PLEASE LOGIN TO KANNADANET.COM FOR REGULAR NEWS-UPDATES

 ನಿಮ್ಮ ಅಗತ್ಯ ಬೇಡಿಕೆಗಳ ಈಡೇರಿಕೆಗೆ ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೊಪ್ಪಳ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಕಟ್ಟಡ ಕಾರ್ಮಿಕರಿಗೆ ಭರವಸೆ ನೀಡಿದರು.
ಅವರು ಭಾನುವಾರ ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ  ಕಟ್ಟಡ ಕಾರ್ಮಿಕರ ತ್ರೈ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಶಾಸಕರ ಅನುಪಸ್ಥಿತಿಯಲ್ಲಿ ತಾವು ಅವರ ಪರವಾಗಿ ತಮ್ಮ ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸುತ್ತಿರುವುದಾಗಿ ಹೇಳಿದ ಅವರು, ತಮ್ಮ ಬೇಡಿಕೆಗಳಾದ ಕಾರ್ಮಿಕರ ಸಂಘಕ್ಕೆ ಜಾಗ ಮತ್ತು ಕಟ್ಟಡ, ತಮ್ಮ ಕಟ್ಟಡ ಕಾರ್ಮಿಕರ ಕಾಲೋನಿ ಮಂಜೂರು ಮಾಡಿಸುವುದು ಸೇರಿದಂತೆ ಸರಕಾರದಿಂದ ಕಾರ್ಮಿಕರಿಗೆ ಸಿಗುವಂತಹ ಎಲ್ಲ ಸೌಲತ್ತುಗಳನ್ನೂ ಕೊಡಿಸುವುದಾಗಿ ಭರವಸೆ ನೀಡಿದರು.
ಅವರು ಮುಂದುವರೆದು ಮಾತನಾಡಿ ಕಟ್ಟಡ ಕಾರ್ಮಿಕರು ಶ್ರಮಜೀವಿಗಳಾಗಿದ್ದು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಮೂಲಕ ತಮ್ಮ ತಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. 
ಇದಕ್ಕೂ ಮೊದಲು ಕಾರ್ಯಕ್ರಮವನ್ನು ಕೊಪ್ಪಳ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್ ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 
ಬಹದ್ದೂರಬಂಡಿ ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಕೆಂಚಪ್ಪ ಬಾರಕೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಈ ಸಂದರ್ಭದಲ್ಲಿ ಬಹದ್ದೂರಬಂಡಿ ಗ್ರಾ.ಪಂ.ಉಪಾಧ್ಯಕ್ಷ ಖಾಜಾ ಹುಸೇನ್ ದೇವಡಿ, ತಾಲೂಕು ದಂಡಾಧಿಕಾರಿ ಚಂದ್ರಕಾಂತ, ಕುರುಬರ ಸಂಘದ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಸೈಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸೈಯದ್, ಗ್ರಾ.ಪಂ.ಸದಸ್ಯರಾದ ನಿಂಗಪ್ಪ ಬಡಿಗೇರ, ಹನುಮಂತಪ್ಪ ಕುರುಬರ್, ಸ್ಯಯದ್‌ಸಾಬ್ ಕಿಲ್ಲೇದಾರ, ರೋಫ ಕಿಲ್ಲೇದಾರ್, ಆರ್.ಐ. ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಆಸೀಫ್ ಹಿರೇಮಸೂತಿ, ಯಮನೂರಸಾಬ್ ಹಿರೇಮಸೂತಿ, ನಗರಸಭೆ ಸದಸ್ಯ  ಮಹೇಶ ಭಜಂತ್ರಿ, ಮಹಮದ್ ಸಾಬ್ ಕಮ್ಮಾರ, ಸಿದ್ದಪ್ಪ ಕಣವಿ, ರಾಜಪ್ಪ ಕೊಟ್ರನಾಯಕ್, ಖಾಸೀಂಸಾಬ್ ಹಾದರಮಗ್ಗಿ, ಹನುಮಂತಪ್ಪ ನಾಯಕ್, ಹೇಮಂತ್ ಗೌಡ ಕುಣಕೇರಿ, ತೋಟಪ್ಪ ಹ್ಯಾಟಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ್, ಉಪಾಧ್ಯಕ್ಷ ಬಾಬಾ ಕಿಲ್ಲೇದಾರ್, ಬುಡನ್‌ಸಾಬ್ ಹರ್ಲಾಪೂರ್, ಮಾಜೀ ಮಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮೌಲಾಸಾಬ್ ದೇವಡಿ, ಮುಖೋಪಾಧ್ಯಾಯ ಶಾಂತವೀರ ಸ್ವಾಮಿ ಗಂಧದಮಠ, ಶಿವಪ್ಪ ಕುರಿ ಮತ್ತಿತರರು ಉಪಸ್ಥಿತರಿದ್ದರು. 
ಕಲಾವಿದರ ಸಂಘದ ತಾಲೂಕಾ ಉಪಾಧ್ಯಕ್ಷ ಹಾಗೂ ಮಾಜಿ ಆಶ್ರಯ ಕಮೀಟಿ  ಸದಸ್ಯ ಚಾಂದ್ ಪಾಷಾ ಕಿಲ್ಲೇದಾರ ಕಾರ್ಯಕ್ರಮ ನಿರೂಪಿಸಿದರು.

Advertisement

0 comments:

Post a Comment

 
Top