.jpg)
ಮೌಢ್ಯಪ್ರತಿಬಂಧಕ ಹಾಗೂ ಅಡ್ಡಪಲ್ಲಕ್ಕಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಜನರಿಗೆ ಉತ್ತಮ ಶಿಕ್ಷಣ ನೀಡುವುದು ಮತ್ತು ನೈಜ ತಿಳುವಳಿಕೆಯನ್ನು ನೀಡುವುದರಿಂದ ಇವೆಲ್ಲವನ್ನೂ ನಿವಾರಿಸಬಹುದು. ಪಲ್ಲಕ್ಕಿ ಹೊರುವವರು ಇರುವವರೆಗೆ ಸವಾರಿ ಮಾಡುವವರು ಇದ್ದೇ ಇರುತ್ತಾರೆ ಎಂದರು.
ಕೇಂದ್ರ ಸರಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಹೇಳಿದ್ದು - ಮುತ್ತಿನ ಗಿಣಿ ಮುದುಕಾಗಿ ಮುತ್ತಾಯಿತು- ಇದರ ಅರ್ಥವನ್ನು ಬಿಡಿಸಿ ಹೇಳಲು ಶ್ರೀಗಳು ನಿರಾಕರಿಸಿದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಸದಸ್ಯರಾದ ಅನಿಕೇತ ಅಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment