PLEASE LOGIN TO KANNADANET.COM FOR REGULAR NEWS-UPDATES

 . ನಗರದ ಶ್ರೀ ಮಲಿಯಮ್ಮದೇವಿ ದೇವಸ್ಥಾನ, ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರವಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಗುರು ಶ್ರೀ ಶೇಖಣ್ಣಾಚಾರ್ಯರವರ ೭ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜನೇವರಿ ೩ ಶುಕ್ರವಾರದಂದು ದಶಕಗಳ ಕಾಲ ಆಂಜನೇಯ ಭಕ್ತರಾಗಿ ಸಮಾಜದ ನಾನಾ ಜನರಿಗೆ ತಮ್ಮ ದೈವೀ ಗುಣಗಳಿಂದ ಸಮಸ್ಯೆಗಳಿಗೆ ಪರಿಹಾಗಳನ್ನು ತಿಳಿಸುತ್ತ ಭಕ್ತಿಯಿಂದ ಅಜ್ಜನ ಭಕ್ತರಾದ ಜನರು ಸೇರಿ ಆಚರಿಸುವ ಶ್ರೀ ಶೇಖಣ್ಣಾಚಾರ್ಯರ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿದೆ. ಖ್ಯಾತ ಶಿಲ್ಪ ಕಲಾವಿದರು, ಆಂಜನೇಯ ಭಕ್ತರಾದ ಪ್ರಕಾಶ ಶಿಲ್ಪಿಯವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಬೆಳಿಗ್ಗೆ ೯ ರಿಂದ ೨೫೩೫ ನೇ ನಿತ್ಯ ಮೂರ್ತಿ ಕೆತ್ತನೆ ಸೇವೆ ಆರಂಭಿಸುವರು. ನಂತರ ಅಂದಿನ ಆಂಜನೇಯ ಮೂರ್ತಿಗೆ, ಮೂಲ ಮೂರ್ತಿಗೆ, ಕರ್ತೃ ಗದ್ದುಗೆಗೆ ಪೂಜೆ, ಪಂಚಾಮೃತಾಭಿಷೇಕ ನಡೆಯುವದು, ಮಧ್ಯಾಹ್ನ ೧ ರಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ನಂತರ ಸಂಜೆ ಸರಿಯಾಗಿ ೭ ಗಂಟೆಗೆ ಕಾರ್ತಿಕೋತ್ಸವ ಇಳಿಸುವ ನಿಮಿತ್ಯ ದೀಪಾರಾಧನೆ ಹಮ್ಮಿಕೊಳ್ಳಲಾಗಿದೆ. ದೇವರ ಸನ್ನಿಧಿಯಲ್ಲಿ ದೀಪ ಬೆಳಗಲು ಇಚ್ಛಿಸು
ವವರು ಅರ್ಧ ಗಂಟೆ ಮುಂಚಿತವಾಗಿ ಆಗಮಿಸಿ ಸೇವೆ ಮಾಡಲು ತಿಳಿಸಿದೆ, ಸಕಲ ಭಕ್ತಾದಿಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಅಶೋಕ ಬಜಾರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸೇವೆ ಸಲ್ಲಿಸುವ ಭಕ್ತಾದಿಗಳು ಅಣ್ಣಪ್ಪ ಚಿಲಖಮುಖಿ ಮೊ : ೯೯೪೫೧೩೯೫೭೪, ಪ್ರಹ್ಲಾದ ಮುಧೋಳ ೯೯೮೬೭೨೩೨೭೪ರನ್ನು ಸಂಪರ್ಕಿಸಲು ಕೋರಲಾಗಿದೆ.


Advertisement

0 comments:

Post a Comment

 
Top