PLEASE LOGIN TO KANNADANET.COM FOR REGULAR NEWS-UPDATES







ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹಕ್ಕೆ  ಇದುವರೆಗೂ ಲಕ್ಷ ಲಕ್ಷ ರೊಟ್ಟಿ, ಚಟ್ನಿ, ತರಕಾರಿ ಮಾದಲಿ ಮೊದಲಾದವುಗಳು ಬಂದಿದ್ದಾಗಿದೆ. ಆದರೆ ಈಗ ಕೊಪ್ಪಳದ ಎ.ಪಿ.ಎಂ.ಸಿ ವರ್ತಕರು, ದಲಾಲರು ಹಾಗೂ ಗುಮಾಸ್ತರ ಸಂಘದವರಿಂದ ೩೫ ಕ್ವಿಂಟಾಲ್ ಘಮಘಮಿಸುವ ಬೂಂದಿ ಲಾಡು ಮಹಾದಾಸೋಹಕ್ಕೆ ಅರ್ಪಿಸಲು ಸಿದ್ಧವಾಗಿದೆ.
                           ಒಂದು ವಾರಗಳ ಕಾಲ ನಿರಂತರ ೧೫ ಜನರು ಪಾಕ ಪರಿಣಿತರು ಶ್ರಮವಹಿಸಿ  ೯ ಕ್ವಿಂಟಾಲ್ ಕಡ್ಲಿಬೇಳೆ, ೧೮ ಕ್ವಿಂಟಾಲ್ ಸಕ್ರಿ,  ೮ ಕ್ವಿಂಟಾಲ್ ಎಣ್ಣೆ ಒಡಗೂಡಿ ತಯಾರಿಸಿದ್ದಾರೆ. ಇದರ ಜೊತೆಗೆ ೧೦ ಕೆ.ಜಿ. ವಾಡಂಬಿ, ೧೮ ಕೆ.ಜಿ.ತುಪ್ಪ,೨೦ ಕೆ.ಜಿ ದ್ರಾಕ್ಷಿಯನ್ನು ಬೂಂದಿಯಲ್ಲಿ ಮಿಶ್ರಣ ಮಾಡಿದ್ದಾರೆ.  ಬೂಂದಿ ಇನ್ನಷ್ಟು ಹದಗೊಂಡು ಸುವಾಸನೆಯುಕ್ತವಾಗಲೂ ೨ ಕೆ.ಜಿ.ಏಲಕ್ಕಿ ಹಾಗೂ ಜಾಜಿ ಕಾಯಿ ಮಿಶ್ರಣ ಮಾಡಿರುವದರಿಂದ ಬೂಂದಿ ಸಹಜವಾಗಿ ಸುವಾಸನೆಯಿಂದ ಘಮಘಮಿಸುತ್ತಿದೆ.  ಇದೇ ಸಮಿತಿಯವರು ಕಳೆದ ವರ್ಷ ಮಹಾದಾಸೋಹಕ್ಕೆ ೨೩ ಕ್ವಿಂಟಾಲ್ ಬೂಂದಿ ಅರ್ಪಿಸಿದ್ದರು. ಈ ಸಾರೆ ೩೫ ಕ್ವಿಂಟಾಲ್ ಬೂಂದಿಯನ್ನು ಅರ್ಪಿಸಿ ತಮ್ಮ ಭಕ್ತಿಯ ಪಾರಮ್ಯವನ್ನು ಮೆರೆದಿದ್ದಾರೆ. ಪೂಜ್ಯ ಶ್ರೀಗಳು ಇವರ ಸೇವೆಯನ್ನು ಕೊಂಡಾಡಿ ಆಶಿರ್ವದಿಸಿದರು. ದಿನಾಂಕ ೨೩-೦೧-೨೦೧೩ ರಂದು ಬೆಳಿಗ್ಗೆ ೧೧ ಗಂಟೆಗೆ ಮೆರವಣಿಗೆಯೊಂದಿಗೆ  ಗವಿಮಠ ತಲುಪಿ  ಮಹಾದಾಸೋಹಕ್ಕೆ ಸಮರ್ಪಣೆಯಾಗುತ್ತದೆ. 

Advertisement

0 comments:

Post a Comment

 
Top