PLEASE LOGIN TO KANNADANET.COM FOR REGULAR NEWS-UPDATES

 ರವಿವಾರದಂದು ಭಾಗ್ಯನಗರದಲ್ಲಿ ಪೀಪಲ್ಸ್  ಯುನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್) ಸಂಘಟನೆಯ ರಾಜ್ಯ ಕಾರ‍್ಯಕಾರಿಣಿ ಸಭೆ ನಡೆಯಿತು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಪಿ.ಬಿ.ಡಿಸಾ ವಹಿಸಿಕೊಂಡಿದ್ದರು. ಸಭೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಪಿಯುಸಿಎಲ್ ಸಂಘಟನೆಯ ಕಾರ್ಯಚಟುವಟಿಕೆಗಳ ಗ್ಗೆ ಚರ್ಚಿಸಲಾಯಿತು. ಮೈಸೂರು,ಬೆಂಗಳೂರು ಮತ್ತು ಕೊಪ್ಪಳ ಜಿಲ್ಲೆಯ ಜಿಲ್ಲಾಘಟಕಗಳವರು ತಮ್ಮ ವರದಿ ವಾಚನ ಮಾಡಿದರು. ನಂತರ ಮೇ ತಿಂಗಳ ೧೮ರಂದು ಕೊಪ್ಪಳದಲ್ಲಿ  ಹೈದ್ರಾಬಾದ್ ಕರ್ನಾಟಕದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಯಿತು. ಕಾರ‍್ಯಾಗಾ
ರದಲ್ಲಿ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ನಂತರ ರಾಜ್ಯದ ವಿವಿದೆಡೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಚರ್ಚಿಸಲಾಯಿತು. ಅದಲ್ಲದೇ ಅಕ್ಟೋಬರ್ ತಿಂಗಳಲ್ಲಿ ರಾಜ್ಯಮಟ್ಟದ ಸಮಾವೇಶ ಮೈಸೂರಿನಲ್ಲಿ ಮಾಡಲು ನಿರ್ಧರಿಸಲಾಯಿತು.
ಚುನಾವಣೆಯಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಗಂಭೀರವಾದ ಚರ್ಚೆ ನಡೆಯಿತು. 
ಕಾರ‍್ಯಕ್ರಮದಲ್ಲಿ ರಾಜ್ಯ ಜನರಲ್ ಸೆಕ್ರೆಟರಿ ಡಾ.ವಿ.ಲಕ್ಷ್ಮೀನಾರಾಯಣ, ಡಾ.ರತಿರಾವ್, ಡೇವಿಡ್ ಎನ್.ಡಿಸೋಜಾ, ಕೊಪ್ಪಳ ಜಿಲ್ಲಾ ಪಿಯುಸಿಎಲ್ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ರವೀಂದ್ರ ರಡ್ಡಿ, ವಾಯ್ .ಜೆ.ರಾಜೇಂದ್ರ, ಹೋರಾಟಗಾರರಾದ ಜೆ.ಭಾರದ್ವಾಜ, ಬಸವರಾಜ್ ಶೀಲವಂತರ, ಹೆಚ್.ವಿ.ರಾಜಾಬಕ್ಷಿ, ಸಿರಾಜ್ ಬಿಸರಳ್ಳಿ,ರಘು ಕಾಸನಕಂಡಿ,ಅನಾಳಪ್ಪ ತಳವಾರ ಸೇರಿದಂತೆ ಇತರರು ಉಪಸ್ಥಿತಿರಿದ್ದರು. 

Advertisement

0 comments:

Post a Comment

 
Top