PLEASE LOGIN TO KANNADANET.COM FOR REGULAR NEWS-UPDATES

 ನಗರದ ಹೃದಯ ಭಾಗದಲ್ಲಿರುವ ರಾಜಾಭಾಗ್‌ಸವಾರ ದರ್ಗಾದ ಆಡಳಿತ ಮಂಡಳಿ ಹಾಗೂ ಬಾಡಿಗೆದಾರರ ಮಧ್ಯೆ ಉಂಟಾದ ಸಮಸ್ಯೆಯನ್ನು ಮುಸ್ಲಿಂ ಸಮಾಜದ ದುರೀಣರಾದ ಬಾಷುಸಾಬಖತೀಬ, ಹಾಗೂ ನಿಸಾರ ಕೊಲ್ಕಾರ್ ಇವರ ಮದ್ಯಸ್ಥಿಕೆಯಲ್ಲಿ ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳರವರು ವಾಣಿಜ್ಯ ಸಂಕೀರ್ಣ ನಿರ್ಮಾಣದ ಅಂಗವಾಗಿ ಉಂಟಾದ ವ್ಯಾಜ್ಯವನ್ನು ಬಾಡಿಗೆದಾರರು ಹಾಗೂ ಆಡಳಿತ ಮಂಡಳಿಯ ನಡುವೆ ಸೂಕ್ತ ಸಲಹೆಗಳನ್ನು ನೀಡಿ ಬಾಡಿಗೆದಾರರಿಗೆ ಹಿಂದಿನ ಎಲ್ಲಾ ಬಾಕಿ ಇರುವ ಬಾಡಿಗೆ ಹಣವನ್ನು ಒಂದು ವಾರದೊಳಗೆ ಸಂದಾಯ ಮಾಡಿ ಒಂದು ತಿಂಗಳ ಅವಧಿಯಲ್ಲಿ ಬಾಡಿಗೆದಾರರು ತಮ್ಮ ಡಬ್ಬಿಗಳನ್ನು  ಸ್ವಪ್ರೇರಿತವಾಗಿ ತೆರುವುಗೊಳಿಸಬೇಕೆಂದು ಹೇಳಿದರು. ಈ ನಿರ್ಣಯಕ್ಕೆ ಆಡಳಿತ ಮಂಡಳಿ ಹಾಗೂ ಬಾಡಿಗೆದಾರರು ಒಪ್ಪಿಕೊಂಡು ಈ ನಿರ್ಣಯಕ್ಕೆ ಸಮ್ಮತಿಸಿದರು. ಈ ಸಂದರ್ಬದಲ್ಲಿ ನಗರ ಪಿ.ಎಸ್.ಐ. ಬಿರಾದಾರ್, ಜಿಲ್ಲಾನ್ ಮೈಲೈಕ್, ಕಾಟನಪಾಷಾ, ಮೆಹಬೂಬ್ ಮಚ್ಚಿ, ಇಬ್ರಾಹಿಂ ಅಡ್ಡೆವಾಲೆ, ಜುಬೇರಹುಸೇನಿ, ಅಜೀಜ ಮಾನ್ವೇಕರ್, ಮಾನ್ವಿ ಪಾಷಾ, ನಾಸೀರ್ ಹುಸೇನಿ, ಹುಸೇನಪೀರ ಚಿಕನ್, ಗೌಸು ಹುಸೇನಿ, ಧಾರವಾಡ ರಫಿ, ಸಮೀರ್ ಹುಸೇನಿ, ಹಾಜೀ, ಮೆಹಬೂಬ ಅರಗಂಜಿ, ದಿಡ್ಡಿ ಗಫಾರ್, ಅಯೂಬ್ ಅಡ್ಡೆವಾಲೆ, ಹಾಗೂ ಮುಸ್ಲಿಂ ಸಮಾಜದ ಅನೇಕ ಯುವಕರು ಉಪಸ್ಥಿತರಿದ್ದರೆಂದು ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಅಕ್ಬರ್ ಪಾಷಾ ಪಲ್ಟನ್  ತಿಳಿಸಿದ್ದಾರೆ.  

Advertisement

0 comments:

Post a Comment

 
Top