ಅಪ್ರತಿಮ ದೇಶ ಭಕ್ತ, ಸ್ವಾಮಿನಿಷ್ಠ, ಗೆರಿಲ್ಲಾ ತಂತ್ರದಿಂದ ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಸಂಗೊಳ್ಳಿ ರಾಯಣ್ಣ ಆದರ್ಶಗಳನ್ನು ಎಲ್ಲರು ಅಳವಡಿಸಿಕೊಳ್ಳಬೇಕಾಗಿದೆ ಎಂದು ಲೇಬಗೇರಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಮಹಾಂತೇಶ ಸೊಪ್ಪಿಮಠ ಅಭಿಪ್ರಾಯ ಪಟ್ಟರು.
ಅವರು ಕೊಪ್ಪಳ ತಾಲೂಕಿನ ಹನುಮನಹಳ್ಳಿ ಶಾಲೆಯಲ್ಲಿ ಕನ್ನ
ಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ನಾಟಕದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ಮಕ್ಕಳನ್ನು ರಂಗಭೂಮಿಯತ್ತ ಆಕರ್ಷಿಸಲು ಇಂತಹ ಕಾರ್ಯಕ್ರಮಗಳು ಅವಶ್ಯ. ಅಲ್ಲದೇ ರಂಗಭೂಮಿಯೂ ಜೀವಂತ ಕಲೆಯಾಗಿದ್ದು ಆಸಕ್ತಿದಾಯಕ, ಸಂತಸದಾಯಕ ಕಲಿಕೆಯನ್ನು ವೃದ್ಧ್ದಿಗೊಳಿಸುತ್ತದೆ ಎಂದರು.
ವಿದ್ಯಾರ್ಥಿಗಳು ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದರು.
ವೇದಿಕೆಯ ಮೇಲೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಉಮೇಶಪ್ಪ ಬಡಿಗೇರ, ಕುಬೇರಪ್ಪ ಬಡಿಗೇರ, ದುರಗಪ್ಪ ಬಡಿಗೇರ, ಯಮನೂರಪ್ಪ ಬಗನಾಳ, ಗ್ರಾ.ಪಂ ಸದಸ್ಯರಾದ ಯಡಿಯೂರಪ್ಪ ಬೋವಿ, ಶ್ರೀಮತಿ ಸಿದ್ದಮ್ಮ ಮುರಡಿ, ಮುಖ್ಯೋಪಾಧ್ಯಯರಾದ ಮಲ್ಲಪ್ಪ ಹವಳಿ, ಶಿಕ್ಷಕರಾದ ಮುರಗೇಶ ಸಜ್ಜನ, ಪ್ರಾಣೇಶ ಪೂಜಾರ, ನಟರಾಜ ಹೆಚ್, ಯಮನಪ್ಪ, ಚೈಲ್ಡ್‌ಲೈನ್ ತಂಡದ ಸದಸದ್ಯರಾದ ರಾಘವೇಂದ್ರ ಕುಲಕರ್ಣಿ, ಐ.ಎಲ್.ಪಿ ಸಂಯೋಜಕರಾದ ಶ್ರೀಮತಿ ರುದ್ರಮ್ಮ, ಶಿಕ್ಷಕಿಯರಾದ ಶ್ರೀಮತಿ ವಿಜಯಲಕ್ಷ್ಮೀ ಬಿಳಗಿ, ಸಿ.ಆರ್.ಪಿ ಶರಣಪ್ಪ ಬಿಸನಳ್ಳಿ, ಗಿಣಗೇರ ಹಾಗೂ ಇರಕಲ್‌ಗಡಾ ಕ್ಲಸ್ಟ್‌ರ್ ವ್ಯಾಪ್ತಿಯ ಶಿಕ್ಷಕರು ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 comments:
Post a Comment