PLEASE LOGIN TO KANNADANET.COM FOR REGULAR NEWS-UPDATES

  ಜನಪ್ರತಿನಿಧಿಗಳು ಸರಕಾರದ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸಲು ಶ್ರಮಿಸಬೇಕು. ಅಂದಾಗ ಮಾತ್ರ ಫಲಾನುಭವಿಗಳು ಸರಕಾರದ ಯೋಜನೆಗಳ ಸದುಪಯೋಗಪಡಿಸಿಕೊಂಡಂತಾಗುತ್ತದೆ ಎಂದು ಜಿ. ಪಂ. ಉಪಾಧ್ಯಕ್ಷೆ ಶ್ರೀಮತಿ ಅನ್ನಪೂರ್ಣಮ್ಮ ಕಂದಕುರಪ್ಪ ಹೇಳಿದರು.
ಡಿ.೨೦ರಂದು ಜಿಲ್ಲಾ ವಾರ್ತಾ ಇಲಾಖೆ ಹಾಗೂ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಇವರ ಸಹಯೋಗದಲ್ಲಿ ಸರಕಾರದ ಜನಪರ ಯೋಜನೆಗಳು ಹಾಗೂ ಸಾಧನೆ ಕುರಿತು ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಬೀದಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಂದಕೂರು ಗ್ರಾ. ಪಂ. ಸದಸ್ಯ ಚಂದ್ರಪ್ಪ ಬಾವಿಕಟ್ಟಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮತದಾರ ಕೇವಲ ಮತ ನೀಡಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕೈಕಟ್ಟಿ ಕೂತರೆ ಅವರ ಕರ್ತವ್ಯ ಮುಗಿಯುವುದಿಲ್ಲ, ಬದಲಿಗೆ ಸರಕಾರದ ಆಡಳಿತ ಯಂತ್ರ ಕೆಟ್ಟಾಗ ಅದನ್ನು ರಿಪೇರಿ ಮಾಡುವ ಅಧಿಕಾರವನ್ನೂ ಮತದಾರ ಹೊಂದಿರುತ್ತಾನೆ ಎಂದರು. ಇನ್ನೊಬ್ಬ ಮುಖ್ಯ ಅತಿಥಿ ಶರಣಪ್ಪ ಬಿಜಕಲ್ ಅವರು ಮಾತನಾಡಿ, ಸರಕಾರ ಬಡವರ ಸಲುವಾಗಿ ಹಲವಾರು ಯೋಜನೆಗಳನ್ನು ತಂದಿದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಾರ್ತಾ ಇಲಾಖೆ ಪ್ರತಿ ಗ್ರಾಮಕ್ಕೂ ಬೀದಿ ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದು, ಜನರು ಸರಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡ ರಾಮಣ್ಣ ಬಾವಿಕಟ್ಟಿ ಇದ್ದರು.
ನಂತರ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹಾಗೂ ಜನಪದ ಕಲಾವಿದ ವೈ. ಬಿ. ಜೂಡಿ ಅವರ ನಿರ್ದೇಶನದಲ್ಲಿ ಸರಕಾರದ ಜನಪರ ಯೋಜನೆಗಳಾದ ಅನ್ನಭಾಗ್ಯ, ಅಕ್ಷರಭಾಗ್ಯ, ಕ್ಷೀರಭಾಗ್ಯ, ವಸತಿಬಾಗ್ಯ, ಮನಸ್ವಿನಿ, ಮೈತ್ರಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ನಡೆದ ಬೀದಿ ನಾಟಕದಲ್ಲಿ ಕಲಾವಿದರಾಗಿ ಲಲಿತಾ ಪೂಜಾರ್, ಕು. ಸುಧಾ ಮುತ್ತಾಳ, ಕೊಟ್ರೇಶ ಲೆಕ್ಕಿಮರದ, ಲಿಂಗರಾಜ ಕಮ್ಮಾರ, ಮಲ್ಲನಗೌಡ ಹುಲಕೋಟಿ, ಪ್ರಕಾಶ ರ‍್ಯಾವಣಕಿ, ಫಕೀರಸಾಬ ರ‍್ಯಾವಣಕಿ, ಯಮನೂರಪ್ಪ ಅಭಿನಯಿಸಿದ್ದರು. 

Advertisement

0 comments:

Post a Comment

 
Top