ಕೊಪ್ಪಳ: ಸಂಗೀತ ಕ್ಷೇತ್ರಕ್ಕೆ ಪಂ.ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾದದ್ದು ಎಂದು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಹೇಳಿದರು.
ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗಾನ ಗಂಧರ್ವ,ಗಾನ ವಿದೂಷಿ,ಪಂಡಿತ ಪುಟ್ಟರಾಜ ಗವಾಯಿಗಳ ೧೦೧ನೇ ಜನ್ಮ ದಿನಾವರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,ಪಂ.ಪುಟ್ಟರಾಜ ಗವಾಯಿಗಳು ಅಂಧರಾಗಿದ್ದು ಕೂಡಾ ಸಾಮನ್ಯ ವ್ಯಕ್ತಿಗಳು ಮಾಡದ ಸಾಧನೆಯನ್ನು ಮಾಡಿದ್ದಾರೆ.ಅದರಲ್ಲೂ ವಿಶೇವಾಗಿ ಸಂಗೀತ ಕ್ಷೇತ್ರಕ್ಕೆ ತಮ್ಮದೇಯಾದ ಕೊಡುಗೆಯನ್ನು ನೀಡಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.ಯಾವುದೇ ವ್ಯಕ್ತಿಯಲ್ಲಿ ದೇಹದ ಯಾವುದಾರೂ ಒಂದು ಅಂಗ ವೈಕ್ಯತೆಯನ್ನು ಹೊಂದಿದ್ದರೆ ಅವರಲ್ಲಿ ಸಾಮಾನ್ಯ ವ್ಯಕ್ತಿಗಳಿಗಿಂಥ ವಿಶೇಷವಾದ,ವಿಭಿನ್ನವಾದ ಶಕ್ತಿಯನ್ನು ದೇವರು ಅವರಿಗೆ ನೀಡಿರುತ್ತಾರೆ.ಅಂಗವಿಕಲತೆಗೆ ಒಳಗಾದವರು ಯಾವುದೇ ರೀತಿಯಲ್ಲಿ ಎದೆಗುಂದದೆ ಅಂಗವಿಕಲತೆಯ ಬಗ್ಗೆ ಗಮನವನ್ನು ಹರಿಸದೇ ಸಾಧನೆಯನ್ನು ಮಾಡಿತೊರಿಸುವ ಕಡೆಗೆ ಗಮನವನ್ನು ಹರಿಸಬೇಕು.ಅನೇಕ ಅಂಗವಿಕಲರು ಇಂದು ತಮ್ಮ ಅಂಗವ್ಯಕೈಲೆಯನ್ನು ಮಟ್ಟಿನಿಂತು ಸಾಧನೆಯನ್ನು ಮಾಡಿದವರಿದ್ದಾರೆ.ಅಂಥವರಲ್ಲಿ ಅಂಧೆಯಾಗಿರುವ ಕುಮಾರಿ ಅಶ್ವಿನಿ ಅಂಗಡಿಯವರು ವಿಶ್ವ ಸಂಸ್ಥೆಯಲ್ಲಿ ಭಾಷಣವನ್ನು ಮಾಡುವುದರ ಮೂಲಕ ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜರಾಗುವ ಮೂಲಕ ಇಡೀ ವಿಶ್ವವೇ ತನ್ನತ್ತ ತಿರುಗಿ ನೊಡುವಂತೆ ಮಾಡಿದ್ದಾರೆ.ಇಂಥವರ ಜನ್ಮ ದಿನಾಚರಣೆಯನ್ನು ಆಚರಿಸುವುದು ಪುಣ್ಯ ಕಾರ್ಯವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ನಮ್ಮ ಸಂಘದ ವತಿಯಿಂದ ಪ್ರತಿವರ್ಷ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮ ದಿನಾರಣೆ ಹಾಗೂ ಪುಣ್ಯರಾದನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೆವೆ.ಸರ್ಕಾರವು ಇಂದು ಅನೇಕ ಮಹಾನ ವ್ಯಕ್ತಿಗಳ ದಿನಾರಣೆಯನ್ನು ಆಚರಿಸುತ್ತಿದೆ.ಅದರಂತೆ ಸರ್ಕಾರವು ಕೂಡಾ ಇಡಿ ಮನುಕುಲಕ್ಕೆ ಆದರ್ಶ ಪ್ರಾಯರಾದ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮ ದಿನಾರಣೆಯನ್ನು ಸರ್ಕಾರದ ವತಿಯಿಂದಲೇ ಆಚರಿಸುವಂತಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ಮಾತನಾಡುತ್ತ,ಪಟ್ಟರಾಜ ಗವಾಯಿಗಳು ಕೇವಲ ಸಂಗೀತ ಕ್ಷೇತ್ರಕ್ಕೆ ಸಿಮಿತರಾಗದೇ ಅಂಧ-ಅನಾಥ ಮಕ್ಕಳ ಶಿಕ್ಷಣ ಕಡೆಗೆ ಗಮನಹರಿಸಿ ಅವರ ಬದುಕಿನ ಆಶಾ ಕಿರಣರಾಗಿದ್ದಾರೆ.ಇಂಥ ಮಹಾನ ವ್ಯಕ್ತಿಗಳ ತತ್ವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಆರ್.ಪಿ.ಪ್ರಭುರಾಜ ಬಳಿಗಾರ,ಸರ್ಕಾರಿ ಅಂಗವಿಕಲ ನೌಕರರ ಸಂಘದ ಕೊಪ್ಪಳ ತಾಲೂಕ ಸಹ ಕಾರ್ಯದರ್ಶಿ ಶಂಕ್ರಮ್ಮ ರಾಜು ಬಂಗಾರಶೆಟ್ಟರ್,ಶಿಕ್ಷಕರಾದ ಶ್ರೀನಿವಾಸರಾವ್ ಕುಲಕರ್ಣಿ,ಸಾವಿತ್ರಿದಾಸ, ವಿಜಯಾ,ರತ್ನಾ,ಗೌಸೀಯಾಬೆಗಂ,ಗಂಗಮ್ಮ,ವಿಜಲಕ್ಷ್ಮೀ,ಮೋಹಿನ್‌ಪಾಷಾಬೀ,ಭಾರತಿ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಗುರುರಾಜ ಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.ಶಿಕ್ಷಕಿ ಅಂಬಕ್ಕ ಪ್ರಾರ್ಥನೆಯನ್ನು ನೇರವೇರಿಸಿದರು.ಶಿಕ್ಷಕರಾದ ನಾಗಪ್ಪ ನರಿ ಸ್ವಾಗತಿಸಿ,ವಿರುಪಾಕ್ಷಪ್ಪ ಬಾಗೋಡಿ ಎಲ್ಲರಿಗೂ ವಂದಿಸಿದರು.
0 comments:
Post a Comment