PLEASE LOGIN TO KANNADANET.COM FOR REGULAR NEWS-UPDATES



ರಾಷ್ಟ್ರ ಕವಿ ಜಿ.ಎಸ್‌.ಶಿವರುದ್ರಪ್ಪ ವಿಧಿವಶ 
ಬೆಂಗಳೂರು, ಡಿ. 23: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪರವರು ಬೆಂಗಳೂರಿನ ಬನಶಂಕರಿಯ ತಮ್ಮ ನಿವಾಸದಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಜಿ.ಎಸ್. ಶಿವರುದ್ರಪ್ಪ(87) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಾಗಿದ್ದಾರೆ. ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.  ಜಿ.ಎಸ್‌.ಶಿವರುದ್ರಪ್ಪರಿಗೆ 2006ರಲ್ಲಿ ರಾಷ್ಟ್ರಕವಿ ಎಂಬ ಬಿರುದು ನೀಡಿ ಗೌರವಿಸಲಾಗಿತ್ತು. 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.   ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇಸಿದ್ದರು. ಜೊತೆಗೆ ಪಂಪ ಪ್ರಶಸ್ತಿ , ಕೆಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದಿದ್ದರು. ಇವರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾದ ನಷ್ಟವುಂಟಾಗಿದೆ.

ಡಾ. ಜಿ. ಎಸ್. ಶಿವರುದ್ರಪ್ಪ  ನಿಧನ  : ಸಂತಾಪ ಸಭೆ
ಕೊಪ್ಪಳ : ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಅವರ ನಿಧನ ಕುರಿತು ಸಂತಾಪ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯಾಲಯದಲ್ಲಿ ಆಯೋಜಿಸಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಬಂಡಾಯ ಕವಿ ಅಲ್ಲಮ ಪ್ರಭು ಬೇಟ್ಟದೂರು ಮಾತನಾಡಿ ಶಿವರುದ್ರಪ್ಪನವರು ಒಬ್ಬ ಪ್ರಭುದ್ದ ಕವಿ ಕನ್ನಡ ಸಾರಸ್ವತ ಲೋಕ್ಕೆ ಅವರ ನಿಧನ ತುಂಬಲಾರದ ನಷ್ಟ ಅವರ ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ನೀಡಬೇಕೆಂದು ಪ್ರಾರ್ಥಿಸುತ್ತೇವೆ.  ಕವಿಗಳು ಗುಣಪಕ್ಷಪಾಥಿಗಳಾಗಿದ್ದು, ಎಲ್ಲರನ್ನು ಸಮಾನ ಮನೋಭಾವದಿಂದ ಕಾಣುವ ಗುಣವುಳ್ಳವರಾಗಿದ್ದು.  ಜ್ಞಾನ ಪೀಠ ಪ್ರುರಸ್ಕೃತ ಕವಿಗಳ ಸಾಲಿನಲ್ಲಿ ನಿಲ್ಲುವ ವ್ಯಕ್ತಿತ್ವ ಬೆಳಸಿಕೊಂಡಿದ್ದರು.  
ನಂತರದಲ್ಲಿ ಮಾತನಾಡಿದ ಅಕ್ಬರ್ ಸಿ. ಕಾಲಿಮಿರ್ಚಿರವರು ಶ್ರೀಯುತರು ಸಾಹಿತ್ಯ ಲೋಕದ ಅದ್ಬುತ ಸಾಹಿತಿಗಳಲ್ಲಿ ಒಬ್ಬರಾಗಿದ್ದರು.  ಗುರು-ಶಿಷ್ಯರ ಸಂಬಂಧಕ್ಕೆ ಕಳಸ ಪ್ರಾಯವಾಗಬಲ್ಲ ಮನೋ ಇಚ್ಛೇ ಹೊಂದಿದ್ದರು.  ಅವರು ಗಳಿಸಿದ ಪ್ರಶಸ್ತಿ ಪುರಸ್ಕಾರಗಳ ನೆನೆಸಿದರು.
ಸಂತಾಪ ಸಭೆಯಲ್ಲಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ವೀರಣ್ಣ ನಿಂಗೋಜಿ, ತಾ.ಅಧ್ಯಕ್ಷರಾದ ಶಿ. ಕಾ. ಬಡಿಗೇರ, ವೀರಕನ್ನಡಿಗ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲರು, ಯುವ ಸಾಂಕ್ಕೃತಿಕ ಸೇವಾ ಸಂಘದ ಅಧ್ಯಕ್ಷರಾದ ಆನಂದ ಹಳ್ಳಿಗುಡಿ, ಶಿಕ್ಷಕರಾದ ಬಸಪ್ಪ ಬಾರಕೇರ, ಎನ್.ಜಾಜೂ, ಭಾಗವಹಿಸಿದ್ದರು.

 ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ನಿಧನಕ್ಕೆ ಸಂಸದ ಶಿವರಾಮಗೌಡ ಸಂತಾಪ
  ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಕೊಪ್ಪಳ ಸಂಸದ ಶಿವರಾಮಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
  ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನದಿಂದ ಕನ್ನಡ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ.  ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ನಾಡೋಜ, ಪಂಪ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಜಿ.ಎಸ್. ಶಿವರುದ್ರಪ್ಪ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಕೊಪ್ಪಳ ಸಂಸದ ಶಿವರಾಮಗೌಡ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.


Advertisement

0 comments:

Post a Comment

 
Top