PLEASE LOGIN TO KANNADANET.COM FOR REGULAR NEWS-UPDATES

 ಯಾವುದೇ ಒಂದು ಸಮಾಜ ಸಮುದಾಯ ಮುಂದೆ ಬರಬೇಕಾದರೆ ಆ ಸಮಾಜ, ಸಮುದಾಯದ ಯುವಕರು ಮುಂದಾಗಿ ಜನಾಂಗದ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸಂಗಟನಾತ್ಮಕ ಹೋರಾಟದಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂದು ಜಿ.ಪಂ. ಸದಸ್ಯೆ ಡಾ. ಸೀತಾ ಗೂಳಪ್ಪ ಹಲಗೇರಿ ಹೇಳಿದರು.
ಅವರು ರವಿವಾರ ಗೀಣಗೇರಾ ಗ್ರಾಮದ ೩ ನೇ ವಾರ್ಡಿನ ಭಜಂತ್ರಿ ಓಣಿಯಲ್ಲಿ ನೂತನವಾಗಿ ಕೊರವರ ಶ್ರೀ ನೂಲಿ ಚಂದ್ರಯ್ಯ ಯುವಕ ಸಂಘ ಉದ್ಘಾಟಿಸಿ ಮಾತನಾಡಿ, ಸಮುದಾಯದ ಜನಜಾಗೃತಿಗೆ ಯುವಕರ ಸಮುದಾಯದ ಪಾತ್ರ ಬಹುದೊಡ್ಡದು ಎಂದರು. ನಂತರ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದ ಅಖಿಲ ಕರ್ನಾಟಕ ಕೊರಮ್ಮ ಕೂಚಕ ಸಂಘ ಗುಲಬರ್ಗಾ ಘಟಕದ ಅಧ್ಯಕ್ಷ ನೀಲಕಂಠಪ್ಪ ಮಸ್ಕಿ ಮಾತನಾಡಿ,  ಸಮಾಜದ ಅಭಿವೃದ್ಧಿಗೆ ಯುವ ಸಮುದಾಯ ಸರ್ಕಾರದ ಯೋಜನೆಗಳನ್ನು ಹೆಚ್ಚು ಹೆಚ್ಚು ಪಡೆದು ಸಮಾಜದ ಸಧೃಡಗೊಳಿಸಬೇಕೆಂದರು. ಸಂಘಟನೆ ಮೂಲಕ ಯುವಕರು ಸಮುದಾಯಕ್ಕೆ ಹೆಚ್ಚಿನ ಪರಿಶ್ರಮದಿಂದ ದುಡಿಯಬಹುದಾಗಿದೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಮುದಾ

ಯದ ಸಮಸ್ಯೆ ಮತ್ತು ಸವಾಲುಗಳನ್ನು ಸರಕಾರದ ಮುಂದಿಡುವ ಕಾರ್ಯವಾಗಲಿ ಎಂದರು ಕಿವಿ ಮಾತು ಹೇಳಿದರು.
 ಸಂಘಟನೆಯಿಂದ ಮಾತ್ರ ನ್ಯಾಯಸಮ್ಮತ  ಹೋರಾಟ ಹಾಗೂ ಸಮಾಜಕ್ಕೆ ನ್ಯಾಯ ಓದಗಿಸಿಕೋಡಲು ಸಾಧ್ಯವೆಂದು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೊರವರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳಗಾನೂರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗೂಳಪ್ಪ ಹಲಗೇರಿ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮವ್ವ ಪೂಜಾರ, ಸದಸ್ಯರದ ಮಾರುತೆಪ್ಪ ಹಲಗೇರಿ,ಲಕ್ಷ್ಮವ್ವ ಸಿಂದೋಗಿ, ಲಕ್ಷ್ಮಣ ಡೊಳ್ಳಿ, ಬಸವರಡ್ಡಿ,  ಮಾಜಿ ಜಿ.ಪಂ. ಸದಸ್ಯ ರಾಮಣ್ಣ ಭಜಂತ್ರಿ, ಭೀಮಪ್ಪ ಹಾಲಳ್ಳಿ, ಗ್ಯಾನಪ್ಪ ಹಾಲಳ್ಳಿ, ವೆಂಕಟೇಶ ಬಾರಕೇರ, ತಾ.ಪಂ. ಸದಸ್ಯ ನಾಗರಾಜ ಚಳ್ಳೂಳ್ಳಿ, ರೇಣುಕಮ್ಮ ಪೀರನಾಯಕ, ಮಾಜಿ ಜಿ.ಪಂ.ಸದಸ್ಯ ಬಿ.ಎಸ್.ಸುರೇಶಪ್ಪ, ಯಲ್ಲಪ್ಪ, ಸಣ್ಣ ದೇವಪ್ಪ, ದೊಡ್ಡ ಯಮನೂರಪ್ಪ, ಹುಲಗಪ್ಪ, ಫಕೀರಪ್ಪ, ರಾಮಪ್ಪ, ಸಣ್ಣ ಹುಲಗಪ್ಪ, ತಿಮ್ಮಣ್ಣ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ನೂತನ ಸಂಘದ ಗೌರವಾಧ್ಯಕ್ಷ ಯಮನೂರಪ್ಪ ಮಾಸ್ತಾರ ಸೇರಿದಂತೆ  ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top