PLEASE LOGIN TO KANNADANET.COM FOR REGULAR NEWS-UPDATES

  ವಾಲ್ಮೀಕಿ ಸಮುದಾಯ ವಯಕ್ತಿಕ ಹಿತಾಸಕ್ತಿ ಮರೆತು ಚಿತ್ರದುರ್ಗದಲ್ಲಿ ನಡೆಯುವ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಿ ಎಂದು ಸಮಾಜದ ಜಿಲ್ಲಾಧ್ಯಕ್ಷ ಎಂ. ಹೆಚ್. ವಾಲ್ಮೀಕಿ ಕರೆ ನೀಡಿದರು.
ಅವರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಕ್ಞೇಮಾಭಿವೃದ್ಧಿ ಸಂಘದ ಜಿಲ್ಲಾ ಪದಾಧಿಕಾರಿಗಳ ಕುರಿತು ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸುಮಾರು ೮೦ ಲಕ್ಷದಷ್ಟಿರುವ ವಾಲ್ಮೀಕಿ ಸಮುದಾಯ ವಾಲ್ಮೀಕಿ, ನಾಯಕ, ಬೇಡ, ಬೇಡರ, ತಳವಾರ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಹಗಳಲ್ಲಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ, ಸರಿಯಾದ ರೀತಿಯಲ್ಲಿ ಸಂಘಟಿತರಾದರೆ ಸರಕಾರದ ಎಲ್ಲಾ ಸೌಲಭ್ಯ ಪಡೆದುಕೊಂಡು ಮುಂದೆ ಬರಲು ಸಾಧ್ಯವಾಗುವದು. ಜನೇವರಿ ೧೧ ರಂದು ನಡೆಯುವ ರಾಜ್ಯಮಟ್ಟದ ಸಮಾವೇಶ ಹಾಗೂ ಮುಖ್ಯಮಂತ್ರಿಗಳ ಅಭಿನಂದನಾ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ಮಾತನಾಡಿ ಸಮುದಾಯ ಸಂಘಟನೆ ಹಾಗೂ ಜಾಗೃತಿಗಾಗಿ ಮನೆಮನೆಯಲ್ಲಿ ವಾಲ್ಮೀಕಿ ದರ್ಶನ ಕಾರ್ಯಕ್ರಮ ಮಾಡುವ ಕುರಿತು ತಿಳಿಸಿದರು, ಅದಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಿ ಜನೇವರಿಯಿಂದ ೬ ತಿಂಗಳ ಕಾಲ ೧೨ ಕಾರ್ಯಕ್ಮಗಳನ್ನು ಮಾಡಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮ ಪ್ರತಿ ತಿಂಗಳು ಎರಡನೆ ಮತ್ತು ನಾಲ್ಕನೆ ರವಿವಾರ ಮಾಡಲು ಸಭೆ ನಿರ್ಧರಿಸಿತು. ಇದೇ ಸಂದರ್ಭದಲ್ಲಿ ಶಾಸಕರ ನಿಧಿಯಲ್ಲಿ, ಸರಕಾರದ ವತಿಯಿಂದ ಅಪೂರ್ಣಗೊಂಡಿರುವ ವಾಲ್ಮೀಕಿ ಸಮುದಾಯ ಭವನಕ್ಕೆ ಅನುದಾನ ಕೇಳುವ ಕುರಿತು ಚರ್ಚಿಸಲಾಯಿತು. ಜಿಲ್ಲಾ ನಾಯಕ ನೌಕರ ಸಂಘದ ಅಧ್ಯಕ್ಷ ರಾಜಕುಮಾರ ನಾಯಕ, ಶರಣಪ್ಪ ನಾಯಕ, ನೀಲಪ್ಪ ಭಾವಿಕಟ್ಟಿ, ತಾಲೂಕ ಅಧ್ಯಕ್ಷ ಕೊಟೇಶ ತಳವಾರ, ಜಿಲ್ಲಾ ಮುಖಂಡರಾದ ಪ್ರಭುಗೌಡ ಪಾಟೀಲ, ಮಲ್ಲಿಕಾರ್ಜುನ ಕಲ್ಲನವರ, ದೇವಪ್ಪ ಕಟ್ಟಿಮನಿ, ಈರಪ್ಪ ಹಜಾಳ ಕುಷಟಗಿ, ಸಂಜೀವಪ್ಪ ಸಂಗಟಿ, ಶಿವಪ್ಪ ತಳವಾರ, ಲಕ್ಷ್ಮಣ ಕಲ್ಲನವರ, ನಿಂಗಜ್ಜ ನಾಯಕ, ಶಿವಕುಮಾರ ಶ್ಯಾವಿ ಇತರರು ಇದ್ದರು.

Advertisement

0 comments:

Post a Comment

 
Top