PLEASE LOGIN TO KANNADANET.COM FOR REGULAR NEWS-UPDATES

  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲಕ್ಕಾಗಿ ಸಂಸ್ಥೆಯ ಪ್ರತಿಷ್ಠಿತ, ದೂರದ ಮತ್ತು ರಾತ್ರಿ ಸಾರಿಗೆಗಳಿಗೆ ಮುಂಗಡ ಆಸನಗಳನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು ಜಾರಿಗೆಗೊಳಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್.ಶಿವಮೂರ್ತಿ ಅವರು ತಿಳಿಸಿದ್ದಾರೆ.
        ಅವತಾರ್(Any where Any Time Advance Reservation-AWTARಅಡಿಯಲ್ಲಿ ಸಂಸ್ಥೆಯ ಪ್ರಮುಖ ಪಟ್ಟಣ, ನಗರಗಳ ಬಸ್ ನಿಲ್ದಾಣಗಳಲ್ಲಿ ಸಂಸ್ಥೆಯ ಬುಕ್ಕಿಂಗ್ ಕೌಂಟರ್‌ಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಬಡಾವಣೆ ಮತ್ತು ಸ್ಥಳಗಳಲ್ಲಿ ಖಾಸಗಿ ಅವತಾರ ಏಜೆಂಟರನ್ನು ಆಯ್ಕೆ ಮಾಡಿಕೊಂಡಿದ್ದು, ಈ ಬುಕ್ಕಿಂಗ್ ಕೌಂಟರ್‌ಗಳನ್ನೂ ಸಹ ಸಾರ್ವಜನಿಕರು ಉಪಯೋಗಿಸಬಹುದಾಗಿದೆ. 
ಬುಕಿಂಗ್ ಕೌಂಟರ್‌ಗಳ ವಿವರ : ಗಂಗಾವತಿಯ ಸಿಬಿಎಸ್ ಕಾಂಪ್ಲೆಕ್ಸ್-ಮೊ.೯೯೧೬೮೮೩೦೪೮, ಗಾಂಧಿಚೌಕ್-೯೨೪೨೭೨೨೨೨೨. ಬಸ್ ಸ್ಟ್ಯಾಂಡ್ ರಸ್ತೆ-೯೪೪೮೦೨೯೦೦೯/೯೦೬೦೬೬೬೫೧೧, ಸರೋಜಮ್ಮ ನಗರ- ೮೭೨೨೮೨೨೫೨೬. ಕಾರಟಗಿಯಲ್ಲಿ ಕೊಪ್ಪಳ ರಸ್ತೆ -೯೭೩೧೧೦೭೪೫೨/೮೯೦೪೨೬೮೧೬೦. ಎಲ್‌ವಿಟಿ ಲಾಡ್ಜ್ ಎದುರು, ಕಾರಟಗಿ-೯೯೪೫೪೫೮೦೫೫. ಸಾಣಾಪುರ ಪೋಸ್ಟ್ ಗಂಗಾವತಿ-೯೪೪೮೯೬೯೮೦೯, ಬಸವಣ್ಣ ಸರ್ಕಲ್ ಗಂಗಾವತಿ-೯೬೩೨೧೦೩೫೩೬, ಕೊಪ್ಪಳ ಗವಿಮಠ ರಸ್ತೆ-೯೪೪೮೮೨೮೪೮೪.  ಸಾರ್ವಜನಿಕರು ಬಸ್ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಲು ಪ್ರಾರಂಭಿಸಿರುವ ಬುಕಿಂಗ್ ಕೌಂಟರ್‌ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Advertisement

0 comments:

Post a Comment

 
Top