ಶಾಲಾ ಶಿಕ್ಷಕರೊಂದಿಗೆ ಪಾಲಕರು ಮಕ್ಕಳ ಬಗ್ಗೆ ಪಾಲನೆಯಲ್ಲಿ ವಿಶೇಷ ಆಸಕ್ತಿ ವಹಿಸಿದಲ್ಲಿ ದೇಶದ ಉನ್ನತ ಹುದ್ದೆಗಳನ್ನು ಏರಿ ದೇಶವನ್ನು ಮುನ್ನಡೆಸುವ ಮಹಾನ್ ಶಕ್ತಿವಂತರಾಗುತ್ತಾರೆ. ತಾಯಿ ಪ್ರೀತಿ, ಮಮತೆ, ಸ್ಪೂರ್ತಿ ಎಂತಹದು ಎಂಬುದಕ್ಕೆ ಓರ್ವ ಪತ್ರಿಕೆ ಹಂಚುವ ಕೆಲಸ ಮಾಡುವ ಮೂಲಕ ರಾಷ್ಟ್ರಪತಿ ಹುದ್ದೆಗೆ ಏರಿದ ಮಾಜಿ ರಾಷ್ಟ್ರಪತಿ ಡಾ|ಎ.ಪಿ.ಜೆ. ಅಬ್ದುಲ್ ಕಲಾಂರವರು ಹಾಗೂ ಓರ್ವ ಅಂಗವಿಕಲ ಯುವಕ (ಆಸ್ಟ್ರಿನ್) ಓಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ
ಮೂಲಕ ಸಾಧನೆ ಮಾಡಿದವರನ್ನು ಉದಾಹರಿಸುವ ಮೂಲಕ ತಂದೆ-ತಾಯಿಗಳ ಪಾತ್ರದ ಕುರಿತು ಮಕ್ಕಳಿಗೆ ಕನ್ನಡ ಪ್ರಭ ಜಿಲ್ಲಾ ವರದಿಗಾರ ಸೋಮರಡ್ಡಿ ಅಳವಂಡಿ ತಿಳಿಸಿದರು.
ಅವರು ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ಶ್ರೀಗವಿಶ್ರೀ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆಯ ಬೇಂದ್ರೆ ಪಬ್ಲಿಕ್ ಸ್ಕೂಲ್ ಶಾಲಾ ವಾರ್ಷಿಕೋತ್ಸವ ಹಾಗೂ ಬೇಂದ್ರೆಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳ ಬೆಳವಣಿಗೆಗೆ ಶಿಕ್ಷಣದಷ್ಟೇ ತಾಯಿಯ ಆರೈಕೆ ಮಗು ಗುರಿ ಮುಟ್ಟಲು ಪ್ರೇರಣೆ ಅತಿ ಮುಖ್ಯ. ಹೀಗಾಗಿ ಪಾಲಕರು ಇಂದಿ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಸ್ಪರ್ಧೆ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕೆಂದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಈ ಟಿ ವಿ ಜಿಲ್ಲಾ ವರದಿಗಾರ ಶರಣಪ್ಪ ಬಾಚಲಾಪುರ ಮಾತನಾಡುತ್ತ, ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳ ನಗರದಲ್ಲಿ ದೊರೆಯುವ ಶಿಕ್ಷಣ ಗ್ರಾಮೀಣ ಪ್ರದೇಶವಾದ ಗಿಣಿಗೇರಿಯಲ್ಲಿ ಬೇಂದ್ರೆ ಪಬ್ಲಿಕ್ ಸ್ಕೂಲ್ ನೀಡುತ್ತಿದ್ದು, ಶಾಲಾ ಮಕ್ಕಳ ಪ್ರತಿ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಈ ಶಾಲಾ ಶಿಕ್ಷಕರ ಶ್ರಮ, ಮತ್ತು ತರಬೇತಿ ಅತ್ಯುತ್ತಮವಾಗಿದೆ.
ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗುತ್ತಿದ್ದ ಖಾಸಗಿ ಶಾಲೆಗಳ ಶಿಕ್ಷಣ ಗ್ರಾಮೀದಲ್ಲೂ ಸಿಗುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಕಾಂಗ್ರೆಸ್ ಮುಖಂಡ ಗೂಳಪ್ಪ ಹಲಗೇರಿ ಮಾತನಾಡುತ್ತ, ಹೈದ್ರಾಬಾದ್-ಕರ್ನಾಟಕಕ್ಕೆ ೩೭೧ ನೇ (ಜೆ) ಕಲಂ ಅನುಷ್ಠಾನ ಮಾಡಿದ್ದು ಇಂದಿನ ಮಕ್ಕಳಿಗೆ ವರದಾನವಾಗಿದ್ದು, ನಮ್ಮ ಭಾಗದ ಎಲ್ಲ ಮಕ್ಕಳಿಗೂ ಸರ್ಕಾರಿ ನೌಕರಿ ಸಿಗಲಿದೆ. ಹೀಗಾಗಿ ಎಲ್ಲರೂ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಏರುವ ಮೂಲಕ ತಂದೆ-ತಾಯಿಗಳಿಗೆ, ಗ್ರಾಮಕ್ಕೆ ಹಾಗೂ ಶಾಲೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ದೇಶಪಾಂಡೆ ವಹಿಸಿದ್ದರು. ವೇದಿಕೆ ಮೇಲೆ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮವ್ವ ಪೂಜಾರ, ಸದಸ್ಯರಾದ ಮಲ್ಲಿಕಾರ್ಜುನ ಹಲಗೇರಿ, ಮುಖಂಡರಾದ ಮುತ್ತು ಪೂಜಾರ, ಗುರುಸ್ವಾಮಿ, ಗುದ್ನೆಪ್ಪ ಹೊಸೂರು, ಪುತ್ರಪ್ಪ ಅಬ್ಬಗೇರಿ ಹಾಜರಿದ್ದರು.
ಸನ್ಮಾನ : ಇದೇ ಸಂದರ್ಭದಲ್ಲಿ ಶಾಲೆಗೆ ಸ್ಥಳ ನೀಡಿದ ಊರಿನ ಹಿರಿಯರಾದ ಸುಬ್ಬಣ್ಣಾಚಾರ್ಯ ಇವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಮೇಘನಾ ಹಾಗೂ ಚೈತ್ರಾ ಪ್ರಾರ್ಥಿಸಿದರು. ಸಂಸ್ಥೆಯ ಉಪಾಧ್ಯಕ್ಷ ರಮೇಶ ತುಪ್ಪದ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಬಸವರಾಜ ಶಿರಗುಂಪಿಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶಾರದಾ ಕೊರಗಲ್ ನಿರೂಪಿಸಿದರೆ, ಸಂಸ್ಥೆಯ ಕಾಂiiದರ್ಶಿ ಮಂಜುನಾಥ ಅಂಗಡಿ ವಂದಿಸಿದರು.
ನಂತರ ಶಾಲಾ ಮಕ್ಕಳಿಂದ ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
0 comments:
Post a Comment