PLEASE LOGIN TO KANNADANET.COM FOR REGULAR NEWS-UPDATES

  ಭಾರತ ಸ್ವಾತಂತ್ರ್ಯವಾಗಿ ಆರು ದಶಕ ಕಳೆದರೂ ಹಿಂದೆ ಆಳ್ವಿಕೆ ಮಾಡಿದ ಕಾಂಗ್ರೇಸ್‌ನಿಂದ ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ. ದುಡಿಯುವ ಹೆಣ್ಣುಮಕ್ಕಳಿಗೆ ಕೆಲಸವಿಲ್ಲದೆ, ಗುಳೇ ಹೋಗುವುದು ಹೆಚ್ಚಾಗಿದೆ. ಸ್ತ್ರೀಯರ ಸಬಲೀಕರಣಕ್ಕಾಗಿ ಭಾರತೀಯ ಜನತಾ ಪಾರ್ಟಿಗೆ ಮತ ಚಲಾಯಿಸಬೇಕೆಂದು ಬಿ.ಜೆ.ಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಹೇಮಲತಾ ನಾಯಕ ಅಭಿಪ್ರಾಯಪಟ್ಟರು.
ಅವರು ಬಿ.ಜೆ.ಪಿ ಕಾರ್ಯಾಲಯದಲ್ಲಿ ದಿನಾಂಕ: ೦೮-೦೪-೨೦೧೪ ರಂದು ಸಂಜೆ ನಡೆದ ಕೊಪ್ಪಳ ಮಂಡಳದ ಮಹಿಳಾ ಮೋರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದಲ್ಲಿ ಲಿಂಗತಾರತಮ್ಯ ಹೆಚ್ಚಾಗಿದ್ದು, ಹೆಣ್ಣು ಮಕ್ಕಳು ಹುಟ್ಟಿದ ಶಾಪ ಎಂದುಕೊಳ್ಳುತ್ತಿದ್ದ ಸಂದರ್ಭ
ದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಭಾಗ್ಯಲಕ್ಷ್ಮಿ ಭಾಂಡ ವಿತರಣೆ ಅಂತಹ ಮಹತ್ತರವಾದ ಯೋಜನೆಗಳಿಂದ ಭವಿಷ್ಯದಲ್ಲಿ ಬಡವರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪಾಲಕರ ಆರ್ಥಿಕ ಹೊಣೆ ಕಡಿಮೆಯಾಗಲಿದೆ.
ವಿದ್ಯಾರ್ಥಿನೀಯರಿಗಾಗಿ ವಸತಿ ನಿಲಯ, ಸೈಕಲ್ ವಿತರಣೆ ಅಂತಹ ಯೋಜನೆಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದೆ. ಹೆರಿಗೆ ಸಮಯ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ಜಾರಿಗೆ ತಂದಂತಹ ೧೦೮ ವಾಹನ ಸೌಲಭ್ಯದಿಂದ ಗರ್ಭಿಣಿ ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆಗೆ ಸದರಿ ಯೋಜನೆಗಳು ಅನುಕೂಲವಾಗಿವೆ ಎಂದು ಅವರು ತಿಳಿಸಿದರು.
ಜೆ.ಡಿ.ಎಸ್ ತೊರೆದು ಬಿ.ಜೆ.ಪಿ ಸೇರ್ಪಡೆ: ನರೇಂದ್ರ ಮೋದಿಯವರು ಭವಿಷ್ಯದಲ್ಲಿ ಪ್ರಧಾನಿಯಾಗಬೇಕೆಂಬ ಅಭಿಲಾಷೆಯೊಂದಿಗೆ ಜೆ.ಡಿ.ಎಸ್ ಪಕ್ಷದ ಮಹಿಳಾ ಮುಖಂಡರಾದ ಶಾರದಾ ಕೆಳಗಿನಗೌಡ್ರ, ವೀರಮ್ಮ ಕೊರಗಲ್‌ಮಠ, ಈರಮ್ಮ ಮುಂಡರಗಿಮಠ, ಗಂಗಮ್ಮ ಚಿಕ್ಕೆನಕೊಪ್ಪ, ಕಸ್ತೂರೆಮ್ಮ ವಸ್ತ್ರದ, ಬೋರಮ್ಮ ತೆಳಗಡೆ ಮೊದಲಾದವರು ಬಿ.ಜೆ.ಪಿ ಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ಯಾಮಲಾ ಕೋನಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುರಾಕರ್ಣಂ, ನಗರಸಭಾ ಸದಸ್ಯರಾದ   ಸುವರ್ಣ ನೀರಲಗಿ, ಜೀನಾಬಾಯಿ ಜಕ್ಕಲಿ, ವಾಣಿಶ್ರೀ ವಸಂತ, ಶಾಂತಮ್ಮ ಹಿರೇಮಠ, ಶೋಭಾ ನಗರಿ, ಬಸಮ್ಮ ದಿವಟರ, ವೀಣಾ ಒಳಗುಂದಿ ಮೊದಲಾದವರು ಉಪಸ್ಥಿತರಿದ್ದರು

Advertisement

0 comments:

Post a Comment

 
Top