PLEASE LOGIN TO KANNADANET.COM FOR REGULAR NEWS-UPDATES

 ತಾಲೂಕಿನ ಡೊಂಬರಹಳ್ಳಿ ಗ್ರಾಮದಲ್ಲಿ ಫೆ.೩ ಮತ್ತು ೪ ರಂದು ಗ್ರಾಮ ದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಗಾಳೆಮ್ಮ ದೇವಿ ಮೂತಿ೯ ಪ್ರತಿಷ್ಠಾಪನೆ ಕಾಯ೯ಕ್ರಮಗಳು  ಜರುಗಲಿವೆ. 
ಫೆ.೩ ರಂದು ದೇವಿಯನ್ನು ಗಂಗೆಗೆ ಕರೆದುಕೊಂಡು ಹೋಗುವುದು. ಮುತೈದೆಯರಿಂದ ೧೦೧ ಕುಂಭ ಹೊರುವ ಕಾಯ೯ಕ್ರಮ ನಡೆಯಲಿದೆ. ಅಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾಯ೯ಕ್ರಮವನ್ನು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಸಂಗಣ್ಣ ಕರಡಿ ಅಧ್ಯಕ್ಷತೆ ವಹಿಸಲಿದ್ದಾರೆ. 
ಕಾಯ೯ಕ್ರಮದಲ್ಲಿ ಟಚ್  ಪಾರ್ ಲೈಫ್ ಪೌಂಡೇಶನ್  ಅಧ್ಯಕ್ಷ ನಾರಾ ಭರತರಡ್ಡಿ,ತಾ.ಪಂ ಅಧ್ಯಕ್ಷ ಮುದೇಗೌಡ ಮಾಲಿ ಪಾಟೀಲ್,ಜಿಪಂ ಸದಸ್ಯೆ ಭಾಗೀರತಿ ಮಾಲಿಪಾಟೀಲ್,ಕಾತರಕಿ-ಗುಡ್ಲಾನೂರು ಗ್ರಾಪಂ ಅಧ್ಯಕ್ಷ ಯಲ್ಲನಗೌಡ ಮಾಲಿಪಾಟೀಲ್, ಜಿಲ್ಲಾ ವಾತಾ೯ಧಿಕಾರಿ ಬಿ.ವಿ.ತುಕಾರಾಂ,ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿದೇ೯ಶಕ ಸಿ.ಕೊಟ್ರಪ್ಪ,ಪ್ರಾಧ್ಯಾಪಕ ರಾಮಚಂದ್ರಗೌಡ ಪಾಟೀಲ್, ಕೊಪ್ಪಳ,ಬಳ್ಳಾರಿ,ರಾಯಚೂರು ಹಾಲು ಉತ್ಪಾಧಕರ ಸಂಘದ ನಿದೇ೯ಶಕ ನಾಗನಗೌಡ ನಂದನಗೌಡ,ಕಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಷ್ಣಾರಡ್ಡಿ ಗಲಬಿ,ರೋಣ ಸಿಪಿಐ ವೆಂಕಟಪ್ಪ ನಾಯಕ,ಪ್ರಾಚಾಯ೯ ಬಾಳನಗೌಡ ಪೊಲೀಸ್ ಪಾಟೀಲ್,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿರೇಶ ಲಕ್ಷಾಣಿ,ಡೊಂಬರಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪರಸರಡ್ಡಿ ಅಳವಂಡಿ, ರಡ್ಡಿ ಬ್ಯಾಂಕ್ ನಿದೇ೯ಶಕ ತಿಮ್ಮರಡ್ಡಿ ಕರಡ್ಡಿ,ಗ್ರಾಪಂ ಸದಸ್ಯ ದೇವರಡ್ಡಿ ಮಾಟ್ರ,ಮಹಾದೇವಪ್ಪ ಹುಚ್ಚಣ್ಣನವರ್ ಅವರು ಪಾಲ್ಗೊಳ್ಳಲಿದ್ದಾರೆ.
ಸಂಜೆ ೭.೩೦ ಗಂಟೆಗೆ ನಡೆಯುವ ಸಾಂಸ್ಕೃತಿಕ ವೈಭವ ಕಾಯ೯ಕ್ರಮವನ್ನು  ಜೀವನಸಾಬ್ ಬಿನ್ನಾಳ ತಂಡ ನಡೆಸಿಕೊಡಲಿದೆ. ರಾತ್ರಿ ೮.೩೦ ಗಂಟೆಗೆ ಹುಲಿಕಲ್ ನಟರಾಜ್ ಅವರದಿಂದ ಪವಾಡ ಬಯಲು ಕಾಯ೯ಕ್ರಮ ನಡೆಯಲಿದೆ. ಪ್ರವೀಣ ಗೋಕಾಕ್ ಹಾಗೂ ಮಾರೇಶ ಅಗಳಕೇರಾ ಅವರಿಂದ ನಗೆ ನಗಾರಿ ಕಾಯ೯ಕ್ರಮ ರಾತ್ರಿ ೯.೩೦ ಗಂಟೆಗೆ ನಡೆಯಲಿದೆ. ಶಿಕ್ಷಕ ರಾಣ್ಣ ಬಾರಕೇರ ಹಾಗೂ ಚಂದ್ರಶೇಖರ ಕಾವಲಿ ಅವರು ಕಾಯ೯ಕ್ರಮ ನಿರೂಪಣೆ ನಡೆಸಲಿದ್ದಾರೆ.
ಫೆ,೪ ರಂದು ಬೆಳಗಿನ ಜಾವ ೫ ಗಂಟೆಗೆ ಗಾಳೆಮ್ಮದೇವಿ ಅಗ್ನಿಕುಂಡ ಹಾಗೂ ಪ್ರತಿಷ್ಠಾಪನೆ ಕಾಯ೯ಕ್ರಮ ಜರುಗಲಿದೆ. ೬.೩೦ಕ್ಕೆ ಗ್ರಾಮದೇವತೆ ದೇವಾಲಯ ಶುದ್ದೀಕರಣ,೮ ಗಂಟೆಗೆ ಗಣಪತಿ ಪೂಜೆ,ನವಗ್ರಹಪೂಜಾ, ಪಂಚಬ್ರಹ್ಮ ಪೂಜಾ, ವಾಸ್ತುಗೌರಿ ಪೂಜಾ ನಡೆಯಲಿದೆ.೧೧ಗಂಟೆಗೆ ಗಣಹೋಮ,ನವಗ್ರಹ ಹೋಮ,ಪಂಚಬ್ರಹ್ಮ ಹೋಮ,ದುಗಾ೯ ಹೋಮ ಮಂಗಳಾರತಿ ನಡೆಯಲಿದೆ. 
ಮಧ್ಯಾಹ್ನ ೧.೩೦ಗಂಟೆಗೆ ಮಹಾ ಪ್ರಸಾದ ನಡೆಯಲಿದೆ. ಮಧ್ಯಾಹ್ನ ೩ ಗಂಟೆಗೆ ಕಿನ್ನಾಳದ  ಶ್ರೀ ಜೈ ಹನುಮಾನ್ ಗರಡಿ ಮನೆಯ ಕಲಾವಿದರಿಂದ ಮಲ್ಲಗಂಬ ಕತ್ತಿವರಸೆ,ಸಂಜೆ ೬ ಗಂಟೆಗೆ ಧಾಮಿ೯ಕ ಸಭೆ ನಡೆಯಲಿದೆ. ಸಭೆಯ ದಿವ್ಯ ಸಾನಿಧ್ಯವನ್ನು ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ವಹಿಸುವರು. ಗದಗ-ಬಿಜಾಪೂರದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ನಿಭ೯ಯಾನಂದ ಸರಸ್ವತಿ ಮಹಾ ಸ್ವಾಮೀಜಿ,ಹೊಸಳ್ಳಿ-ಹರಿಹರದ ವೇಮನ ಸಂಸ್ಥಾನಮಠದ ವೇಮನಾನಂದಪುರಿ ಮಹಾ ಸ್ವಾಮಿಗಳು,ಮೂರು ಸಾವಿರ ಮಠದ ಕುಮಾರ ವಿರುಪಾಕ್ಷಸ್ವಾಮಿಗಳು ಸಾನಿಧ್ಯ ವಹಿಸುವರು.
ಕಾಯ೯ಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೆರವೇರಿಸುವರು. ಅಧ್ಯಕ್ಷತೆಯನ್ನು ವಿಪ ಸದಸ್ಯ ಹಾಲಪ್ಪ ಆಚಾರ್ ವಹಿಸುವರು, ಸಂಸದ ಶಿವರಾಮಗೌಡ,ಜಿಪಂ ಅಧ್ಯಕ್ಷ ಟಿ.ಜನಾಧ೯ನ ಹುಲಗಿ,ಜಿಪಂ ಮಾಜಿ ಅದ್ಯಕ್ಷ ಹೆಚ್.ಎಲ್.ಹಿರೇಗೌಡ್ರ,ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಈಶಪ್ಪ  ಮಾದಿನೂರು,ಮೀಡಿಯಾ ಕ್ಲಬ್ ಅಧ್ಯಕ್ಷ ಜಿಲ್ಲಾ ವರದಿಗಾರ ಸೋಮರಡ್ಡಿ ಅಳವಂಡಿ,ಎಪಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್ ಅವರು ಪಾಲ್ಗೊಳ್ಳುವರು.
ಸಂಜೆ ೭.೩೦ ಗಂಟೆಗೆ ಪ್ರಕಾಶ ಜೈನ್ ದಾಸನಹಳ್ಳಿ ಅವರಿಂದ ಸುಗಮಸಂಗೀತ ಮೂಡಿಬರಲಿದೆ. ಪ್ರಾಚಾಯ೯ ಟಿ.ವಿ.ಮಾಗಳದ ಅವರಿಂದ ಅವ್ವ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಸಿಪಿಐ ವೆಂಕಟಪ್ಪ ನಾಯಕ,ನಿವೃತ್ತ ಅಧಿಕಾರಿ ಶಿವಪುತ್ರಪ್ಪ ಅಳವಂಡಿ,ನಿವೃತ್ತ ಕೃಷಿ ಅಧಿಕಾರಿ ವೆಂಕಣ್ಣ ನಾಯಕ್,ಶಿಕ್ಷಕಿ ಭಾಗೀಥಿ ನಿಂಗನಗೌಡ ಯಲ್ಲನಗೌಡ್ರ,ವಿಜಯಲಕ್ಷ್ಮೀ ಪೊಲೀಸ್ ಪಾಟೀಲ್,ಕು.ದೇವಮ್ಮ ರಾಮಣ್ಣ ನಾಯಕ,ಬಾಲಚಂದ್ರ ನಾಯಕ,ವಾಸನಗೌಡ ಶಿವನಗೌಡ್ರ ಅವರಿಗೆ ಸನ್ಮಾನ ಕಾಯ೯ಕ್ರಮ ನಡೆಯಲಿದೆ. ರಾತ್ರಿ ೧೦ ಗಂಟೆಗೆ ಬಸವರಾಜ ಮಾಲಗಿತ್ತಿ ಅವರ ರಿದಮ್ ಅಕಾಡೆಮಿಯಿಂದ ನೃತ್ಯ ವೈಭವ ಜರುಗಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ದೇವರಡ್ಡಿ ಮಾಟ್ರ ಹಾಗೂ ಮಹದೇವಪ್ಪ ಹರಿಜನ ಅವರು ತಿಳಿಸಿದ್ದಾರೆ.   

Advertisement

0 comments:

Post a Comment

 
Top