PLEASE LOGIN TO KANNADANET.COM FOR REGULAR NEWS-UPDATES

ನಗರದ ಶ್ರೀಗವಿಸಿದ್ದೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಕೊಪ್ಪಳದ ೨೦೧೩-೧೪ ರ ಸಾಲಿನ ರಾಷ್ರ್ಟೀಯ ಸೇವಾ ಯೋಜನಾ ಶಿಬಿರದ ಉಧ್ಘಾಟನಾ ಕಾರ್ಯ್ಯಕ್ರಮ ದಿ.೨೧-೦೪-೨೦೧೪ ರಂದು ಜರುಗಿತು 
     ಶಿಬಿರದ ಉಧ್ಘಾಟಕರಾಗಿ ಆಗಮಿಸಿದ ಶ್ರೀಗವಿಸಿದ್ದೇಶ್ವರ ವಿದ್ಯಾವರ್ದಕ ಟ್ರಸ್ಟನ ಕಾರ್ಯದರ್ಶಿಗಳಾದ  ಎಸ್.ಮಲ್ಲಿಕಾರ್ಜುನರವರು ಶಿಬಿರ ಉಧ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ  ರಾಷ್ರ್ಟೀಯ ಸೇವಾ ಯೋಜನೆ ಒಂದು ಉತ್ತಮ ಯೋಜನೆಯಾಗಿದ್ದು ಶಿಬಿರದಲ್ಲಿ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು 
     ಸಮಾರಂ
ಭದ ಅದ್ಯಕ್ಷತೆಯನ್ನು ಪ್ರತಿಜ್ಞಾವಿಧಿಬೋಧಿಸಿ ಮಾತನಾಡಿದ ಪ್ರಾಚಾರ‍್ಯರಾದ ಪ್ರೋ.ಎಸ್.ಎಲ್.ಮಾಲಿಪಾಟೀಲರವರು ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿದ್ದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ  ಶಿಬಿರಗಳು ತುಂಬಾ ಉಪಯುಕ್ತವೆಂದರು
   ಸಮಾರಂಭದ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಶಿಬಿರಾಧಿಕಾರಿ ಪ್ರೋ.ಶರಣಬಸಪ್ಪ ರವರು ಮಾತನಾಡಿದರು ಶಿಬಿರದ ದೈಯೋಧ್ಯೇಶಗಳನ್ನು ಶಿಬಿರಾಧಿಕಾರಿ ಡಾ.ಜೆ.ಎಸ್.ಪಾಟೀಲ ವಿವರಿಸಿದರು, ವಿದ್ಯಾರ್ಥಿಗಳಾದ ಅಮರೇಶ ಕಾರ‍್ಯಕ್ರಮ ನಿರೂಪಣೆಗ್ಯೆದರೆ ಮಾರುತಿ ವಂದನಾರ್ಪಣೆ ಕ್ಯೆಗೊಂಡರು. 
ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯನ್ನು ಶೀ.ಗ.ವಿ.ವ ಟ್ರಸ್ಟನ ಕಾರ್ಯದರ್ಶಿಗಳಾದ ಶೀ ಎಸ್.ಮಲ್ಲಿಕಾರ್ಜುನರವರು ಉದ್ಘಾಟಿಸಿದರು ಪ್ರಾಚಾರ‍್ಯರಾದ ಪ್ರೋ.ಎಸ್.ಎಲ್ ಮಾಲಿಪಾಟೀಲರವರು ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದರು ಶಿಬಿರಾಧಿಕಾಗಳಾದ ಪ್ರೋ.ಶರಣಬಸಪ್ಪ ಮತ್ತು ಡಾ.ಜೆ.ಎಸ್ ಪಾಟೀಲರವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top