PLEASE LOGIN TO KANNADANET.COM FOR REGULAR NEWS-UPDATES

ಭಾರತ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ನಮಗೆ ವಿಶೇಷ ಮೀಸಲಾತಿ ನೀಡಲು ಅವಕಾಶ ನೀಡಿದೆ ಹಾಗೂ ಕರ್ನಾಟಕ ರಾಜ್ಯ ಸರಕಾರ ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ ೩೭೧(ಜೆ) ಕಲಂ ಅಡಿಯಲ್ಲಿ ಕಾನೂನು ರಚಿಸಿ ಜಾರಿಗೆ ತಂದಿರುವದು ಸಂತೋಷದಾಯಕವಾಗಿದೆ. ಕನಾಟಕ ರಾಜ್ಯದಲ್ಲಿ ೧೯೫೬ರಿಂದಲೂ ಮಲತಾಯಿ ಮಕ್ಕಳಂತೆ ಬದುಕುತಿದ್ದ ಹೈದ್ರಾಬಾದ ಕರ್ನಾಟಕದ ಜನತೆಗೆ ಸಂವಿಧಾನದ ೩೭೧ನೇ ಕಲಂ ತಿದ್ದುಪಡಿ ಒಂದು ಉರುಗೋಲು ಆಗಿದೆ. ಆದರೆ, ಕರ್ನಾಟಕ ರಾಜ್ಯ ಸರಕಾರ ಆ ಉರುಗೋಲನ್ನೂ ಕಿತ್ತುಕೊಳ್ಳಲು ಹೊರಟಿದ್ದು ಆಶ್ಚರ್ಯಕರವಾಗಿದೆ. ೩೭೧(ಜೆ) ಕಲಂ ಅಡಿಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಹೈದ್ರಾಬಾಧ ಕರ್ನಾಟಕದ ಜನತೆಗೆ ದೊರಕುವಂತೆ ಆಳುವ ಸರಕಾರಗಳು ಕಾಳಜಿವಹಿಸಿ ಮಾಡಬೇಕು, ಅದೇ ರೀತಿ ಹೈದ್ರಾಬಾಧ ಕರ್ನಾಟಕದ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಪರಿಣಾಮಕಾರಿಯಾಗಿ ಅದನ್ನು ಜಾರಿಗೊಳಿಸುವ ಕೆಲಸ ಮಾಡಬೇಕು.  

ಆದರೆ, ಕಾನೂನು ರಚಿಸಿದ ಸರಕಾರದ ಅಧಿಕಾರಿಗಳೇ ಅದನ್ನು ಉಲ್ಲಂಘಿಸಿ ನೇಮಕಾತಿ ಮಾಡುತ್ತಿರುವದು ನಮಗೆಲ್ಲ ದಿಗಭ್ರಮೆ ಮೂಡಿಸಿದೆ. ಈಗಾಗಲೇ, ಕರ್ನಾಟಕ ರಾಜ್ಯ ಸರಕಾರ ೨೩-೦೨-೨೦೧೩ ರಂದು ಆದೇಶ ಹೊರಡಿಸಿ ಹೈದ್ರಾಬಾದ ಕರ್ನಾಟಕದಲ್ಲಿ ನಡೆಯುತ್ತಿರುವ ಎಲ್ಲ ನೇಮಕಾತಿಗಳನ್ನು ತಡೆಹಿಡಿದಿತ್ತು. ನವೆಂಬರ್ ತಿಂಗಳಿನಲ್ಲಿ ಮತ್ತೊಂದು ಆದೇಶ ಮಾಡಿ ೦೧-೦೧-೨೦೧೩ರ ನಂತರ ಹೊರಡಿಸಲಾದ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ವಾಪಸ ಪಡೆದು ಹೈದ್ರಾಬಾದ ಕರ್ನಾಟಕಕ್ಕೆ ಮೀಸಲಾತಿ ನಿಗದಿಗೊಳಿಸಬೇಕೆಂದು ಆದೇಶೀಸಿದೆ. ಆದರೆ, ಸರಕಾರದ ಆದೇಶಗಳನ್ನು ಉಲ್ಲಂಘಿಸಿ ವಿವಿಧ ಇಲಾಖೆಗಳಲ್ಲಿ ಹಲವಾರು ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಹೈದ್ರಾಬಾದ ಕರ್ನಾಟಕದ ಅಭ್ಯರ್ಥಿಗಳ ಮೀಸಲಾತಿ ಹೊರತುಪಡಿಸಿ ನೀಡಲಾಗಿದ್ದು ಮತ್ತು ಕೆಲವೊಂದು ಇಲಾಖೆಗಳಲ್ಲಿ ತರಾತುರಿಯಲ್ಲಿ ನೇಮಕಾತಿ ಆದೇಶಗಳನ್ನು ನೀಡಲಾಗಿದೆ.


ವಿಶ್ವೆಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ೩೬ ಖಾಯಂ ೧೯-೦೩-೨೦೧೩ ನೇಮಕಾತಿ ಆದೇಶ ನೀಡಲಾಗಿದೆ
ವಿಶ್ವೆಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ೪೮ ಖಾಯಂ ೧೯-೦೩-೨೦೧೩ ನೇಮಕಾತಿ ಆದೇಶ
ಕೆ.ಎಂ.ಎಫ್., ಬೆಂಗಳೂರು ೨೦೭ ಖಾಯಂ ೦೪-೦೯-೨೦೧೩ ಆಯ್ಕೆ ಪಟ್ಟಿಯಾಗಿದೆ
ಕೆ.ಎಂ.ಎಫ್., ಬೆಂಗಳೂರು ೦೪ ಖಾಯಂ ೧೬-೧೨-೨೦೧೩ ಪ್ರಗತಿಯಲ್ಲಿದೆ
ಆರೋಗ್ಯ ಇಲಾಖೆ (ಏಡ್ಸ್ ನಿಯಂತ್ರಣ ಸಂಸ್ಥೆ), ಬೆಂಗಳೂರು ೧೮೪ ಗುತ್ತಿಗೆ ಆಧಾರಿತ ೦೭-೧೦-೨೦೧೩ ನೇಮಕಾತಿ ಆದೇಶ ನೀಡಲಾಗಿದೆ
ಸೊಸೈಟಿ ಫಾರ್ ಕರ್ನಾಟಕ-ಜರ್ಮನ ಸ್ಕಿಲ್ ಡೆವೆಲಪಮೆಂಟ ಸೆಂಟರ್, ಕಾರ್ಮಿಕಇಲಾಖೆ ೩೫ ಖಾಯಂ ೧೫-೧೧-೨೦೧೩ ಪ್ರಗತಿಯಲ್ಲಿದೆ
ಆರೋಗ್ಯ ಇಲಾಖೆ, ಬೆಂಗಳೂರು ೧೦ ಗುತ್ತಿಗೆ ಆಧಾರಿತ ೦೭-೧೨-೨೦೧೩ ಪ್ರಗತಿಯಲ್ಲಿದೆ
ಆರೋಗ್ಯ ಇಲಾಖೆ,  ಬೀದರ ೨೦ ಗುತ್ತಿಗೆ ಆಧಾರಿತ ೧೩-೧೨-೨೦೧೩ ಪ್ರಗತಿಯಲ್ಲಿದೆ
ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ೭೮ ಹೊರ ಗುತ್ತಿಗೆ ೦೭-೧೨-೨೦೧೩ ಪ್ರಗತಿಯಲ್ಲಿದೆ
೧೦ ತೋಟಗಾರಿಕೆ ಇಲಾಖೆ, ಬಾಗಲಕೋಟ ೭೬ ಖಾಯಂ ೧೬-೮-೨೦೧೩ ಆಯ್ಕೆಯಾಗಿದೆ
೧೧  BMTC Bangalore ೧೨೦೭ ಖಾಯಂ ೧೪-೦೨-೨೦೧೪ ಪ್ರಗತಿಯಲ್ಲಿದೆ
೧೨ Karnataka Police Dept ೨೭೫೦ ಖಾಯಂ ೨೬-೦೨-೨೦೧೪ ಪ್ರಗತಿಯಲ್ಲಿದೆ
ಕಾರಣ, ಇಲಾಖೆ ಮುಖ್ಯಸ್ಥರನ್ನು ವಿಚಾರಿಸಲಾಗಿ, ಅವರು ಮುಖ್ಯಮಂತ್ರಿಗಳೇ ಸಂವಿಧಾನ ಉಲ್ಲಂಘಿಸಿ ನೇಮಕಾತಿಗಾಗಿ ವಿಶೇಷ ಅನುಮತಿ ನೀಡಿದ್ದು ನಾವೇನು ಮಾಡಲು ಬರುವದಿಲ್ಲ ಎಂದು ಅಸಾಹಯಕತೆ ತೋಡಿಕೊಂಡಿರುತ್ತಾರೆ. ಒಂದು ರಾಜ್ಯದ ಮುಖ್ಯಮಂತ್ರಿಗಳೇ ಈ ರೀತಿ ಸಂವಿಧಾನ ಉಲ್ಲಂಘಿಸುತ್ತಿರುವದು ಖಂಡನೀಯವಾಗಿರುತ್ತದೆ ಮತ್ತು ಕಣ್ಣೋರೆಸುವ ತಂತ್ರಗಾರಿಕೆಯನ್ನು ಬಿಡಬೇಕೆಂದು ಆಗ್ರಹಿಸುತ್ತೇವೆ. ಆದ್ದರಿಂದ, ಸರಕಾರದ ಆದೇಶದಂತೆ ೦೧-೦೧-೨೦೧೩ರ ನಂತರ ಹೊರಡಿಸಲಾದ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ಹಿಂದಕ್ಕೆ ಪಡೆದು ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನ ಬದ್ದ ಮೀಸಲಾತಿಯನ್ನು ನಿಗದಿಗೊಳಿಸಿ ಮರು ಅಧಿಸೂಚನೆಯನ್ನು ಹೊರಡಿಸಲು ಸೂಕ್ತ ಆದೇಶ ನೀಡಬೇಕು ಹಾಗೂ ಯಾವ ಹುದ್ದೆಗಳಿಗೆ ಈಗಾಗಲೇ  ನೇಮಕಾತಿ ಆದೇಶ ನೀಡಲಾಗಿದೆ ಅವುಗಳನ್ನೂ ವಾಪಸ ಪಡೆಯಬೇಕೆಂದು ಆಗ್ರಹಿಸಿ ರಜಾಕ್ ಉಸ್ತಾದ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

Advertisement

0 comments:

Post a Comment

 
Top