ನಗರದ ಶ್ರೀಗವಿಸಿದ್ದೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಕೊಪ್ಪಳದ ರಾಷ್ರ್ಟೀಯ ಸೇವಾ ಯೋಜನೆಯ ೨೦೧೩-೧೪ ರ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ದಿ.೨೨-೪-೨೦೧೪ ರಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕೊಪ್ಪಳದ ಕಾನೂನು ಮಹಾವಿದ್ಯಾಲಯದ ಪ್ರಾದ್ಯಾಪಕರಾದ ಬಸವರಾಜ ಎಸ್.ಎಮ್. ರವರು ಸಕಾಲ ಕುರಿತು ಶಬಿರಾರ್ಥಿಗಳಗೆ ಉಪನ್ಯಾಸ ನಿಡಿದರು.
ಪ್ರೋ.ಬಸವರಾಜರವರು ಸಕಾಲ ಜನರ ಹಕ್ಕೋತ್ತಮ ದಿಂದ ಬಂದಿರುವ ವಿಶೇಷ ಸವಲತ್ತಾಗಿರುವದರಿಂದ ಸಕಾಲದಡಿಯಲ್ಲಿ ಬರುವ ಸರ್ಕಾರದ ವಿವಿಧ ಇಲಾಖೆಗಳ ವಿವಿಧ ಸೇವೆಗಳನ್ನು ಕುರಿತು ಸವಿವರವಾಗಿ ವಿವರಿಸಿದರು ಸಕಾಲದ ವಿವಿಧ ಆಯಾಮಗಳನ್ನು ವಿವರಿಸುತ್ತ ಸಕಾಲದ ಗರಿಷ್ಟ ಪ್ರಯೋಜನ ಪಡೆಯಬೇಕೆಂದರೆ ಯುವಜನತೆ ಜಾಗೃತರಾಗಬೇಕೆಂದರು.
ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಮಾತನಾಡಿದ ಪ್ರೋ.ಶರಣಬಸಪ್ಪ ರವರು ಸರ್ಕಾರದ ಆಡಳಿತಶಾಹಿ ವಿಳಂಬಧೋರಣೆಯನ್ನು ನಿವಾರಿಸಲು ಸೂಕ್ತಸಾಧsನವೆಂದರೆ ’ಸಕಾಲ’ವಾಗಿದೆ ನಾಗರಿಕರಲ್ಲಿ ನಾಗರಿಕ ಪ್ರಜ್ಞೆ ಬೆಳೆದಂತೆ ಸಕಾಲದಂತಹ ಸವಲತ್ತುಗಳು ಹೆಚ್ಚು ಉಪಯುಕ್ತವಾಗಿವೆ.
ಕಾರ‍್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಡಾ.ಜೆ.ಎಸ್. ಪಾಟೀಲ ರವರು ಸಕಾಲದ ಹಿನ್ನಲೆಯನ್ನು ವಿವರಿಸಿದರು,ಕಾರ‍್ಯಕ್ರಮದ ನಿರೂಪಣೆಯನ್ನು ಗವಿಸಿದ್ದಪ್ಪ ನಿರ್ವಹಿಸಿದರೆ ವಂದನಾರ್ಪಣೆಯನ್ನು ನಿಂಗನಗೌಡ ಕ್ಯೆಗೊಂಡರು.
ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಎರಡನೇದಿನದ ಕಾರ್ಯಕ್ರಮದ ಮುಖ್ಯ ಆತಿಥಿಗಳಾದ ಪ್ರೋ.ಬಸವರಾಜ ಎಸ್.ಎಮ್.ರವರು ಶಿಬಿರಾರ್ಥಿಗಳಿಗೆ ’ಸಕಾಲz’ ಕುರಿತು ಸವಿವರವಾಗಿ ಮಾಹಿತಿನೀಡಿದರು ಕಾರ‍್ಯಕ್ರಮಾಧಿಕಾರಿಗಳಾದ ಡಾ.ಜೆ.ಎಸ್.ಪಾಟೀಲ ರವರು ಕಾರ‍್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪ್ರೋ.ಶರಣಬಸಪ್ಪ ರವರು ವಹಿಸಿದ್ದರು.
0 comments:
Post a Comment