PLEASE LOGIN TO KANNADANET.COM FOR REGULAR NEWS-UPDATES

 ಕೊಪಣ  ನಗರವು  ಜೈನಕಾಶೀಯಂದೇ ಪ್ರಸಿದ್ಧವಾಗಿತ್ತು.  ’ತಿರುಳ್ಗನ್ನಡನಾಡು’ ಎಂಬ ಹಿರಿಮೆ  ಕೋಪಣ ಕೊಪಣ ತೀರ್ಥ ಮಹಾಕೊಪಣವೆಂದು  ಹೆಸರು  ಬದಲಿಸುತ್ತಾ ಸಾಹಿತ್ಯದ, ಧಾರ್ಮಿಕ ಕ್ಷೇತ್ರದಲ್ಲಿ  ಮಹತ್ವದ ಐತಿಹಾಸಿಕತೆಗೆ ಪ್ರಸಿದ್ಧದವಾಗಿವೆ.  ಅಂಥಾ ಕ್ಷೇತ್ರಗಳಲ್ಲಿ ನಮ್ಮ  ಕೊಪ್ಪಳ  ಶ್ರೀ ಮ.ನಿಪ್ರ.ಜಗದ್ಗುರು ಶ್ರೀ ಗವಿಸಿದ್ಧೇಶ್ವರರು ನೆಲೆಸಿರುವ ಸನ್ನಿಧಿ ಕೊಪಣಗಿರಿಯು ಸಹ ಪುಣ್ಯ ಕ್ಷೇತ್ರವಾಗಿದೆ.
ಪೂರ್ವದಲ್ಲಿ ೩ನೇಯ ಶತಮಾನದಂದೀಚೆಗೆ  ಕ್ರಿ.ಶ. ೧೨೦೫(೧೨೦೫) ಅನೇಕ ವೃತನೇಮಗಳ  ತಿರ್ಥಂಕರುಗಳು ಸಲ್ಲೇಖ ವೃತಗಳನ್ನು ಮಾಡಿ ಜೈನರ  ಧಾರ್ಮಿಕ ಕೇಂದ್ರ  ತಪಃಶಕ್ತಿಯ  ಅಧ್ಯಾತ್ಮಿಕ ಮುಕ್ತಿ ಕ್ಷೇತ್ರ ಈ ’ತಿರುಳ್ಗನ್ನಡನಾಡು’.
ಕೊಪಣ ನಗರವು ವೀರಶೈವ ಧರ್ಮದ ನೆಲೆವೀಡು ಕ್ರಿ.ಶ. ೧೦೮೨ (೧೦೮೭) ರಲ್ಲಿಯೇ ಈ ಕೊಪಣ ಗಿರಿ ವೀರಶೈವ ಧರ್ಮ ಪ್ರಚಾರಾರ್ಥವಾಗಿ  ಕಾಶೀ ಕ್ಷೇತ್ರ ದಿಂದ ’ಶ್ರೀರುದ್ರಮುನಿ ಶಿವಾಚಾರ್ಯರು  ದಕ್ಷಿಣ ಭಾರತದ ಕಡೆಗೆ  ಬರುತ್ತಾರೆ.  ಹಾಗೆಯೇ  ಬರುತ್ತ  ಕರ್ನಾಟಕ ಪ್ರ್ಯಾಂತ್ಯದ ’ವಿಜಯನಗರ’ ಸಾಮ್ರಾಜ್ಯದ  ತುಂಗಭದ್ರಾ ನದಿ ತೀರದಲ್ಲಿರುವ ಹಂಪಿ ’ವಿರುಪಾಕ್ಷ’ ದೇವಾಲಯಕ್ಕೆ  ಬಂದು ಅಲ್ಲಿಂದ  ನದಿಯ ದಡದಲ್ಲಿರುವ  ಕಂಪ್ಲಿಯಲ್ಲಿ ಸ್ವಲ್ಪ  ಕಾಲದವರಿಗೂ ಇದ್ದು ಅಲ್ಲಿಂದ  ಕೊಪಣ ಸುಕ್ಷೇತ್ರದಲ್ಲಿರುವ  ಶ್ರೀ ಗವಿಮಠವು ಸಾವಿರಾರು  ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ.  ಈ  ಸುಕ್ಷೇತ್ರಕ್ಕೆ  ಶ್ರೀ ರುದ್ರಮುನಿ ಶಿವಾಚಾರ್ಯರು ಬಂದು  ನೆಲೆಸಿ  ವೀರಶೈವ ಧರ್ಮ ಪ್ರಚಾರ ಮಾಡುತ್ತ ಅಧ್ಯಾತ್ಮ, ಸುಸಂಸ್ಕೃತಿಯ  ಕ್ಷೇತ್ರವಾಗಿ  ಅಲ್ಲಿಂದ  ಶ್ರೀಗವಿಮಠದ  ತಪಸ್ವಿಗಳ  ಸ್ವಾಮಿ  ಪರಂಪರೆ. ಶಿವಾಚಾರ್ಯರಿಂದ ೧೮ ಪೀಠಾದಿಪತಿಗಳು ಅಲ್ಲಿಂದ  ಇಲ್ಲಿಯವರೆಗೆ  ಇಂಥ ತಪಸ್ವಿಗಳಿಂದ  ಮೈದಳೆದ  ಶ್ರೀ ಗವಿಮಠವು ’ ಹಸಿದವರಿಗೆ ಅನ್ನ,  ಜ್ಞಾನಕ್ಕೆ ವಿದ್ಯೆ, ಅನಾರೋಗ್ಯದಿಂದ  ಬಳಲುತ್ತಿರುವ ಭಕ್ತರಿಗೆ ಆರೋಗ್ಯ ಭಾಗ್ಯೆ  ಕಲ್ಪಿಸುವ  ತ್ರಿವಿಧ ದಾಸೋಹದ  ಪುಣ್ಯ ಕ್ಷೇತ್ರ ಶ್ರೀ ಗವಿಮಠ ೧೮ ಪೀಠಾಧಿಪತಿಗಳ  ಅವಿರತ  ಸೇವೆ  ತಪಸ್ಸಿನ ಫಲದಿಂದ  ಗವಿಮಠ ನಾಡಿನಲ್ಲಿ  ಹೆಸರಾದ  ಕ್ಷೇತ್ರ , ಜೈನ, ಬೌದ್ಧ , ಶ್ವೇವ, ವೈಷ್ಣವ, ವೀರಶೈವ ಧರ್ಮ ಪ್ರಚಾರ  ಮಾಡುತ್ತದೆ. 
ಪ್ರತಿ ವರ್ಷದಂತೆ  ಕರ್ತೃ ಶ್ರೀ ಗವಿಸಿದ್ಧೇಶ್ವರ ಜಾತ್ರೆ  ಮಹೋತ್ಸವವು ಐದು ದಿವಸ ಮೊದಲೇ ಲಗ್ನದ ಕಾರ್ಯಕ್ರಮದಂತೆ  ನಡೆಯುವದು.  ಜಾತ್ರೆಯ ಪ್ರಾರಂಭದ ದಿವಸ ’ಬಸವ ಪಟ’ ಅಂದರೆ ಶ್ರೀ ಗವಿಸಿದ್ಧೇಶ್ವರರ ಗರ್ಭ ಗುಡಿಯ ಮೇಲೆ  ಐದು ಕಳಸತನ್ನಿರಿಸಿ ಜೋಡೇತ್ತೀನ ಪೂಜೆ  ಮಾಡಿದರೆ  ಚಾಲನೆ ಸಿಕ್ಕ ಹಾಗೆ ಸಮಸ್ತ  ದೈವದವರು ಬಂದು ಈ ಕಾರ್ಯಕ್ರಮ  ನೆಡೆಸುತ್ತಾರೆ. 
                   ನಂತರ ದೇವಿಯ  ಉಡಿ ತುಂಬುವ ಕಾರ್ಯಕ್ರಮ ಈ ಐದು ದಿವಸಗಳಲ್ಲಿ ಒಂದು ದೇವಿಯ ವಾರ  ಮಂಗಳವಾರ ಅಥವಾ ಶುಕ್ರವಾರವಿಡಿದು  ಅನ್ನಪೂರ್ಣೇಶ್ವರಿಯ  ಉಡಿ  ತುಂಬುವ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ  ಇರಕಲ್‌ಗಡಾದ  ಶ್ರೀಮಾತೆ ಸಂತೋಷ ಮಾತ ದೇವಸ್ಥಾನದ  ಅಮ್ಮನವರೇಂದೇ  ಪ್ರಚಲಿತರಿವರ ರತ್ನಮ್ಮ ಮಾತೆಯವರಿಗೆ ಗವಿಮಠದ ವತಿಯಿಂದ  ಅವರಿಗೆ ಲಕ್ಷ್ಮಿ ಅನ್ನಪೂರ್ಣೇಶ್ವರಿ ಪೂಜೆಗಾಗಿ  ಮುತೈದಿತನಕ್ಕೆ  ಇಡುತ್ತಾರೆ.  ಅಮ್ಮನವರು ದೇವಿ ಅನುಗ್ರಹಿತರು.  ಇರಕಲ್‌ಗಡಾದಿಂದ ದೈವದವರೊಂದಿಗೆ ಕಾಲನೆಡಿಗೆ ಯಿಂದ  ಶ್ರೀ ಗವಿಮಠಕ್ಕೆ ಬರುತ್ತಾರೆ.  ದೇವಿಯ ಪೂಜೆ ಮುಗಿಸಿ ಮಂಗಳಾರುತಿ ನೈವೇದ್ಯ ಆದ ನಂತರ  ನೈವೇದ್ಯ ಆದನಂತರ  ದೇವಿಯ  ಅವತಾರವಾಗಿ ದೇವಿಯ ವಾಣಿ ಈ ಮಹಾ ಜಾತ್ರೋತ್ಸವ ನಿರ್ಮಿಘ್ನದಿಂದ  ಸಾಗಿ ’ಅನ್ನದಾಸೋಹವು  ನಿರಂತರಸಾಗಿ  ಜನ ಸಾಗರವನ್ನು ಕಾಪಾಡುತ್ತಾ ಸ್ವಾಮಿಗಳು ಈ ಮಹಾ ಕಾರ್ಯಕ್ರಮವನ್ನು  ನೆಡೆಸಿಕೊಂಡು ಹೋಗಲು  ಅವರ  ಬೆಂಗಾವಲಿರುತ್ತೇನೆಂದು ವಾಗ್ದಾನವನ್ನು  ಸಮಸ್ಥ ದೈವಕ್ಕೆ  ನೀಡಿ  ಆರ್ಶಿವದರಿಸಿ  ಕೈಲಾಸ ಮಂದಿರದಲ್ಲಿರುವ ಮಾತಾ ಅನ್ನಪೂಣೇಶ್ವರಿದೇವಿಗೆ ಉಡಿ ತುಂಬಿ ಈ ಕಾರ್ಯಕ್ರಮವನ್ನು   ಬಂದ ಮುತೈದಿಯರಿಗೆ  ಅಕ್ಕಿ,ಹೂ, ಬಳೆ, ಕುಂಕುಮ ಕಣಗಳನ್ನು ಕೊಟ್ಟು ಆಶಿರ್ವದಿಸುತ್ತಾರೆ. ಇದು ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಆನಂತರ  ಅಡ್ಡ ಪಲ್ಲಕ್ಕಿ ಉತ್ಸವದೊಂದಿಗೆ  ಮಹಾರಥೋತ್ಸದ ಕಳಸ ತರುವ ಕಾರ್ಯಕ್ರಮ ನಂತರ ಮಹಾರಥೋತ್ಸವದ ನಂತರ ಚಿಕ್ಕೇನಕೊಪ್ಪದ ಶ್ರೀ ಗುರವರ್ಯರ ’ಧಿರ್ಘದಂಡ ನಮಸ್ಕಾರ ನಂತರ  ಮದ್ದು ಸುಡುವ ಕಾರ್ಯಕ್ರಮ.
ಹೀಗೆ ಈ ಜಾತ್ರೆ ಮಹೋತ್ಸವದ  ಕಾರ್ಯಕ್ರಮ ನೋಡಿದರೆ ಒಂದು  ಕುಟುಂಬದ  ಮದುವೆಯ  ಕಾರ್ಯಕ್ರಮ ಪದ್ಧತಿ ಪ್ರಕಾರವಾಗಿ ಮಾಡುತ್ತಾರೆ.  ಈ  ಎಲ್ಲ  ಕಾರ್ಯ ಕ್ರಮಗಳ  ಮಾಡುವ ಭಕ್ತಜನ  ಒಳ್ಳೆ ಉತ್ಸಾಹದಿಂದ  ಮಾಡುತ್ತಾರೆ.  ಆ ಭಕ್ತಜನಕ್ಕೆ  ಪ್ರೋತ್ಸಾಹ ಕೊಡುತ್ತಾ  ತಮ್ಮ  ಗುರುವರ್ಯರು ಹಾಕಿಕೊಟ್ಟ   ಮಾರ್ಗದರ್ಶನವನ್ನನುಸರಿಸಿ  ಈಗಿನ ಶ್ರೀ ಅಭಿನವಗವಿಸಿದ್ಧೇಶ್ವರ ಸ್ವಾಮಿಜಿಯವರ ಅವಿರತ  ಪರಿಶ್ರಮದಿಂದ, ಅವರ ಒಂದು ಉತ್ಸಾಹ ಭರಿತ  ನೆಡೆಯಿಂದ ಲಕ್ಷಾಂತರ  ಭಕ್ತರು ಬರುವ ಜಾತ್ರೆ ಶಾಂತತೆ ಶಿಸ್ತುಭದ್ದವಾಗಿ  ಹದಿನೈದು  ದಿವಸ ’ ಪಂಚಬಕ್ಸಾನ್‌ಗಳಿಂದ ಭಕ್ಷಭೋಜ್ಯಪ್ರಸಾದವಾಗಿ ನೆಡೆಯುತ್ತದೆ. ಯೋಗಿ ವರ್ಯನೆಗೆ  ಬೇಸರವೆಂಬುದೇ ಇಲ್ಲಾ ಅವರ ಜೀವನೋತ್ಸಾಹ ಕಂಡು ಇವರೊಬ್ಬ  ಭೂಮಿಗೆ ಅವತರಿಸಿ ಬಂದ ಭಗವಂತ ಅವತಾರಿ  ಪುರುಷ  ಈ  ಕ್ಷೇತ್ರದಲ್ಲಿ ಬಂದು ಪ್ರಸಾದ ಸೇವಿಸಿ ಆಶಿರ್ವದಿಸಿಕೊಂಡ  ಭಕ್ತನೇ ಭಾಗ್ಯವಂತ.
                                                                                                                 ಸರ್ವಮಂಗಳಾ ಜಿ.ಪಾಟೀಲ,                                                                                                                                     ಹಲಗೇರಿ.




Advertisement

0 comments:

Post a Comment

 
Top