ಯಲಬುರ್ಗಾ ತಾಲೂಕಿನ ಹಿಂದಿನ ತಹಶಿಲ್ದಾರರಾದ ಇ.ಡಿ.ಬೃಂಗಿಯವರು ಸದಕ್ಕೆ ನಿವೃತ್ತಿಯಾಗಿರುವ ಇವರು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕರ್ತವ್ಯ ಲೋಪ ಎಸೆಗಿದ್ದಾರೆಂದು ಕೊಪ್ಪಳ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಸಲ್ಲಿsiದ ಪ್ರಕಾರ ಕರ್ನಾಟಕದ ಸರ್ಕಾರದ ಆದೇಶ ಸಂಖ್ಯೆ ಆರ್.ಡಿ.೮೯ ಎ.ಡಿ.ಇ ೨೦೧೨ ದಿನಾಂಕ ೦೭/೧೧/೨೦೧೨ರ ಪ್ರಕಾರ ಅವರನ್ನು ಅಮಾನತ್ತುಗೊಳಿಸಲಾಗಿತ್ತು ಹಾಗೂ ಈ ಬಗ್ಗೆ ಇಲಾಖಾ ವಿಚಾರಣೆಯನ್ನು ನೆಡೆಸಿ ವರದಿಯನ್ನು ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಕೊಪ್ಪಳ ಇವರಿಗೆ ದಿನಾಂಕ ೧೨/೦೬/೨೦೧೩ ರಂದು ಆದೇಶಿಸಿತ್ತು. ಆ ಪ್ರಕಾರ ಅಪರಜಿಲ್ಲಾಧಿಕಾರಿಗಳು ಕೊಪ್ಪಳ ಇವರು ವಿಚಾರಣೆಯನ್ನು ನಡೆಸಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಇ.ಡಿ.ಭೃಂಗಿ ಇವರ ಮೇಲಿನ ಆರೋಪಗಳು ಇಲಾಖಾ ವಿಚಾರಣೆಯಲ್ಲಿ ಸಾಬಿತಾಗಿಲ್ಲವೆಂದು ಸರಕಾರಕ್ಕೆ ದಿನಾಂಕ ೧೪/೦೮/೨೦೧೩ ರಂದು ವರದಿ ಸಲ್ಲಿಸಿರುತ್ತಾರೆ. ಈ ವರದಿಯನ್ನು ಆದರಿಸಿ ಓ.ಎನ್.ಆರೇರ ಸರಕಾರದ ಅಧಿನ ಕಾರ್ಯದರ್ಶಿ ಕಂದಾಯ ಇಲಾಖೆ ಬೆಂಗಳೂರು ಇವರು ದಿನಾಂಕ ೦೨/೦೧/೨೦೧೪ ರಂದು ಆದೇಶ ಹೋರಡಿಸಿ ಇ.ಡಿ.ಭೃಂಗಿ ಹಿಂದಿನ ತಹಶಿಲ್ದಾರರು ಯಲಬುರ್ಗಾ ಇವರನ್ನು ದೋಷಾರೋಪಣೆಯಿಂದ ಮುಕ್ತಾರನ್ನಾಗಿಸಿ ಹಾಗೂ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವುದಾಗಿ ಆದೇಶಿಸಿದ್ದಾರೆ.
Home
»
»Unlabelled
» ಯಲಬುರ್ಗಾ ತಾಲೂಕಿನ ಹಿಂದಿನ ತಹಶಿಲ್ದಾರ ಇ.ಡಿ ಭೃಂಗಿ ಆರೋಪ ಮುಕ್ತ
Subscribe to:
Post Comments (Atom)
0 comments:
Post a Comment