PLEASE LOGIN TO KANNADANET.COM FOR REGULAR NEWS-UPDATES

 ಸ್ವಾಮಿ ವಿವೇಕಾನಂದರ ಆದರ್ಶಗಳನ್ನು, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೂ ಅವರು ಹೇಳಿದ ಏಳೀ ಎದ್ದೇಳಿ ಗುರಿಮುಟ್ಟುವವರೆಗೆ ನಿಲ್ಲದಿರಿ ಎಂದು ಯುವಕರಿಗೆ ಬಡಿದೆಬ್ಬಿಸಿದ್ದಾರೆ ಅದರಂತೆ ನಾವೆಲ್ಲರೂ ನಡೆದುಕೊಳ್ಳೋಣ.ದೇಶದ ಅಭಿವೃದ್ದಿಗಾಗಿ ಶ್ರಮಿಸೋಣ.ಅಂದು ನಮ್ಮ ದೇಶ ಅಭಿವೃದ್ಧಿ ದೇಶ ವಾಗುವುದು ಆಗ ನಮ್ಮ ದೇಶ ಒಂದು ವಿಶ್ವಕ್ಕೆ ಮಾದರಿ ರಾಷ್ಟ್ರವಾಗುವದರಲ್ಲಿ ಸಂಶಯವಿಲ್ಲ.ನಮ್ಮ ದೇಶದ ಸಂಸ್ಕೃತಿಯಿಂದಲೇ ಬೇರೆ-ಬೇರೆ ದೇಶಗಳ ಸಂಸ್ಕೃತಿ ಪ್ರಾರಂಭವಾಗಿವೆ ಎಂದು ನಂದೇಶ್ವರ ಶಾಲೆಯ ಮುಖ್ಯಗುರುಗಳಾದ ಸುರೇಶ ಕುಂಬಾರ ಮಾತನಾಡಿದರು. 

     ಅವರು ನೆಹರು ಯುವ ಕೇಂದ್ರ ಕೊಪ್ಪಳ, ಪ್ರೇರಣಾ ಯುವತಿ ಸೇವಾ ಸಂಸ್ಥೆ(ರಿ) ಕೊಪ್ಪಳ, ಯುವ ಸಾಂಸ್ಕೃತಿಕ ಸಂಘ(ರಿ) ಕೊಪ್ಪಳ, ಹಾಗೂ ವಂದೇಮಾತರಂ ಸೇವಾ ಸಂಘ(ರಿ)ಕೊಪ್ಪಳ, ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದ ವಿಜಯನಗರ ಫ್ರೌಢ ಶಾಲೆಯಲ್ಲಿ ನಡೆದ ೧೫೧ ನೇ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮತ್ತು ಯುವಸಪ್ತಾಹ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು  .

  ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿಗಳಾದ ಮಾಲತಿ.ಎಂ.ಗಾಯಕ್‌ವಾಡ್ ಇವರು ಕಾರ‍್ಯಕ್ರಮವನ್ನು ಉದ್ಘಾಟಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯನಗರ ಪ್ರೌಢಶಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಶೀಲಾ ರವರು ವಹಿಸಿದ್ದರು. ಮುಖ್ಯಅತಿಥಿಗಳಾಗಿ ವಂದೇಮಾತರಂ ಸೇವಾ ಸಂಘದ ಸಂಸ್ಥಾಪನಾಧ್ಯಕ್ಷರಾದ ರಾಕೇಶ ಕಾಂಬ್ಳೇಕರ್, ರಾಷ್ಟ್ರೀಯ ಯುವಪಡೆಯ ಕಾರ್ಯಕರ್ತರಾದ ರೇಷ್ಮಾ ನದಾಫ್, ವಿವೇಕಾನಂದ ಮತ್ತು ವಿಜಯನಗರ ಪ್ರೌಢಶಲೆಯ ವಿಜಯಲಕ್ಷ್ಮೀ, ಪುಷ್ಪಾವತಿ ಇವರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ರಾಷ್ಟ್ರೀಯ ಯುವಪಡೆಯ ಕಾರ್ಯಕರ್ತರಾದ ರೇಖಾ ಪಾತ್ರದ,ಮಾತನಾಡಿದರು ನಿರುಪಣೆಯನ್ನು ವಿಜಯನಗರ ಪ್ರೌಢಶಲೆಯ ಸಹಶಿಕ್ಷಕರಾದ ಸುರೇಖಾ ಪಾಟೀಲ್, ವಂದನಾರ್ಪಣೆಯನ್ನು ಸಹಶಿಕ್ಷಕರಾದ ಶಿವಪ್ಪ ಪಚ್ಚೆ, ನೆರವೆರಿಸಿದರೆಂದು ಷಮ್‌ಷಾದ್ ತಿಳಿಸಿದ್ದಾರೆ.

Advertisement

0 comments:

Post a Comment

 
Top