PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮೈಸೂರ ಹುಲಿ ಟಿಪ್ಪು ಸುಲ್ತಾನ ಜಯಂತಿಯನ್ನು ಆಚರಿಸಲಾಯಿತು.  ಕಾರ‍್ಯಕ್ರಮಕ್ಕೆ ಮೈಸೂರ ಹುಲಿ ಟಿಪ್ಪು ಸುಲ್ತಾನರವರ ಭಾವಚಿತ್ರಕ್ಕೆ ಎಂ.ಡಿ.ಜಿಲಾನ್ ಜಿಲ್ಲಾಧ್ಯಕ್ಷರು ಟಿಪ್ಪು ಸುಲ್ತಾನ ಸಂಘ ಇವರು ಪುಷ್ಪಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಟಿಪ್ಪು ಸುಲ್ತಾನ್ ರ ಆದರ್ಶ ಗುಣಗಳು,ಅವರಲ್ಲಿದ್ದ ದೈರ್ಯ,ಸಾಹಸಗಳು ನಮ್ಮ ನಿಮ್ಮೆಲ್ಲರಲ್ಲಿ ಬೆಳೆಸಿಕೊಂಡು ಸಮಾಜದ ಏಳಿಗೆಗಾಗಿ ಹೋರಾಡಬೇಕು. ಅವರ ದೇಶಪ್ರೇಮ,ಕನ್ನಡ ಪ್ರೇಮ ಎಲ್ಲರಲ್ಲಿ ಮೂಡಿಬರಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಅತ್ತನೂರ - ಟಿಪ್ಪು ಸುಲ್ತಾನರ ಬಾಲ್ಯ ಜೀವನ ಮತ್ತು ಹೋರಾಟ ಧೀರತೆ,ಶೌರ‍್ಯ,ಪರಾಕ್ರಮ,ರಾಷ್ಟ್ರಪ್ರೇಮದ ಕಿಚ್ಚು ಕುರಿತು ವಿವರಣಾತ್ಮಕವಾಗಿ ಮಾತನಾಡಿದರು.
ಕಾರ‍್ಯಕ್ರಮದಲ್ಲಿ ಶಿವಕುಮಾರ ಹಾಗೂ ಇತರ ಶಿಕ್ಷಕರು ಮಾತನಾಡಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ವಹಿಸಿದ್ದರು. ವೇದಿಕೆಯ ಮೇಲೆ ರವಿ ಸೋನಾರ, ಅಮ್ಜದ್ ಅಲಿ ಉಪಸ್ಥಿತರಿದ್ದರು.
ಕಾರ‍್ಯಕ್ರಮ ನಿರೂಪಣೆ ಅನಿತಾ ಸಿದ್ನೆಕೊಪ್ಪ,ಸ್ವಾಗತ ಶಿವಕುಮಾರ ಪಾಟೀಲ್  ಹಾಗೂ ಆಶಾ ಡಿ ವಂದಿಸಿದರು.

Advertisement

0 comments:

Post a Comment

 
Top