ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಚಂದನಾ ದೇಸಾಯಿ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು, ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಶಾಲಾ ಪ್ರಾಚಾರ್ಯ ಎ. ಧನಂಜಯನ್, ಹಿರಿಯ ಶಿಕ್ಷಕ ಎಸ್.ಸಿ. ಹಿರೇಮಠ ಉದ್ಘಾಟನೆ ಮಾಡಿದರು. ಕನಕದಾಸರ ಶ್ರೇಷ್ಠತೆ ಮತ್ತು ಮೌಲ್ಯಗಳ ಕುರಿತಾಗಿ ಶಾಲಾ ವಿದ್ಯಾರ್ಥಿಗಳಾದ ಅಖಿಲಾ, ಕಿರಣ, ಮಂಜುನಾಥ ಎನ್., ಶಾಲಾ ಶಿಕ್ಷಕರಾದ ಮಾರುತಿ ಚಾಮಲಾಪುರ, ಸುನೀಲ್, ವಿ.ಎಸ್. ಕಮ್ಮಾರ್ ಮತ್ತು ಮಹೇಶ ಬಳ್ಳಾರಿ ಮಾತನಾಡಿದರು.
ಹಿರಿಯ ಶಿಕ್ಷಕ ಎಸ್.ಸಿ. ಹಿರೇಮಠ ಮಾತನಾಡಿ ಕನಕದಾಸರ ಜೀವನ ಮೌಲ್ಯಗಳು ನಮಗೆ ದಾರಿದೀಪವಾಗಿವೆ ಎಂದು ಅಭಿಪ್ರಾಯ ಪಟ್ಟರೆ, ಶಾಲಾ ಪ್ರಾಚಾರ್ಯ ಎ. ಧನಂಜಯನ್ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಮೊದಲು ಆದ್ಯತೆ ನೀಡುವ ಕುರಿತಾಗಿ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.
ವೇದಿಕೆಯ ಮೇಲೆ ಶಿಕ್ಷಕರಾದ ಬಿ. ಪ್ರಹ್ಲಾದ್, ಡಿ.ಎಚ್. ಕುರಿ, ಶ್ರೀಮತಿ ಭಾಗ್ಯಲಕ್ಷ್ಮೀ, ರಾಜು ಮಾಯಾಚಾರಿ ಉಪಸ್ಥಿತರಿದ್ದರು. ಕನಕದಾಸ, ಅವರ ಗುರು ವ್ಯಾಸರಾಯ ಮತ್ತು ಶ್ರೀ ಕೃಷ್ಣರ ಅವತಾರದ ವೇಷಭೂಷಣದಲ್ಲಿನ ಮಕ್ಕಳು ಗಮನ ಸೆಳೆದರು. ಆರಂಬದಲ್ಲಿ ಫಜಲುನ್ನಿಸಾ ಬೇಗಂ ಸ್ವಾಗತಿಸಿದರೆ, ಕಾರ್ಯಕ್ರಮದ ನಿರೂಪಣೆಯನ್ನು ಪೂರ್ವಿ ಜೈನ್ ಮಾಡಿದರು. ಕೊನೆಯಲ್ಲಿ ಅಶ್ವಿನಿ ವಂದಿಸಿದರು.
0 comments:
Post a Comment