PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ೨೨- ಸಮಾಜ ಮತ್ತು ದೇಶದ ನಮಗೆ ಸಾಕಷ್ಟು ಎತ್ತರಕ್ಕೆ ಬೆಳೆಯುವ ಅವಕಾಶಗಳನ್ನು ಕೊಡುತ್ತದೆ. ಪ್ರತಿಯೊಬ್ಬರು ಸಹ ಸಮಾಜ ಮುಖಿಯಾಗಿ ಕೆಲಸಗಳನ್ನು ಮಾಡಲು

ಶ್ರಮಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಹೇಳಿದರು.
ಅವರು ನಗರದ ಪೊಲೀಸ್ ಮೈದಾನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ, ಸಿಂಡಿಯಾ ಸ್ಟೀಲ್ ಲಿಮಿಟೆಡ್ ಹಿರೇಬಗನಾಳ ಹಾಗೂ ಸಮೂಹ ಸಾಮರ್ಥ್ಯ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಮಾಜದ ಕೆಲ ನೂನ್ಯತೆಗಳು ಸರಿಹೋಗಲು ಪ್ರತಿಯೊಬ್ಬರು ಪರಿಸ್ಟರ ಸಹಕಾರ ಸಹಬಾಳ್ವೆ ಮೂಲಕ ನೊಂದವರ ಧ್ವನಿಯಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಅಂಗವಿಕಲರು ಸೇರಿದಂತೆ ಪ್ರತಿಯೊಬ್ಬರನ್ನು ಸಮಾಜದ ಮುಖ್ಯವಾಹಿನಿಗೆ ತರವುದು ಎಲ್ಲರ ಕರ್ತವ್ಯ ಎಂದರು.
ದೇಶದಲ್ಲಿ ಮಹಿಳೆ ಸಹ ಮುಖ್ಯ ವಾಹಿನಿಗೆ ಬಂದಿದ್ದು, ಸಮಾಜ ನಮಗೆ ಪುರುಷರ ಸಮಾನ ಸ್ಥಾನಮಾನ ನೀಡಿದೆ. ನಾವು ಅಬಲೆಯಲ್ಲ. ಸಮಾಜಕ್ಕೆ ಮಹಿಳೆಯರಿಂದ ಸಹ ದೊಡ್ಡ ಮಟ್ಟದ ಕೊಡುಗೆಗಳು ದೊರೆಯಬೇಕು. ನಮ್ಮ ಹಕ್ಕನ್ನು ಪಡೆದಷ್ಟು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಂಡಿಯಾ ಸ್ಟೀಲ್ ಲಿಮಿಟೆಡ್‌ನ ರವೀಂದ್ರ ದೇಸಾಯಿ ಮಾತನಾಡಿ, ನಮ್ಮ ಕಾರ್ಖಾನೆಯಿಂದ ಶಿಕ್ಷಣ, ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚು ಮಹತ್ವ ನೀಡುತ್ತದೆ. ಹತ್ತು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಉದ್ದೇಶಿಸಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತದೆ ಸಮಾಜಮುಖಿ ಕೆಲಸಗಳಿಗೆ ನಾವು ಸದಾ ಸಿದ್ದ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆ ಚೇರಮನ್ ಡಾ|| ಕೆ.ಜಿ. ಕುಲಕರ್ಣಿ ಮಾತನಾಡಿ ನಮ್ಮ ಸಂಸ್ಥೆಯಿಂದ ಹಲವಾರು ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ತಿಂಗಳೊಳಗೆ ಕೊಪ್ಪಳದಲ್ಲಿ ಬ್ಲಡ್ ಬ್ಯಾಂಕ್ ಪ್ರಾರಂಭಿಸುವುದಾಗಿ ತಿಳಿಸಿದರು.
ಸಿಂಡಿಯಾ ಸ್ಟೀಲ್ ಉಪಾಧ್ಯಕ್ಷ ಪ್ರೋ. ಅನುರಾಗ ತ್ಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ರವಿ ಬಿಸರಳ್ಳಿ, ಸಿಂಡಿಯಾ ಸ್ಟೀಲ್ ಲಿಮಿಟೆಡ್ ಡೈರೆಕ್ಟರ್ ಜುಂಜೈ ಜಯಾಂಗ, ಸಮೂಹ ಸಾಮರ್ಥ್ಯದ ಸಹಾಯಕ ನಿರ್ದೇಶಕ ಹಂಪಣ್ಣ ಬಿ, ನ್ಯಾಯವಾದಿ ರಾಘವೇಂದ್ರ ಪಾನಘಂಟಿ, ರೆಡ್‌ಕ್ರಾಸ್ ಸಂಸ್ಥೆ ಖಜಾಂಚಿ ಸುಧೀರ ಅವರದಿ ಮತ್ತೀತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಸೋಮರೆಡ್ಡಿ ಅಳವಂಡಿ ಸ್ವಾಗತಿಸಿದರು. ಉಪಾಧ್ಯಕ್ಷ ಡಾ|| ಸಿ.ಎಸ್. ಕರಮುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಕೆ. ಸಾಲಿ ನಿರೂಪಿಸಿದರೆ, ಕೊನೆಯಲ್ಲಿ ಸಂಸ್ಥೆ ಪ್ರದಾನ ಕಾರ್ಯದರ್ಶಿ ಡಾ|| ಶ್ರೀನಿವಾಸ ಹ್ಯಾಟಿ ವಂದಿಸಿದರು.

Advertisement

0 comments:

Post a Comment

 
Top