ನಿರ್ಮಲ ಭಾರತ ಅಭಿಯಾನ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ೧೫ ಅಂಶಗಳ ಕಾರ್ಯಕ್ರಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸಲು ಚೈತನ್ಯ ರಥ ಕಾರ್ಯಕ್ರಮವನ್ನು ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತಿಯಲ್ಲಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಚಾಲನೆ ನೀಡಿದರು.
ಚೈತನ್ಯ ರಥ ಯಾತ್ರೆ ಮೂಲಕ ಮತ್ತು ದಲಿತಕಲಾ ಮಂಡಳಿಯಿಂದ ಜನಪದ ಹಾಗೂ ಬೀದಿ ನಾಟಕದ ಮುಖಾಂತರ ಸರ್ಕಾರದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ನಿರ್ಮಲ ಭಾರತ ಯೋಜನೆ, ಸಾಕ್ಷರ ಭಾರತ ಯೋಜನೆಗಳ ಮಹತ್ವವನ್ನು ಜನರಿಗೆ ತಿಳಿಸಲಾಯಿತು. ಅಲ್ಲದೇ ನಮ್ಮ ಹೊಲ ನಮ್ಮ ದಾರಿ, ರೈತರ ಕಣ, ಮನೆಗೊಂದು ಶೌಚಾಲಯ, ರಾಜೀವ್‌ಗಾಂಧಿ ಚೈತನ್ಯ ಯೋಜನೆ, ಇಂಗು ಗುಂಡಿ ನಿರ್ಮಾಣ, ಸ್ಮಶಾನ ಅಭಿವೃದ್ದಿ, ನಮ್ಮ ಹಳ್ಳಿ ನಮ್ಮ ನೀರು, ರಾಜೀವ್ ಗಾಂಧಿ ಸೇವಾ ಕೇಂದ್ರ, ಕುರಿ/ದನದ ದೊಡ್ಡಿ, ಕೃಷಿಕ ಮಹಿಳೆ ಸಶಕ್ತೀಕರಣ, ಸಂಜೀವಿನಿ ಮುಂತಾದ ಯೋಜನೆಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.
ಗ್ರಾ.ಪಂ.ಅಧ್ಯಕ್ಷರು, ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 comments:
Post a Comment