ಗ್ರಾಮೀಣ ಪ್ರದೇಶದ ಕವಿಗಳು , ಕಲಾವಿದರು, ಸಂಗೀತಗಾರರಿಗೆ ಸರ್ಕಾರದ ವತಿಯಿಂದ ಆರ್ಥಿಕ ಬೆಂಬಲ ನೀಡುವ ಅಗತ್ಯವಿದೆ. ಈ ಹಿಂದೆ ಕವಿಗಳಿಗೆ ರಾಜರು ರಾಜಾಶ್ರಯ ಕೊಟ್ಟಿದ್ದರು. ಇದರಿಂದಾಗಿ ಅಪಾರವಾದ ಸಾಹಿತ್ಯ ಭಂಡಾರ ಸೃಷ್ಠಿಯಾಗಿದೆ. ಇಂದು ಕೂಡಾ ನಾಡು, ನುಡಿ , ಭಾಷೆ, ಸಂಸ್ಕೃತಿಗಾಗಿ ದುಡಿಯುತ್ತಿರುವ ಕವಿಗಳಿಗೆ ಸರ್ಕಾರದ ವತಿಯಿಂದ ಆರ್ಥಿಕ ಬೆಂಬಲದ ಅಗತ್ಯವಿದೆಯೆಂದು ಕನಕಗಿರಿಯ ಕವಿ ಅಲ್ಲಾಗಿರಿರಾಜ ಮಾತನಾಡಿದರು.
ಅವರಿಂದು ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕ ಘಟಕಗಳು ಆಯೋಜಿಸಿರುವ ರಾಜ್ಯೋತ್ಸವ ನಿಮಿತ್ಯ ನಡೆಯುತ್ತಿರುವ ಕಾರ್ಯಕ್ರಮಗಳ ಸಮಾರೋಪ ಸಭೆಯಲ್ಲಿ ಮಾತನಾಡಿದರು. ಮುಂದುವರೆದು ಮುಂದಿನ ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂಭ್ರಮಾಚಾರಣೆಯ ಸಂದರ್ಭದಲ್ಲಿ ಕನ್ನಡ ಕವಿಗಳ ಪ್ರಕಟಣೆಗೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಬೇಕು. ಕವಿಗಳ ಬದುಕು ಕಟ್ಟುವಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದರು. ಅತಿಥಿಗಳಾಗಿ ಶಿವಾನಂದ ಹೊದ್ಲೂರ. ಕೆ.ಸತ್ಯನಾರಾಯಣರಾವ್, ಶರಣಬಸಪ್ಪ ದಾನಕೈ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವೀರಪ್ಪ ನಿಂಗೋಜಿ ವಹಿಸಿ ಮಾತನಾಡಿ ಕನ್ನಡ ನಾಡು , ನುಡಿ ಜಾಗೃತಿಗಾಗಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಆದೇಶದನ್ವಯ ನವಂಬರ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಾ ತಾಲೂಕಿನಾಧ್ಯಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗಿವೆ. ಸಹಕರಿಸಿದ ಎಲ್ಲರಿಗೂ ಅಬಿನಂಧನೆಗಳೆಂದರು. ವೇದಿಕೆಯಲ್ಲಿ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್,ಹುಲುಗಪ್ಪ ಕಟ್ಟಿಮನಿ, ರಾಜು ಜಾಧವ, ಸಂತೋಷ ದೇಶಪಾಂಡೆ ಉಪಸ್ಥಿತರಿದ್ದರು. ಸ್ವಾಗತ ಪರಶುರಾಮ ಮ್ಯಾಳಿ, ಪ್ರಾಸ್ತಾವಿಕ, ಶಿ.ಕಾ.ಬಡಿಗೇರ, ನಿರೂಪಣೆ ಡಾ.ಪ್ರಕಾಶ ಬಳ್ಳಾರಿ ನೆರವೇರಿಸಿದರು.
0 comments:
Post a Comment