PLEASE LOGIN TO KANNADANET.COM FOR REGULAR NEWS-UPDATES

 ಭಾರತ ವಿದ್ಯಾರ್ಥಿ ಫಡರೇಷನ್ (ಎಸ್.ಎಫ್.ಐ) ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ಸಮಿತಿಗಳು  ವಿಜಯ ನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಕುಲ ಸಚಿವರು ಹೊರಡಿಸಿರುವ ಸುತ್ತೋಲೆಯಿಂದ ವಿ.ವಿ. ವ್ಯಾಪ್ತಿಯ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಹಲವಾರು ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ವಿ.ವಿ. ಪ್ರಾರಂಭದಿಂದ ಇಲ್ಲಿಯ ವರೆಗೂ ಪದವಿ ಮತ್ತು ಸ್ನಾತಕೋತ್ತರ ಕಲಿಯುವ ಎಲ್ಲಾ ವಿದ್ಯಾರ್ಥಿಗಳಿಗೂ ಎಲ್ಲಾ ವಿಭಾಗದಲ್ಲಿ ಪ್ರತಿ ಸೆಮಿಸ್ಟರಗೆ ಪರೀಕ್ಷಾ ಶುಲ್ಕ ಅಂಕಪಟ್ಟಿ ಶುಲ್ಕ ಸೇರಿ ಕೇವಲ ೧೧೦ ರೂ. ಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು, ಆದರೆ ೨೦೧೪ರ ಮೇ ಮತ್ತು ಜೂನ್ ತಿಂಗಳಲ್ಲಿ ನಡೆಯುವ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ೨,೪,೬ ಹಾಗೂ ೨,೪ ಸೆಮಿಸ್ಟರಿಗೆ ದಲಿತ, ಹಿಂದುಗಳಿದ ವರ್ಗದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಧೀಡಿರನೆ ೧೧೦ ರೂ. ದಿಂದ ೮೫೦ ರೂ. ಹೆಚ್ಚಳ ಮಾಡಿದ್ದರಿಂದ ವಿದ್ಯಾರ್ಥಿಗಳು ಶುಲ್ಕ ಭರಿಸಲಾಗದೆ ಕಾಲೇಜು ಬಿಡುತ್ತಿದ್ದಾರೆ ಈ ಹಿಂದೆ ದಿನಾಂಕ ೦೫.೦೪.೨೦೧೪ ರಂದು ಎಸ್‌ಸಿ,ಎಸ್‌ಟಿ,ಓಬಿಸಿ ವಿದ್ಯಾರ್ಥಿಗಳಿಗೂ ಪರೀಕ್ಷೆ ಶುಲ್ಕ ಹೆಚ್ಚಳ ಆದ ತಕ್ಷಣ ಹೋರಾಟ ಮಾಡಿದ್ದಕ್ಕೆ ಎಸ್‌ಸಿ,ಎಸ್‌ಟಿ. ವಿದ್ಯಾರ್ಥಿಗಳಿಗೆ ಮಾತ್ರ ೮೫೦ ರೂ. ದಿಂದ ೧೧೦ ಕಡಿಮೆ ಗೊಳಿಸಿದ್ದರು ಆದರೆ ಓಬಿಸಿ ವಿದ್ಯಾರ್ಥಿಗಳಿಗೆ ಪರಿಷ್ಕರಣಿಸಿ ಆದೇಶ ಹೊರಡಿಸದೆ ಯಥಾಸ್ಥಿತಿ ಕಾಪಾಡಿಕೊಂಡಿರುವುದೇಕೆ? 
ರಾಜ್ಯದಲ್ಲಿರುವ ಯಾವುದೇ ವಿಶ್ವ ವಿದ್ಯಾಲಯವು ಇಲ್ಲಿಯವರೆಗು ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಧೀಡಿರನೆ ಹೆಚ್ಚಳ ಮಾಡಿರುವುದಿಲ್ಲಾ, ಹೆಚ್ಚಳ ಆಗಿರುವುದನ್ನು ಖಂಡಿಸಿ ಎಸ್‌ಎಫ್‌ಐ ಸಂಘಟನೆಯು ಸುಮಾರು ಒಂದು ವಾರಗಳ ಕಾಲ ಹೊಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ಮಾಡಿ, ವಿ.ವಿ ಗಮನಕ್ಕೆ ತಂದರೂ ವಿ.ವಿ ಕುಲಪತಿಗಳು ಹಾಗೂ ಸಿಂಡಿಕೇಟ್ ಸದಸ್ಯರು, ಶಾಸಕರು, ಸಂಸದರು, ಜಿಲ್ಲಾ ಪಂಚಾಯತ್ ಸದಸ್ಯರುಗಳು ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ಹಾಗೂ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ದಿನಾಂಕ ೨೩-೦೪-೨೦೧೪ರಂದು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ವಿಜಯ ನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಾಂಗ ಮಾಡುತ್ತಿರುವ ೨ ಜಿಲ್ಲೆಯ ವಿವಿಧ ಕಾಲೇಜಿನ  ಎಲ್ಲಾ ವಿದ್ಯಾರ್ಥಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಮರೇಶ ಕಡಗದ-೯೯೦೨೪೪೭೩೧೯, ಬಾಳಪ್ಪ ಹುಲಿಹೈದರ್-೯೭೩೧೩೦೨೬೮೬

Advertisement

0 comments:

Post a Comment

 
Top