ಸಂಗೀತದ ಕೋಲಾಟ ಹಾಗೂ ವಿವಿಧ ವಾದ್ಯಗಳು ಭಾಗವಹಿಸಿದ್ದವು. 
ಶೋಭಾಯಾತ್ರೆಯ ನಂತರ ಮಾತನಾಡಿದ ಮಂತ್ರಾಲಯ ಮಠದ ಶ್ರೀ ಸುಭಧೀಂದ್ರ ತೀರ್ಥರು, ಶ್ರೀ ಗಾಯತ್ರಿ ಜಪದಿಂದ ಸಕಲ ಬೇಡಿಕೆಗಳು ಈಡೇರುತ್ತವೆ. ಮನುಷ್ಯನ ಸಂಕಷ್ಟಗಳು ಇದರಿಂದ ಮಾತ್ರ ಪರಿಹಾರ ಸಾಧ್ಯ. ಪ್ರತಿಯೊಬ್ಬರೂ ಪ್ರಾಪ್ತ ಕಾಲದಲ್ಲಿ ಸಂಧ್ಯಾ ವಂದನೆಯೊಂದಿಗೆ ಗಾಯತ್ರಿ ಜಪ ಮಾಡುವಂತೆ ಸಲಹೆ ನೀಡಿದರು.
ಕೊಪ್ಪಳ ನಗರದಲ್ಲಿ ಕೋಟಿ ಗಾಯತ್ರಿ ಜಪಯಜ್ಞದಂತಹ ಭವ್ಯ ಧಾರ್ಮಿಕ ಕಾರ್ಯಕ್ರಮ ಹಾಗೂ ನಾಲ್ಕು ವೇದಗಳ ಪಾರಾಯಣ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಪ್ರಲ್ಹಾದ ಯುವಕ ಮಂಡಳಿಯಿಂದ ಗುರುವಂದನೆ ಸಲ್ಲಿಸಲಾಯಿತು.

ಮಂಗಳವಾರ ಶ್ರೀ ಸುಂದರಕಾಂಡ ಹೋಮ, ಶ್ರೀ ಲಕ್ಷ್ಮೀಶೋಭಾನ ಹವಿರ್ಯಜ್ಙವೇದ ಸಹಿತ ಸವಿತೃನಾರಾಯಣ ಹೋಮ, ಸಂಜೆ ೫ಕ್ಕೆ ಶ್ರೀ ಸುಧರ್ಮ ಆಚಾರರವರಿಂದ ಶ್ರೀ ಹನುಮಾನ್ ಚಾಲಿಸ್ ಉಪನ್ಯಾಸ ಜರುಗಿತು.

Advertisement

0 comments:

Post a Comment

 
Top