PLEASE LOGIN TO KANNADANET.COM FOR REGULAR NEWS-UPDATES

 ಮಹಿಳೆಯರು ಒಗ್ಗಟ್ಟಿನಿಂದ ಇರುವುದರ ಜೊತೆಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಬೇಕೆಂದು ಭಾಗ್ಯನಗರದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೊನ್ನೂರಸಾಬ ಮಹಮ್ಮದಸಾಬ ರವರು ತಿಳಿಸಿದರು. 
ತಾಲೂಕಿನ ಭಾಗ್ಯನಗರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ  ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನ ಯೋಜನೆಯಡಿಯಲ್ಲಿ ಕೊಪ್ಪಳ ತಾಲೂಕ ಘಟಕ ಹಾಗೂ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಸಾಮರ್ಥ್ಯ ಬಲವರ್ಧನೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಈ ಸಂದರ್ಭದಲ್ಲಿ ಮಾತನಾಡಿದ ಕಿತ್ತೂರು ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ಕುಮಾರಿ ಸರೋಜಾ ಬಾಕಳೆ ರವರು ಮಾತನಾಡುತ್ತಾ ಸ್ವ ಸಹಾಯ ಸಂಘಗಳಿನಲ್ಲಿನ ಮಹಿಳೆಯರು ಕೆವಲ ಸಹಾಯಧನ ಮತ್ತು ಸುತ್ತುನಿಧಿ ಬಡ್ಡಿ ಸಹಾಯಧನಕ್ಕೆ ಸಿಮಿತವಾಗಿರದೆ ತಮ್ಮ ಆರ್ಥಿಕ ಸ್ವಾವಲಂಭನೆ ಗುರಿ ಇಟ್ಟಿಕೊಂಡು ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಂಡು ಬದುಕನ್ನು ರೂಪಿಸಿಕೊಳ್ಳಬೆಕು ಎಂದು ಮಾತನಾಡಿದರು. ಜಿಲ್ಲಾ ಸಂಜೀವಿನ ಯೋಜನಾ ಘಟಕದ ಜಿಲ್ಲಾ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಪಿ ಎಸ್ ರವರು ತರಬೇತಿ ಕಾರ್ಯಕ್ರಮದ ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಸ್ಥುಲ ಮಾಹಿತಿ  ನೀಡಿ ನಿರೂಪಿಸಿದರು.  ತಾಲೂಕು ಘಟಕದ ಮೇಲ್ವಿಚಾರಕರಾದ ಬಿ.ಆರ್.ಪ್ರಸನ್ನಕುಮಾರ ಮಧುಗಿರಿಯವರು ಪ್ರಾರ್ಥಿಸಿದರು. ತಾಲೂಕ ಘಟಕದ ವ್ಯವಸ್ಥಾಪಕರಾದ ಹೆಚ್ ಸಿ ರಾಘವೇಂದ್ರ ಸ್ವಾಗತಿಸಿದರು. 
ಈ ಸಂದರ್ಭದಲ್ಲಿ ತಾಲೂಕ ಘಟಕದ ಸಿಬ್ಬಂದಿ ಮತ್ತು ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀಮತಿ ಹುಲಿಗೆಮ್ಮ, ಸರ್ವಸದಸ್ಯರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಪುಷ್ಪಾ, ಲಲೀತಾ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಂಬಣ್ಣ ನಂದ್ಯಾಪೂರ ಉಪಸ್ಥಿತರಿದ್ದರು.

Advertisement

0 comments:

Post a Comment

 
Top