PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲೆಯ ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ಮಹದೇವ ದೇವಸ್ಥಾನದ ಆವರಣದಲ್ಲಿ ದಿ.೨೯ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ೨ನೇ ಅಖಿಲ ಕರ್ನಾಟಕ ಕವಿ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಜರುಗಲಿದೆ.
ಉದ್ಘಾಟನೆಯನ್ನು ಕಸಾಪ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಅವರು ನೆರವೇರಿಸಲಿದ್ದಾರೆ. ಚಿತ್ರಕಲಾ ಶಿಬಿರದ ಉದ್ಘಾಟನೆಯನ್ನು ಬಳ್ಳಾರಿಯ ಹಿರಿಯ ಕಲಾವಿದ ವಿ.ಟಿ.ಕಾಳೆ ಅವರು ನೆರವೇರಿಸಲಿದ್ದಾರೆ. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಡಾ.ಕೆ.ಬಿ.ಬ್ಯಾಳಿ ಅವರು ಧ್ವಜಾ ಹಸ್ತಾಂತರಿಸುವರು. ಮುನಿಯಪ್ಪ ಹುಬ್ಬಳ್ಳಿ ಅವರು ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿರುಳ್ಗನ್ನಡ ಸಾಹಿತ್ಯ ಕಲೆ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಡಾ.ಮಹಾಂತೇಶ ಮಲ್ಲನಗೌಡ, ವಿಠ್ಠಪ್ಪ ಗೋರಂಟ್ಲಿ, ರವಿತೇಜ ಅಬ್ಬಿಗೇರಿ, ಇಟಗಿ ಶಿಕ್ಷಕ ಬಿ.ಎಂ.ಹಳ್ಳಿ, ಪತ್ರಕರ್ತರಾದ ಬಸವರಾಜ ಬಿನ್ನಾಳ, ಅಲ್ಲಾವುದ್ದೀನ್ ಯಮ್ಮಿ, ಯಲಬುರ್ಗಾ ತಾಲೂಕ ಕಸಾಪ ಅಧ್ಯಕ್ಷ ಶಿವಮೂರ್ತಿ ಇಟಗಿ, ವ್ಯಂಗ್ಯಚಿತ್ರ ಕಲಾವಿದ ಬದರಿನಾಥ ಪುರೋಹಿತ್, ಚಿತ್ರಕಲಾ ಶಿಕ್ಷಕ ವಿ.ಕೆ.ಒಂಡಗೊಡಿಮಠ ಅವರು ಆಗಮಿಸಲಿದ್ದಾರೆ. ಡಾ.ಮ್ತಾಜ್ ಬೇಗಮ್, ವಿಮಲಾ ಇನಾಂದಾರ್, ಸ್ನೇಹಲತಾ ಜೋಷಿ, ಉಮೇಶ ಅಬ್ಬಿಗೇರಿ, ಎ.ಪಿ.ಅಂಗಡಿ, ಈಶಪ್ಪ ಮಳಗಿ, ಶರಣಗೌಡ ಯರದೊಡ್ಡಿ, ಎಸ್.ಜಡೆಯಪ್ಪ, ಶಾಂತವೀರ ಬನ್ನಿಕೊಪ್ಪ, ಶ್ರೀನಿವಾಸ ಚಿತ್ರಗಾರ, ಮಲ್ಲಪ್ಪ ಮೆಟ್ರಿ, ಮಲ್ಲಪ್ಪ ಒಡೆಯರ್, ನಟರಾಜ ಸೋನಾರ್, ವೈ.ಬಿ.ಜೂಡಿ, ಗವಿಸಿದ್ದಪ್ಪ ಬಾರಕೇರ, ಉಮೇಶ ಪೂಜಾರ  ಮೊದಲಾದ ಕವಿಗಳು ಭಾಗವಹಿಸುವರು.
ಸಂಜೆ ೬.೦೦ ಗಂಟೆಗೆ ಕವಿ ಸಮ್ಮೇಳನದ ಸಮಾರೋಪ ಮತ್ತು ಸಾಂಸ್ಕೃತಿಕೋತ್ಸವ ಕಾರ್ಯಕ್ರಮ ಜರುಗಲಿದ್ದು, ಗುಲ್ಬರ್ಗಾದ ನಾಲ್ವಾರ್ ಸಂಸ್ಥಾನ ಮಠದ ಶ್ರೀ ತೋಂಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಹೆಚ್.ಕೆ.ಪಾಟೀಲ್ ಅವರು ನೆರವೇರಿಸಲಿದ್ದಾರೆ. ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ದೊಡ್ಡನಗೌಡ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇಟಗಿ ಉತ್ಸವದ ಮಹೇಶ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆಯನ್ನು ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಬಿಡುಗಡೆಗೊಳಿಸುವರು. ಹೈದರಾಬಾದ್ ಕರ್ನಾಟಕ ಮುಂದೇನು ? ವಿಷಯ ಕುರಿತು ಹೋರಾಟಗಾರ ರಾಘವೇಂದ್ರ ಕುಷ್ಟಗಿ, ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್, ಅಗ್ನಿ ಪತ್ರಿಕೆ ಸಂಪಾದಕ ರಾಜಶೇಖರ ಹತಗಂದಿ, ಗುಲಬರ್ಗಾ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮನ್ನೂರು, ಬೊಮ್ಮನಹಳ್ಳಿ ಸುದ್ದಿ ಸಂಪಾದಕ ನಾಗಯ್ಯಸ್ವಾಮಿ ಅವರು ಉಪನ್ಯಾಸ ನೀಡುವರು. ಮುನಿಯಪ್ಪ ಹುಬ್ಬಳ್ಳಿ ಅವರು ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಗೋನಾಳ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕರಾದ ಸ್ವಾತಿ ಅಂಬರೀಶ್, ಜೆಡಿಎಸ್ ಮುಖಂಡ ಪ್ರದೀಪಗೌಡ ಮಾಲಿ ಪಾಟೀಲ್, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಹೆಚ್.ಎಸ್.ಪಾಟೀಲ್, ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕ ಎ.ಟಿ.ಜಯಪ್ಪ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ, ಹಿರಿಯ ವಕೀಲರಾದ ಸಂಧ್ಯಾ ಮಾದಿನೂರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ಆರ್.ನವಲಿ ಹಿರೇಮಠ, ಬಸವರಾಜ ಪುರದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೊಟ್ರಪ್ಪ, ಅಕ್ಕಿಗಿರಣಿ ಮಾಲೀಕರ ಸಂಘದ ಖಜಾಂಚಿ ಕೆ.ಕಾಳಪ್ಪ, ಕರವೇ ಮುಖಂಡರಾದ ಶಿವರಾಜ, ಕೆ.ಎಂ.ವಿರೇಶ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭು ಕಿಟದಾಳ, ಬಿಜಾಪುರದ ತೆಂಕಣಗಾಳಿ ಸಂಪಾದಕ ಎ.ಜಿ.ಮಲ್ಲಿಕಾರ್ಜುನ ಮಠ, ಅನಂತ ಶಾರದಾ ಸಂಪಾದಕರಾದ ಎಂ.ಅನಂತಕುಮಾರ, ರಾಯಚೂರು ಪತ್ರಕರ್ತ ಭೀಮರಾಯ ಹದ್ದಿನಾಳ, ಪಠವಾದಿ ಪತ್ರಿಕೆ ಸಂಪಾದಕ ಭೋಜರಾಜ ಬಳ್ಳಾರಿ, ಬಿಜೆಪಿ ವಕ್ತಾರ ಸಂಗಮೇಶ ಡಂಬಳ, ನಗರಸಭೆ ಮಾಜಿ ಅಧ್ಯಕ್ಷ ಸುರೇಶ ಜಿ.ದೇಸಾಯಿ, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ನಗರಸಭೆ ಸದಸ್ಯರಾದ ವಿಜಯಾ ಹಿರೇಮಠ, ಕರವೇ ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ್, ಜಯಕರ್ನಾಟಕ ಸಂಘಟನೆಯ  ವಿಜಯಕುಮಾರ ಕವಲೂರ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಅಂದು ರಾತ್ರಿ ೧೦.೦೦ ಗಂಟೆಗೆ ಇಟಗಿಯ ಶಿವು ಕಂಚಗಾರ ಇವರಿಂದ ಮಿಮಿಕ್ರಿ ಮತ್ತು ಹಾಸ್ಯೋತ್ಸವ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಉತ್ಸವದ ಸಂಚಾಲಕರಾದ ಮಹೇಶಬಾಬು ಸುರ್ವೆ ಅವರು ಸರ್ವರನ್ನು ಸ್ವಾಗತಿಸಿದ್ದಾರೆ.

Advertisement

0 comments:

Post a Comment

 
Top