ಕಾಲೇಜಿನ ಪ್ರಾಂಶುಪಾಲರು ಹಲವಾರು ಬಾರಿ ಸಂಪರ್ಕಿಸಿದರೂ ಅವರು ಸರಿಯಾಗಿ ಪ್ರತಿಕ್ರಿಯೆ ತೋರುತ್ತಿಲ್ಲ. ಇದರ ವಿರುದ್ದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗವುದು ಎಂದು ಭೀಮ ಬಸವ ವಿಕಾಸ ಬಳಗ ಅಧ್ಯಕ್ಷ ಹಾಲೇಶ್ ಕಂದಾರಿ ಹೇಳಿದರು. ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಯಾವ ಜನಪ್ರತಿನಿಧಿಯ ಮಾತನ್ನೂ ಕೇಳದ ಕೈಗಾರಿಕೆಗಳು ಈಗ ಸರಕಾರ ನಿರುದ್ಯೋಗ ನಿವಾರಣೆಗಾಗಿ ಮುಂದಾಗಿ ಮಾಡುತ್ತಿರುವ ಮತ್ತು ತಮ್ಮ ಕೈಗಾರಿಕೆಗಳಿಗೆ ಉಪಯುಕ್ತವಾದಂತಹ ಈ ಯೋಜನೆಗೆ ಅಸಹಕಾರ ನೀಡುತ್ತಿದ್ದಾರೆ. ಯಾವುದೇ ಸಾಮಾಜಿ ಬದ್ದತೆ ಇಲ್ಲದ ಈ ಕೈಗಾರಿಕೆಗಳ ಈ ಧೋರಣೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗವಿಸಿದ್ದಪ್ಪ ಗಬ್ಬೂರ್, ಬಸವರಡ್ಡಿ ಶಿವನಗೌಡ್ರು, ರವಿ, ಷರೀಪ್ ಪಿಂಜಾರ್, ಗಣೇಶ ವರತಟನಾಳ, ಪ್ರಭು ರಾಜ್ ಕಿಡದಾಳ, ಶಿವಮೂರ್ತಿ ಹೊಸಮನಿ ಉಪಸ್ಥಿತರಿದ್ದರು.
0 comments:
Post a Comment