.jpg)
.jpg)
ಸಿಎಂ ಸಿದ್ದರಾಮಯ್ಯನವರು ಹೈದ್ರಾಬಾದ್ ಕರ್ನಾಟಕಕ್ಕೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ. ನೇಮಕಾತಿಗಳನ್ನು ರದ್ದುಗೊಳಿಸಬೇಕು. 371ಜೆ ಅನ್ವಯ ನಮ್ಮ ಪಾಲನ್ನು ನೀಡಬೇಕೆಂದು ಆಗ್ರಹಿಸಿದರು.
ನಂತರ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳರೊಂದಿಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಆಗಿರುವ ಅನ್ಯಾಯ ವನ್ನು ಸರಿಪಡಿಸಲಾಗುವುದು. ಮತ್ತು ದಿ. 3-3-2014ರಂದು ಮುಖ್ಯಮಂತ್ರಿಗಳನ್ನು ಹೋರಾಟಗರಾರರೊಂದಿಗೆ ಜೊತೆಯಲ್ಲಿಯೇ ಭೇಟಿಯಾಗಿ ಸೂಕ್ತ ಕೈಗೊಳ್ಳಲು ಒತ್ತಾಯಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.
ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಠ್ಠಪ್ಪ ಗೋರಂಟ್ಲಿ ಸೇರಿದಂತೆ ಇತರರು ಮಾತನಾಡಿದರು. ಹೋರಾಟದಲ್ಲಿ ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರ,ರಾಜಾಬಕ್ಷಿ ಎಚ್.ವಿ,.ರಮೇಶ ತುಪ್ಪದ, ಮಂಜುನಾಥ ಅಂಗಡಿ ಜಗದೀಶಗೌಡ,ಶಿವಾನಂದ ಹೊದ್ಲೂರ,ಕಲಿಮುದ್ದೀನ್,
ಜಿಎಸ್.ಗೋನಾಳ,ರಾಜಶೇಖರ ಅಂಗಡಿ ಸಂದ್ಯಾ ಮಾದಿನೂರ, ಸರೋಜಾ ಬಾಕಳೆ ಸೇರಿದಂತೆ ಹಲವಾರು ಸಂಘಟನೆಯವರು ಉಪಸ್ಥಿತರಿದ್ದರು.
0 comments:
Post a Comment